ಬಾಗಲಕೋಟೆ 27: ದಿ.ಅನಂತಕುಮಾರ ಅವರು ಸದಾ ಪರಿಶ್ರಮಜೀವಿ ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ದರು.ಆದರೆ ಅವರು ಇಷ್ಟು ಬೇಗ ನಮ್ಮನ್ನು ಅಗಲಿರುವುದು ದು:ಖದ ಸಂಗತಿ ಎಂದು ಶಾಸಕ ವೀರಣ್ಣ ಚರಂತಿಮಠವರು ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ದಿ.ಅನಂತಕುಮಾರ ಅವರಿಗೆ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅನಂತಕುಮಾರ ಆರೋಗ್ಯ ಕೆಟ್ಟಿದ್ದರೂ ಒಂದು ದಿನವೂ ವಿಶ್ರಾಂತಿಯನ್ನು ತೆಗೆದುಕೊಳ್ಳದೇ ಸಂಸತ್ತಿನಲ್ಲಿಯೂ ಲವಲವಿಕೆಯಿಂದ ಭಾಗವಹಿಸುತ್ತಿದ್ದರೂ ಕೊನೆಯವರೆಗೂ ಅವರು ಕರ್ತವ್ಯ ಮಾಡಿಕೊಂಡು ಪರಿಶ್ರಮ ಜೀವಿಯಾಗಿಯೇ ನಮ್ಮೆಲ್ಲರನ್ನು ಅಗಲಿದರು ಎಂದು ಹೇಳಿದರು. ಕನರ್ಾಟಕದ ಸಂಸದರ ಪೈಕಿ ಅನಂತಕುಮಾರ ಅವರು ಸದಾ ಕ್ರೀಯಾಶೀಲರಾಗಿರುತ್ತಿದ್ದರು ರಾಜ್ಯದಿಂದ ಯಾರದರೂ ದೆಹಲಿಗೆ ತೆರಳಿದ್ದರೆ ಅವರ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಿತ್ತಿದ್ದ ನಾಯಕರಲ್ಲಿ ಇಂತಹವರ ಸಿಗುವುದು ಅಪರೂಪ ಎಂದರು. ಅನಂತಕುಮಾರ ಕೇಂದ್ರ ಸಚಿವರಾಗಿ, ಸಂಸದರಾಗಿ ಹಾಗೂ ಬಿಜೆಪಿ ಹಿರಿಯ ಮುಖಂಡರಾಗಿದ್ದರೂ ಅವರಲ್ಲಿ ಯಾವುದೇ ಅಹಂ ಇರಲಿಲ್ಲ. ಪಕ್ಷವನ್ನು ಯಾವ ರೀತಿ ಬೆಳೆಸಬೇಕು, ಪಕ್ಷವನ್ನು ಸಂಘಟನೆ ಮಾಡುವ ಶಕ್ತಿಯನ್ನು ಇವರಲ್ಲಿ ಹೆಚ್ಚು ಕಂಡಿದ್ದೇವೆ ಎಂದರು.
ಡಾ.ಸಿ.ಎಸ್.ಪಾಟೀಲ ಮಾತನಾಡಿ, ದಿ.ಅನಂತಕುಮಾರ ಅವರು ಅಗಾಧ ನೆನಪಿನ ಶಕ್ತಿಯನ್ನು ಹೊಂದಿದ್ದರು.ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ಗೆ ಭದ್ರ ಬುನಾದಿಯನ್ನು ಹಾಕಿದವರಲ್ಲಿ ಇವರು ಒಬ್ಬರಾಗಿದ್ದರು. ಎಬಿವಿಪಿ ಸಕ್ರೀಯಾ ಕಾರ್ಯಕರ್ತನಾಗಿ ಬಾಗಲಕೋಟೆಯಲ್ಲಿ ಹಲವು ದಿನಗಳ ಕಾಲ ಹೋರಾಟ ಮತ್ತು ಸಂಘಟನೆ ಮಾಡಿದ್ದನ್ನು ನೆನಪಿಸಿಕೊಂಡರು.
ಕೇಂದ್ರ ರಸಗೊಬ್ಬರ ಖಾತೆ ಸಚಿವರಾಗಿ ಕಾರ್ಯ ಮಾಡಿದ ರೀತಿಯಂತ ಶ್ಲಾಘನೀಯ.ಕಡಿಮೆ ದರದಲ್ಲಿ ಗುಣಮಟ್ಟದ ಗೊಬ್ಬರ ರೈತರಿಗೆ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿಗೆಂತೂ ರೈತರು ರಸಗೊಬ್ಬರಕ್ಕಾಗಿ ಯಾವುದೇ ಹೋರಾಟವನ್ನು ಮಾಡಿದ್ದನ್ನು ನಾವು ಕಾಣಲಿಲ್ಲ.ರಸಗೊಬ್ಬರ ರೈತರಿಗೆ ಕಡಿಮೆ ದರದಲ್ಲಿ ಮುಟ್ಟಿಸುವಲ್ಲಿ ಕ್ರಾಂತಿಯನ್ನೇ ಮಾಡಿದರು.ಇನ್ನೂ ದೇಶದಲ್ಲಿ ಲಕ್ಷಾಂತರ ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕಡಿಮೆ ವೆಚ್ಚದಲ್ಲಿ ಜನಔಷಧಿ ಸಿಗುವಂತೆ ಮಾಡುವಲ್ಲಿ ಇವರೂ ಒಬ್ಬ ರುವಾರಿಯಾಗಿದ್ದರು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಶ್ರೀನಿವಾಸ ಬಳ್ಳಿ, ಜಿ.ಎನ್.ಪಾಟೀಲ, ಈರಪ್ಪ, ಬಸವರಾಜ ಯಂಕಂಚಿ, ಐಕೂರ, ಅಶೋಕ ಲಿಂಬಾವಳಿ,ಅಶೋಕ ಲಾಗಲೋಟಿ, ಬಸಲಿಂಗಪ್ಪ ನಾವಲಗಿ, ರಾಜು ರೇವಣಕರ, ರಾಜು ನಾಯ್ಕರ, ಗುಂಡೂ ಸಿಂಧೆ, ಬಸವರಾಜ ಅವರಾಧಿ, ಸಂಗಮೇಶ ಹಿತ್ತಲಮನಿ, ಕಲಾವತಿ ರಾಜೂರ, ರಾಧಾ ಆಕಳವಾಡಿ ನಗರಸಭೆ ಸದಸ್ಯರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.