ಲೋಕದರ್ಶನ ವರದಿ
ಬೆಳಗಾವಿ:09: ಬೆಳಗಾವಿ ರಂಗ ಸಂಪದವು ತನ್ನದೇ ಆದ ತಂಡವನ್ನು ಕಟ್ಟಿಕೊಂಡು ಕಳೆದ 1979 ರಿಂದ ಕನ್ನಡ ನಾಟಕಗಳನ್ನು ಪ್ರದಶರ್ಿಸುತ್ತಿದೆ.
ಕಳೆದ 39 ವರ್ಷಗಳಿಂದ ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿಯೂ ಕನ್ನಡ ನಾಟಕಗಳನ್ನು ಪ್ರದಶರ್ಿಸುವ ಮೂಲಕ ಸಾಂಸ್ಕ್ರತಿಕ ಲೋಕದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿ ಯಶಸ್ವಿಯಾಗಿ ಕಾರ್ಯ ನಿರ್ವಸುತ್ತಿದೆ ಎಂದು ರಂಗ ಸಂಪದ ಅಧ್ಯಕ್ಷರಾದ ಡಾ.ಅರವಿಂದ ಕುಲಕಣರ್ಿ ತಿಳಿಸಿದರು.
ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ರಂಗ ಸಂಪದಕ್ಕೆ 40 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಆನಂದವನ್ನು ಎಲ್ಲ ರಂಗ ಪ್ರೇಮಿಗಳ ಜೊತೆ ಹಂಚಿಕೊಳ್ಳಲು " ರಂಗ ಸಂಪದ 40 " ನಾಟಕೋತ್ಸವವನ್ನು ಇದೆ 2019ರ ಜನೇವರಿ 12 ರಿಂದ ಜನೇವರಿ 14ರ ವರೆಗೆ ಮೂರು ದಿನಗಳ ಕಾಲ ನಗರದ ಲೋಕಮಾನ್ಯ ರಂಗ ಮಂದಿರದಲ್ಲಿ ಆಚರಿಸುತ್ತಿದ್ದೇವೆ ಎಂದರು.
ದಿ. 12.ರಂದು ರಂಗ ಸಂಪದ ಕಲಾವಿದರು ಪ್ರಸ್ತುತಪಡಿಸುತ್ತಿರುವ ನಾಟಕ "ಸುಖಗಳಿಂದ ದೂರವಾಗಿ" ಮೂಲ ಮರಾಠಿ ಅಭಿರಾಮ ಭಡಕಮಕರ ಕನ್ನಡ ಅನುವಾದ ಡಾ.ಅರವಿಂದ ಕುಲಕಣರ್ಿ ಹಾಗೂ ಗುರುನಾಥ ಕುಲಕಣರ್ಿ ನಿದರ್ೇಶನ ಡಾ.ಸಂಧ್ಯಾ ದೇಶಪಾಂಡೆ ಪ್ರದರ್ಶನಗೊಳ್ಳುತ್ತಿದೆ.
ಅದರಂತೆ ದಿ.13. ರಂದು ರಂಗಾಯಣ ಧಾರವಾಡ ಕಲಾವಿದರು ಪ್ರಸ್ತುತಪಡಿಸುತ್ತಿರುವ ನಾಟಕ "ಬಾಣಲೆ ಒಳಗಿನ ಬೆಂಕಿ" ಕನ್ನಡಕ್ಕೆ ರಾಘವೇಂದ್ರ ಪಾಟೀಲ, ಸಂಗೀತ ಮತ್ತು ನಿದರ್ೇಶನ ಶ್ರೀಮತಿ ಎಮ್.ಡಿ ಪಲ್ಲವಿ ಪ್ರದರ್ಶನಗೊಳ್ಳುತ್ತಿದೆ.
ಮತ್ತು ದಿ.14 ರಂದು ರಂಗ ಆರಾಧನಾ ಸಾಂಸ್ಕ್ರತಿಕ ಸಂಘಟನೆ,ಸವದತ್ತಿ ಕಲಾವಿದರು ಪ್ರಸ್ತುತಪಡಿಸುತ್ತಿರುವ ನಾಟಕ " ಗುಲಾಮನ ಸ್ವಾತಂತ್ರ್ಯ ಯಾತ್ರೆ ರಚನೆ ಶ್ರೀತೌಫಿಕ ಅಲ್ ಹಕೀಮ, ಕನ್ನಡಕ್ಕೆ ಎಂ.ಸಿ.ಕೆ ಪ್ರಭು, ನಿದರ್ೇಶನ ಜಯತೀರ್ಥ ಜೋಷಿ, ಮರುಸಂಯೋಜನೆ ಶ್ರೀಝಕೀರ ನದಾಫ ಪ್ರದರ್ಶನಗೊಳ್ಳುತ್ತಿದೆ ಎಂದು ಹೇಳಿದರು.
ಈ ಮೂರು ದಿನಗಳ ರಂಗ ಸಂಪದ 40 ನಾಟಕೋತ್ಸವ ಉದ್ಘಾಟನೆಗಾಗಿ ಪೋಲೀಸ ಕಮೀಶ್ನರ ಆದ ಡಾ.ಡಿ.ಸಿ ರಾಜಪ್ಪ ಅವರು ಆಗಮಿಸಲಿರುವರು ಅದರಂತೆ ಅಥಿತಿಗಳಾಗಿ ಕ್ಯಾನರಾ ಬ್ಯಾಂಕ ಜನರಲ್ ಮ್ಯಾನೇಜರ ಆದ ಕೃಷ್ಣಾ ಎನ್.ಕುಲಕಣರ್ಿ ಹಾಗೂ ಉದ್ಯಮಿಗಳಾದಮಧ್ವಾರ್ಯ ಆಯಿ ಮತ್ತು ಹೋಟೆಲ್ ಉಧ್ಯಮಿಗಳಾದ ಸುಧೀರ ಸಾಲಿಯಾನ ಅವರು ಆಗಮಿಸಲಿದ್ದಾರೆ. ಈ ನಾಟಕೋತ್ಸವದ ಸದುಪಯೋಗವನ್ನು ಎಲ್ಲ ರಂಗ ರಸಿಕರು ಅಸ್ವಾದಿಸಬೇಕೆಂಬುದೆ ನಮ್ಮ ಆಸೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ರಂಗ ಸಂಪದ ಆಡಳಿತ ಮಂಡಳಿ ಸದಸ್ಯರಾದ ಅನಂತ ಪಪ್ಪು, ಗುರುನಾಥ ಕುಲಕಣರ್ಿ, ರಮೇಶ ಅನಿಗಳ, ರಾಮಚಂದ್ರ ಕಟ್ಟಿ ಉಪಸ್ಥಿತರಿದ್ದರು.