ಲೋಕದರ್ಶನ ವರದಿ
ಬೈಲಹೊಂಗಲ: ದೇಶದಲ್ಲಿ ಸರ್ವಶಿಕ್ಷಣ ಅಭಿಯಾನದ ಮೂಲಕ ಪ್ರತಿಯೊಂದು ಮಗುವಿಗೂ ಉಚಿತ ಶಿಕ್ಷಣ ನೀಡುವ ಮೂಲಕ ಹೊಸ ಕ್ರಾಂತಿ ಮಾಡಿದ ರಾಷ್ಟ್ರ ಕಂಡ ಅಟಲಜಿ ಒಬ್ಬ ಮೇರು ವ್ಯಕ್ತಿತ್ವದ ನಾಯಕರಾಗಿದ್ದಾರೆಂದು ಜಿಲ್ಲಾ ಭಾಜಪ ಗ್ರಾಮೀಣ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಅವರು ತಮ್ಮ ಕಾಯರ್ಾಲಯದಲ್ಲಿ ಬುಧವಾರ ಅಜಾತ ಶತ್ರು ದಿವಂಗತ, ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಶ್ರೇಷ್ಠ ಜನನಾಯಕರಾಗಿ ತಮ್ಮ ಅಧಿಕಾರದ ಸೇವೆಯಲ್ಲಿ ಕೈಗೊಂಡ ಸಮಗ್ರ ಅಭಿವೃದ್ದಿ ಯೋಜನೆಗಳಿಂದ ಜನ ಮಾನಸವನ್ನು ಗೆದ್ದಿದ್ದರು. ಇಡೀ ಪ್ರಪಂಚವೇ ಭಾರತವನ್ನು ಅತ್ಯಂತ ಪ್ರೀತಿ, ಗೌರವದಿಂದ ಕಾಣುವಂತೆ ಮಾಡಿ ದೂರದೃಷ್ಟಿ ಉಳ್ಳವರಾಗಿ ರಾಷ್ಟ್ರದ ಕೀತರ್ಿ ಹೆಚ್ಚಿಸಿದ್ದರು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಅವರ ಸನ್ಮಾರ್ಗದಲ್ಲಿ ಸಾಗಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗುರುಪಾದ ಕಳ್ಳಿ ಮಾತನಾಡಿ, ಜಗತ್ತಿನ ವಿಜ್ಞಾನ ಲೋಕದಲ್ಲಿ ಭಾರತದ ಶಕ್ತಿ ತೋರಿಸಿ ಜೈ ಜವಾನ್, ಜೈ ಕಿಸಾನ್ ಎಂಬ ಉಕ್ತಿಗೆ ಜೈ ವಿಜ್ಞಾನ ಎಂಬ ಸಾಲುಗಳನ್ನು ಜೋಡಿಸಿದ ಆ ಘಳಿಗೆಯಲಿ ಈ ಅಭೂತಪೂರ್ವ ಯಶಸ್ವಿಯಿಂದ ವಿಚಲಿತರಾದ ಅಮೇರಿಕಾದಂತಹ ದೈತ್ಯ ರಾಷ್ಟ್ರಗಳು ಅಣು ಪರೀಕ್ಷೆ ಕಾಯರ್ು ವಿರುದ್ದ ಹರಿ ಹಾಯ್ದಿದ್ದಲ್ಲದೇ ಕೆಲ ರಾಷ್ಟ್ರಗಳು ಭಾರತಕ್ಕೆ ಯಾವ ಸಹಕಾರವನ್ನು ನೀಡದಂತೆ ಆಥರ್ಿಕ ನಿರ್ಭಂಧ ಹೇರಿದ ಕಾಲದಲ್ಲಿಯೂ ಕೂಡಾ ಆಥರ್ಿಕತೆಯ ದೃಷ್ಟಿಯಿಂದ ನಮ್ಮನ್ನು ಯಾರೂ ಕೂಡಾ ದುರ್ಭಲರಾಗಿಸಲು ಅಸಾಧ್ಯವೆಂದು ಗುಡುಗಿದ್ದು ಅವರ ಧೈರ್ಯ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ತಾ.ಪಂ ಸದಸ್ಯ ಬಸನಗೌಡಾ ಪಾಟೀಲ, ಸಂಜಯ ಗಿರೆಪ್ಪಗೌಡರ, ರಾಜು ನರಸಣ್ಣವರ, ಮಲ್ಲನಗೌಡಾ ಗೌಡತಿ, ಬಸವರಾಜ ಸುತಗಟ್ಟಿ, ಯಲ್ಲಪ್ಪ ನರೇಂದ್ರ, ಈರಣ್ಣ ನರಸಣ್ಣವರ ಮುಂತಾದವರು ಉಪಸ್ಥಿತರಿದ್ದರು.