ಜಿಲ್ಲಾಡಳಿತದಿಂದ ಸಡಗರದ ಗಣರಾಜೋತ್ಸವ ಆಚರಣೆಗೆ ನಿರ್ಧಾರ

ಕೊಪ್ಪಳ 16: ಇದೇ ಜನವರಿ. 26 ರಂದು ಕೊಪ್ಪಳ ಜಿಲ್ಲೆಯಲ್ಲಿ  ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.  

71ನೇ ಗಣರಾಜ್ಯೋತ್ಸವ ಆಚರಣೆ ಕುರಿತು ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರತಿ ವರ್ಷದಂತೆ ಈ ವರ್ಷವೂ ಸಹ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.  ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜ. 26ರಂದು ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.  ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಗುವುದು. ಹಾಗೂ ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ನೀಡುವ ``ಸವರ್ೋತ್ತಮ ಸೇವಾ ಪ್ರಶಸ್ತಿ''ಗಾಗಿ ಅರ್ಹ ನೌಕರರನ್ನು ಆಯ್ಕೆ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಂದ ಪ್ರಸ್ತಾವನೆ ಬರಬೇಕು.  ಪ್ರಸ್ತಾವನೆ ಬಾರದೇ ಇದ್ದಲ್ಲಿ, ನೇರವಾಗಿ ನಮ್ಮ ಕಚೇರಿಯಿಂದಲೇ ಈ ಪ್ರಶಸ್ತಿಗೆ ಅರ್ಹರಿರುವ ನೌಕರರನ್ನು ಆಯ್ಕೆ ಮಾಡಲಾಗುವುದು.  ಈ ಬಾರಿ ಪ್ರಶಸ್ತಿಗೆ ವಾಹನ ಚಾಲಕರಿಗೂ ಸಹ ಆದ್ಯತೆ ನೀಡಲಾಗುವುದು.  ಅಲ್ಲದೇ ಕ್ರೀಡಾಂಗಣದಲ್ಲಿ ಆಯ್ದ 03 ಶಾಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯವರು ಅಗತ್ಯ ಕ್ರಮ ಕೈಗೊಳ್ಳಬೇಕು. ಉಳಿದಂತೆ ಅಂದು ಸಂಜೆ ಸಾಹಿತ್ಯ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. 

71ನೇ ಗಣರಾಜ್ಯೋತ್ಸವ ಅಂಗವಾಗಿ ವಿವಿಧ, ಶಾಲಾ ಕಾಲೇಜುಗಳಲ್ಲಿ, ಇಲಾಖೆಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ., ತಾ.ಪಂ. ಕಾಯರ್ಾಲಯಗಳಲ್ಲಿ ಸೇರಿದಂತೆ ಇನ್ನೂ ಅನೇಕ ಕಚೇರಿಗಳಲ್ಲಿ ಧ್ವಜಾರೋಹಣ ನಡೆಯಲಿದ್ದು, ಧ್ವಜದ ಕಂಬ, ಕಂಬದ ರಿಂಗು, ಧ್ವಜ ಹಾಗೂ ಹಗ್ಗವನ್ನು ಹಿಂದಿನ ದಿನವೇ ಪರಿಶೀಲಿಸಿಕೊಳ್ಳಬೇಕು.  ಧ್ವಜಾರೋಹಣ ಸಮಯದಲ್ಲಿ ಯಾವುದೇ ತಪ್ಪುಗಳಾಗದಂತೆ ಧ್ವಜಾರೋಹಣವನ್ನು ಅಚ್ಚುಕಟ್ಟಾಗಿ ಮತ್ತು ಜಾಗರೂಕತೆಯಿಂದ ನೆರವೇರಿಸಬೇಕು. ಹಾಗೂ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ನಡೆಯುವ ಧ್ವಜಾರೋಹಣವನ್ನು ಕಡ್ಡಾಯವಾಗಿ ಕಚೇರಿ ಮುಖ್ಯಸ್ಥರೇ ನೆರವೇರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.     

ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರು ಮಾತನಾಡಿ, ಧ್ವಜಾರೋಹಣಕ್ಕೆ ಆಗಮಿಸುವ ಸಚಿವರ ಭಾಷಣಕ್ಕಾಗಿ ಎಲ್ಲಾ ಇಲಾಖೆಗಳು ತಮ್ಮ ಇಲಾಖಾ ಪ್ರಗತಿ ವರದಿಯನ್ನು ಸಂಕ್ಷಿಪ್ತಗೊಳಿಸಿ ಎರಡು ದಿನಗಳೊಳಗಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ಇವರಿಗೆ ಕಳುಹಿಸಿ ಕೊಡಬೇಕು. ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲು ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು.  ಜಿಲ್ಲಾ ಕ್ರೀಡಾಂಗಣ ರಸ್ತೆ ಮೂಲಕವೇ ಹೊರಡುವ ಇತರೆ ಬಸ್ಗಳಲ್ಲಿಯೂ ಸಹ ಮಕ್ಕಳನ್ನು ಕ್ರೀಡಾಂಗಣದವರೆಗೆ ಕರೆದುಕೊಂಡು ಹೋಗುವಂತೆ ಸಂಸ್ಥೆಯು ಬಸ್ ಚಾಲಕರಿಗೆ ನಿದರ್ೇಶನವನ್ನು ನೀಡಬೇಕು.  ಸ್ಕೌಟ್ಸ್ & ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದವರಿಂದ ಪರೇಡ್ ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಾಗಿ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಕುಡಿಯುವ ನೀರು ಮತ್ತು ಹಾಲು, ಬಿಸ್ಕೆಟ್ ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೆರಳು ಬರುವಂತೆ ಇನ್ನೂ ಹೆಚ್ಚು ಪೆಂಡಲ್ಗಳನ್ನು ಹಾಕಬೇಕು ಎಂದು ಹೇಳಿದರು. 

ಸಾಹಿತಿ ವಿಠ್ಠಪ್ಪ ಗೊರಂಟ್ಲಿ ಮಾತನಾಡಿ, 71ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಂವಿಧಾನ ಕುರಿತ ಸ್ತಬ್ಧಚಿತ್ರವನ್ನು ಪ್ರದರ್ಶಿಸುವಂತೆ ಸಲಹೆ ನೀಡಿದರು. ಸಲಹೆಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು ಈ ಕುರಿತು ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸಿದ್ರಾಮೇಶ್ವರ, ತಹಶೀಲ್ದಾರ ಜೆ.ಬಿ. ಮಜ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಜಿ. ನಾಡಗೀರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ನಾರಯಣರೆಡ್ಡಿ ಕನಕರೆಡ್ಡಿ, ನಗರಸಭೆ ಪೌರಾಯುಕ್ತ ಮಂಜುನಾಥ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ. ಬಸವರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ವಾತಂತ್ರ್ಯ ಯೋಧರಾದ ಸುಮಂತರಾವ ಪಟವಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.