ಲೋಕದರ್ಶನ ವರದಿ
ಮುದ್ದೇಬಿಹಾಳ 20: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚೌಡಯ್ಯದಾನಪುರ ಬಳಿ ಇರುವ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಜನೇವರಿ 15ರಂದು ವಚನ ಸಾಹಿತ್ಯ ಹೊತ್ತ 35 ಅಡಿ ಎತ್ತರದ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಚೌಡಯ್ಯ ಗುರುಪೀಠದ ಎರಡನೇ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಶ್ರೀಗಳು ತಿಳಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ತಂಗಡಗಿ ರಸ್ತೆಪಕ್ಕದ ಜ್ಞಾನಭಾರತಿ ಶಾಲೆ ಎದುರಿಗೆ ಇರುವ ರಥಶಿಲ್ಪಿ ಪರಶುರಾಮ್ ಪವಾರ ಅವರ ಕಬ್ಬಿಣದ ತೇರು ನಿಮರ್ಾಣ ಉಗ್ರಾಣದಲ್ಲಿ ರು.20 ಲಕ್ಷ ವೆಚ್ಚದಲ್ಲಿ ನಿಮರ್ಾಣಗೊಂಡಿರುವ 35 ಅಡಿ ಎತ್ತರದ ನೂತನ ಕಬ್ಬಿಣದ ತೇರಿಗೆ ಗುರುವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ ತೇರನ್ನು ಗುರುಪೀಠಕ್ಕೆ ಸಾಗಿಸುವುದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನರಸೀಪುರದಲ್ಲಿ ಅಂಬಿಗರ ಸಮುದಾಯದ ಏಕೈಕ ಗುರುಪೀಠವು ಅಭಿವೃದ್ಧಿಯತ್ತ ಮುನ್ನಡೆದಿದೆ. ಪ್ರಥಮ ಪೀಠಾಧ್ಯಕ್ಷ ಶಾಂತಮುನಿ ಮಹಾಸ್ವಾಮಿಗಳು ಸಾಕಷ್ಟು ಸಮಾಜೋದ್ಧಾರಕ ಕೆಲಸ ಮಾಡಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ದ್ವಿತಿಯ ಪೀಠಾಧ್ಯಕ್ಷರಾದ ತಾವು ಗುರುಪೀಠವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.
ಜನೇವರಿ 15ರ ಸಂಕ್ರಮಣ ದಿನದಂದು ತುಂಗಭದ್ರಾ ನದಿ ದಂಡೆಯಲ್ಲಿರುವ ನರಸೀಪುರದಲ್ಲಿ ಸಂಕ್ರಮಣದ ಪುಣ್ಯಸ್ನಾನದ ಜೊತೆಗೆ ವಚನಗ್ರಂಥ ಹೊತ್ತ ಮಹಾರಥೋತ್ಸವದ ಅತ್ಯದ್ಭುತ ಸಮಾರಂಭಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು, ಶರಣರು, ಮಠಾಧೀಶರು, ಸಾಹಿತಿಗಳು ಆಗಮಿಸಲಿದ್ದಾರೆ. ಕನರ್ಾಟಕ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.
ರಥಶಿಲ್ಪಿ ಪರಶುಮಾರ ಪವಾರ ಮತ್ತು ಅವರ ಸಹೋದರರ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ ಶ್ರೀಗಳು ಕಬ್ಬಿಣದ ತೇರು ನಿಮರ್ಿಸುವಲ್ಲಿ ಪವಾರ ಸಹೋದರರು ಸಿದ್ದಹಸ್ತರು. ತೇರು ನಿಮರ್ಿಸುವಲ್ಲಿ ವಿಶೇಷ ಕಲೆ ಅಳವಡಿಸಿಕೊಂಡಿದ್ದಾರೆ. ಇಂದು ಬಹು ಸುಂದರವಾದ ತೇರನ್ನು ಗುರುಪೀಠಕ್ಕೆ ಸಾಗಿಸುತ್ತಿದ್ದೇವೆ.
ಈ ತೇರು ಗುರುಪೀಠದ ಮೊದಲ ತೇರು ಎನ್ನುವ ಕೀತರ್ಿಗೆ ಪಾತ್ರವಾಗಲಿದೆ ಎಂದರು. ಇದೇ ವೇಳೆ ಈರ್ವರೂ ಶ್ರೀಗಳು ತೇರಿಗೆ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಸಮಾಜದ ಗಣ್ಯರ ನೇತೃತ್ವದಲ್ಲಿ ಕ್ರೇನ್ ಸಹಾಯದಿಂದ ತೇರಿನ ಬಿಡಿ ಭಾಗಗಳನ್ನು ಲಾರಿಗಳಲ್ಲಿರಿಸಿ ಸಾಗಿಸಲು ಕ್ರಮ ಕೈಕೊಳ್ಳಲಾಯಿತು.
ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಭಾರತಿ ಅಪ್ಪಣ್ಣ ಶ್ರೀ, ಕನರ್ಾಟಕ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ಸಣ್ಣದ, ಅಖಿಲ ಕನರ್ಾಟಕ ಅಂಬಿಗರ ಚೌಡಯ್ಯ ಮಹಾಸಭಾದ ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಸಂಗಪ್ಪ ಪ್ಯಾಟಿ, ಕಾರ್ಯದಶರ್ಿ ಅಯ್ಯಪ್ಪ ತಂಗಡಗಿ ಹಿರೇಮುರಾಳ, ನಿಜಶರಣ ಅಂಬಿಗರ ಚೌಡಯ್ಯ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಚಂದ್ರಶೇಖರ ಅಂಬಿಗೇರ, ತಾಲೂಕು ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಅಧ್ಯಕ್ಷ ಸಂದೀಪ ಬಿದರಕೋಟಿ, ಉಪಾಧ್ಯಕ್ಷ ಸಾಗರ ಉಕ್ಕಲಿ, ಪ್ರಮುಖರಾದ ರವಿ ಹಾವೇರಿ, ಅಜರ್ುನ ಕಂಬಾಗಿ, ವಿರುಪಾಕ್ಷಯ್ಯ ಮಠಪತಿ, ಅಬ್ಬಣ್ಣ ದೋಟಿಹಾಳ, ನಾಗು ಹಲಗಣಿ, ಹಣಮಂತ ಅಂಬಿಗೇರ, ಹಣಮಂತ ಕೋಲಕಾರ, ರವಿ ನರಸಿಪುರ, ಕಿರಣ, ಅಂಬಿಗರ ಸಮಾಜದ ಸದಸ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.