ಲೋಕದರ್ಶನವರದಿ
ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶರಣಬಸವೇಶ್ವರ ದಾಸೋಹ ಮಠದ ಲಿಂ. ರೇವಣಸಿದ್ದೇಶ್ವರ ಶರಣರ 12 ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಲಿಂಗೈಕ್ಯ ಶ್ರೀಗಳವರ ಭಾವಚಿತ್ರದ ಮೆರವಣಿಗೆಗೆ ಶರಣ ಬಸವೇಶ್ವರ ಮಠದ ಶಿವದೇವ ಶರಣರು ಪೂಜೆಸಲ್ಲಿಸುವದರೊಂದಿಗೆ ಚಾಲನೆ ನೀಡಿದರು.
ಲಿಂಗೈಕ್ಯರ ಭಾವ ಚಿತ್ರದ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಸದಾಶಿವ ಪೇಟೆ, ನಾರಾಯಣಪುರ, ಇಬ್ರಾಹಿಂಪುರ, ಮುನವಳ್ಳಿ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದಿತು. ಮೇರವಣಿಗೆ ಉದ್ದಕ್ಕೂ ಭಕ್ತರು ಲಿಂಗೈಕ್ಯ ಶರಣದ ಭಾವ ಚಿತ್ರಕ್ಕೆ ಹೂಮಾಲೆ, ಹಣ್ಣು ಕಾಯಿ ಸಮಪರ್ಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು. ಮೆರವಣಿಗೆ ಸಾಗಿ ಬಂದು ಪುನ: ಶ್ರೀಮಠದ ಆವರಣಕ್ಕೆ ಬಂದು ತಲುಪಿತು.
ನಂತರ ನಡೆದ ಧರ್ಮ ಸಮಾರಂಬವನ್ನುದ್ಧೇಸಿ ಪ್ರಸ್ತುತ ಮಠದ ಪೀಠಾದಿಪತಿಗಳಾದ ಶಿವದೇವ ಶರಣರು ಮಾತನಾಡಿ ಲಿಂ. ರೇವಣಸಿದ್ದೇಶ್ವರ ಶರಣರ ಅಫಾರ ಮಹಿಮೆಯನ್ನು ಅವರ ಮರಣಾನಂತರವೂ ನಾವು ನೋಡುತ್ತಿದ್ದೇವೆ ಎಂದರೆ ಅವರು ಜೀವಿತಾ ಅವದಿಯಲ್ಲಿ ಸಮಾಜಕ್ಕಾಗಿ ತಮ್ಮನ್ನು ತಾವು ಸಮಪರ್ಿಸಿಕೋಂಡಿದ್ದಕ್ಕಾಗಿ ಎಂಬುದನ್ನು ಯಾರು ಮರೆಯುವಂತಿಲ್ಲ. ಅಬ್ಬಿಗೇರಿಯಿಂದ ಕುಟುಂಬವನ್ನು ತ್ಯಜಿಸಿ ಇಡಿ ಸಮಾಜವೇ ನನ್ನ ಕುಟುಂಬ ಎಂಬ ಬಾವನೆಯಿಂದ ಅಲ್ಲಲ್ಲಿ ಸಂಚರಿಸಿ ಸದಾಶಿವಪೇಟೆಗೆ ಆಗಮಿಸಿದ ಅವರು ಜಲವನ್ನೇ ತಿರ್ಥವನ್ನಾಗಿ ಮಾಡಿ ಭಸ್ಮವನ್ನೇ ಭವರೋಗಕ್ಕೇ ಔಷಧಿ ಯನ್ನಾಗಿಸಿ ಬೇಡಿ ಬಂದ ಭಕ್ತರಿಗೆ ತಿರ್ಥ, ಬಸ್ಮವನ್ನು ನೀಡಿ ಭವರೋಗಗಳನ್ನು ದೂರಮಾಡಿದ ಮಹಾ ಛೇತನರು ಲಿಂ. ರೇವಣಸಿದ್ದೇಶ್ವರ ಶರಣರಾಗಿದ್ದರು ಎಂದು ಹೇಳಿದರು.
ಬಂಕಾಪುರ ಅರಳಲೆಮಠದ ರೇವಣಸಿದ್ದೇಶ್ವರ ಸ್ವಾಮಿಗಳು ಮಾತನಾಡಿ ಗುರು ಕಾರುಣ್ಯವಿಲ್ಲದೆ ಮಾನವನ ಜೀವನ ಸಾರ್ಥಕತೆ ಹೊಂದಲಾರದು ಎಂಭುದಕ್ಕೇ ಇಲ್ಲಿ ನೆರೆದ ಭಕ್ತ ಸಮೂಹವೇ ಸಾಕ್ಷೀಯಾಗಿದೆ. ದಾಸೋಹ ಮೂತರ್ಿಗಳಾದ ಕಲಬುರಗಿ ಶರಣಬಸವೇಶ್ವರರ ಮಹಾ ಮಠವನ್ನು ನಿಮರ್ಿಸಿ ನಿರಂತರವಾಗಿ ಪುರಾಣ, ಪ್ರವಚನ, ಕೀರ್ತನ, ಶಿವದಿಕ್ಷೇ, ಉಚಿತ ಸಾಮೂಹಿಕ ವಿವಾಹಗಳನ್ನು ಮಾಡುವಮೂಲಕ ನಿತ್ಯ ದಾಸೋಹ ನಡೆಸಿ ಸದಾಶಿವಪೇಟೆ ಗ್ರಾಮವನ್ನು ದಕ್ಷೀಣ ಕಲಬುರಗಿ ಎನ್ನಾಗಿಸಿದ ಕೀತರ್ಿ ಲಿಂ. ಶ್ರೀ ರೇವಣಸಿದ್ಧೇಶ್ವರ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.
ರೇವಣಸಿದ್ಧೇಶ್ವರ ಅಕ್ಕನಬಳಗದ ತಾಯಂದಿರಿಂದ ಲಿಂ. ರೇವಣಸಿದ್ಧೇಶ್ವರ ಕತೃ ಗದ್ದುಗೆಗೆ ವಿಷೇಶ ಪೂಜೆ ಸಲ್ಲಿಸಿದರು.
ಹಿರಿಯರಾದ ವಿಜಯ್ ಲಕ್ಷ್ಮೇಶ್ವರ, ರಮೇಶ ಕಲಿವಾಳ, ಈರಣ್ಣ ಶೇಟ್ಟರ, ಶೇಖಯ್ಯ ನಂದಿಮಠ, ಶಿವಯೋಗೆಪ್ಪ ಕಿವುಡನವರ, ಫಕ್ಕೀರಪ್ಪ ಒಡವಿ, ಗುರುಲಿಂಗಯ್ಯ ನಂದಿಮಠ, ಪುಟ್ಟಪ್ಪ ಬಾಗಣ್ಣವರ, ವೀರಪ್ಪ ಒಡವಿ, ನಿಂಗಪ್ಪ ಚಿಗರಿ, ಸಂಗಪ್ಪ ಒಡವಿ, ಮುತ್ತಪ್ಪ ಬಡಿಗೇರ, ಶಂಭು ಕಿವುಡನವರ, ಗದಿಗೆಪ್ಪ ರವದಿ, ಕುಮಾರಸ್ವಾಮಿ ಹೊಸಮಠ ಶ್ರೀ ರೇವಣಸಿದ್ಧೇಶ್ವರ ಅಕ್ಕನಬಳಗದ ಎಂ. ಶಾರದಾ ಮಹಂತಿನಮಠ ಸೇರಿದಂತೆ ಅಕ್ಕನಬಳಗದ ತಾಯಂದಿರು ಉಪಸ್ಥಿತರಿದ್ದರು.