2019ರ ವಿಶ್ವಕಪ್: ಎದುರಾಳಿ ತಂಡ ಕಟ್ಟಿ ಹಾಕಲು ಧೋನಿ ರಣತಂತ್ರ


ನವದೆಹಲಿ 09: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್ ಟ್ರೋಪಿ ತಂದುಕೊಟ್ಟಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ 2019ರಲ್ಲಿ ಇಂಗ್ಲೆಂಡ್ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ಅವರು ಖತನರ್ಾಕ್ ಪ್ಲಾನ್ವೊಂದು ಸಜ್ಜಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. 

ಇಂಗ್ಲೆಂಡ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಂಪೈರ್ ಕೈಯಿಂದ ಬಾಲ್ ಪಡೆದುಕೊಂಡಿದ್ದ ಧೋನಿ ಸೀಮಿತ ಓವರ್ಗಳಿಗೂ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಅದಕ್ಕೆ ಸಮರ್ಥನೆ ನೀಡಿರುವ ಧೋನಿ, 2019ರಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯುವುದರಿಂದ ಈ ಸರಣಿ ನಮಗೆ ಬಹಳ ಮಹತ್ವದ್ದಾಗಿದೆ. ಎದುರಾಳಿ ಬೌಲರ್ಗಳು ಎಸೆದ ಚೆಂಡು ರಿವಸರ್್ ಸ್ವಿಂಗ್ ಆಗುತ್ತಿತ್ತು. ಆದರೆ ನಮ್ಮ ಬೌಲರ್ಗಳ ಎಸೆದ ಚೆಂಡು ಮಾತ್ರ ರಿವಸರ್್ ಸ್ವಿಂಗ್ ಪಡೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಅದನ್ನು ಚೆಕ್ ಮಾಡುವುದಕೋಸ್ಕರ ನಾನು ಅಂಪೈರ್ ಕೈಯಿಂದ ಬಾಲ್ ಇಸಿದುಕೊಂಡಿದ್ದೆ ಎಂದಿದ್ದಾರೆ. ಅವರಿಂದ ಬಾಲ್ ಪಡೆದುಕೊಳ್ಳುವುದಕ್ಕೂ ಮುನ್ನ ನಾನು ಮನವಿ ಮಾಡಿಕೊಡಿದ್ದೆ ಎಂದು ಅವರು ಹೇಳಿದ್ದಾರೆ.   

2019ರ ವಿಶ್ವಕಪ್ನಲ್ಲೂ ನಮ್ಮ ಬೌಲರ್ಗಳು ಯಶಸ್ವಿಯಾಗಿ ಎದುರಾಳಿ ತಂಡದ ಆಟಗಾರರ ಮೇಲೆ ಸವಾರಿ ಮಾಡಬೇಕಾದರೆ ಬೌಲ್ ರಿವಸರ್್ ಸ್ವಿಂಗ್ ಪಡೆದುಕೊಳ್ಳುವುದು ಬಹುಮುಖ್ಯ. ಅದಕ್ಕಾಗಿ ಸರಣಿ ಮುಕ್ತಾಯಗೊಂಡ ಬಳಿಕ ನಾನು ಆ ಬಾಲ್ನ್ನು  ಬೌಲಿಂಗ್ ಕೋಚ್ಗೆ ನೀಡಿ ಇದು ಯಾವ ಕಾರಣಕ್ಕಾಗಿ ರಿವಸರ್್ ಸ್ವಿಂಗ್ ಆಗಲಿಲ್ಲ ಎಂದು ಪ್ರಶ್ನೆ ಮಾಡಿದ್ದೆ ಎಂದು ಉತ್ತರ ನೀಡಿದ್ದಾರೆ.  ಅವರಿಂದ ಉತ್ತರ ಪಡೆದುಕೊಂಡು ಉತ್ತಮ ಪ್ಲಾನ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಭಾಗಿಯಾಗಿದ್ದ ಮಹೇಂದ್ರ ಸಿಂಗ್ ಧೋನಿ ಇದೀಗ ಭಾರತಕ್ಕೆ ವಾಪಸ್ ಆಗಿದ್ದು,  ತಮ್ಮ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.