ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ 12 ನೇ ವಾಷರ್ಿಕೋತ್ಸವ ಉದ್ಘಾಟನೆ

ಯಲ್ಲಾಪುರ,ಅ,27: ಭಾರತೀಯ ಜೀವ ವಿಮಾ ನಿಗಮದಲ್ಲಿ ಇಂದು ಲಭ್ಯವಿರುವರುವ ಪಾಲಿಸಿಗಳ ಪೈಕಿ  "ಜೀವನ ಶಿರೋಮಣಿ" ಎಂಬುದು ಹೆಚ್ಚು ಜನಪ್ರಿಯವಾಗುತ್ತಿದ್ದು, ಹೆಚ್ಚು ಲಾಭ ನೀಡುವ ಉತ್ತಮ ಪಾಲಿಸಿ ಎನ್ನಬಹುದಾಗಿದೆ. ಇಂತಹ ದೊಡ್ಡ ಪಾಲಿಸಿಗಳನ್ನು ಸಣ್ಣ ಹಳ್ಳಿಗಳ ಜನ ಖರೀದಿಸುತ್ತಿರುವುದು ನಿಗಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಎಂದು ಶಿರಸಿ ಜೀವ ವಿಮಾ ಶಾಖೆಯ ಮುಖ್ಯ ಪ್ರಬಂಧಕ ಸುಧೀರಕುಮಾರ ಶೆಟ್ಟಿ ಹೇಳಿದರು.

            ಅವರು ಅ.26 ರಂದು ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ 12 ನೇ ವಾಷರ್ಿಕೋತ್ಸವ ಉದ್ಘಾಟಿಸಿ, ಮಾತನಾಡುತ್ತಿದ್ದರು. ಬಯಲುಸೀಮೆಯ ಅನೇಕ ಪ್ರದೇಶಗಳಲ್ಲಿ ರಸ್ತೆ, ನೀರು ಮುಂತಾದ ವ್ಯವಸ್ಥೆಗಳಿಲ್ಲದ ಹಳ್ಳಿಗಳನ್ನು ಕಾಣಬಹುದು. ಅಲ್ಲಿಯೂ ನಮ್ಮ ನಿರೀಕ್ಷೆ ಮೀರಿ ಪಾಲಿಸಿಗಳು ಮಾರಾಟವಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕನ್ನಡದಂತಹ ಸಮೃದ್ಧ ಜಿಲ್ಲೆಯ ವಿವಿಧ ಗ್ರಾಮಗಳಿಗೆ ನಮ್ಮ ಪ್ರತಿನಿಧಿಗಳು ತೆರಳಿ, ಗ್ರಾಹಕರನ್ನು ಭೇಟಿಯಾಗಿ ವಿಮಾ ವ್ಯವಹಾರವನ್ನು ವೃದ್ಧಿಗೊಳಿಸಬೇಕು ಎಂದರು. ಯಲ್ಲಾಪುರದ ಈ ಸೆಟಿಲೈಟ್ ಶಾಖೆಯನ್ನು ಪೂರ್ಣಪ್ರಮಾಣದ ಶಾಖೆಯನ್ನಾಗಿ ಪರಿವತರ್ಿಸಲು ಹೆಚ್ಚಿನ ವ್ಯವಹಾರ ಅಗತ್ಯವಾಗಿದೆ ಎಂದರು.

                ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರ ಶಾಖಾಧಿಕಾರಿ ವಿಜಯಕುಮಾರ ಉಮಜರ್ಿ ಮಾತನಾಡಿ, ದಶಕಗಳ ಹಿಂದೆ ಇಲ್ಲಿ ವಿಮಾ ಸೇವಾಕೇಂದ್ರ ಪ್ರಾರಂಭಗೊಂಡಿರುವುದು ಇಲ್ಲಿನ ನಾಗರಿಕರಿಗೆ ಉತ್ತಮ ಸೇವೆ ದೊರಕಲು ಕಾರಣವಾಗಿದೆ. ನಮ್ಮಲ್ಲಿ 230 ಕ್ಕೂ ಹೆಚ್ಚಿನ ಪ್ರತಿನಿಧಿಗಳಿದ್ದಾರೆ. ಎಲ್ಲ ಪ್ರತಿನಿಧಿಗಳ ಕ್ರಿಯಾಶೀಲ ಪ್ರಯತ್ನದಿಂದ ಮಾತ್ರ ಶಾಖೆ ಉನ್ನತ ಸ್ಥಾನಕ್ಕೇರಲು ಸಾಧ್ಯ. ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯ ನಡುವೆ ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ನಮ್ಮ ಮೇಲಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

          ಶಿರಸಿ ಶಾಖೆಯ ಉಪಶಾಖಾಧಿಕಾರಿ ಅಜಯಕುಮಾರ ಬಡಶೇಶಿ, ಪ್ರತಿನಿಧಿಗಳಿಗಾಗಿ ನಿಗಮ ಏರ್ಪಡಿಸಿದ ವಿವಿಧ ಸ್ಪಧರ್ೆಗಳ ಮಾಹಿತಿ ನೀಡಿದರು. 

           ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ಪ್ರಭು ಯಲ್ಲಾಪುರದ ಶಾಖೆ 11 ವರ್ಷ ನಡೆದು ಬಂದ ದಾರಿ, ಸಾಧಿಸಬೇಕಿರುವ ಗುರಿ ಕುರಿತಾಗಿ; ರಾಘವೇಂದ್ರ ಕಣಗಿಲ್ ಪ್ರಸ್ತುತ ನಮಗೆ ಎಲ್ಲ ರೀತಿಯ ಡಿಜಿಟಲ್ ವ್ಯವಸ್ಥೆಗಳು ಲಭ್ಯವಾಗುತ್ತಿರುವುದರಿಂದ ತ್ವರಿತ ಸೇವೆ ಮತ್ತು ಅಧಿಕ ವ್ಯವಹಾರ ನಡೆಸಲು ಅನುಕೂಲವಾಗಿದೆ ಎಂದು ವಿವರಿಸಿದರು. 

            ಉಪಾಡಳಿತಾಧಿಕಾರಿ ಆದಿನಾಥ ಹಳ್ಳಿ ಮತ್ತು ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು. ಉತ್ತಮ ಸಾಧನೆ ಮಾಡಿದ ಜೀವ ವಿಮಾ ಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅಭಿವೃದ್ಧಿ ಅಧಿಕಾರಿಗಳಾದ ಮಧುಕೇಶ್ವರ ಹೆಗಡೆ ಸ್ವಾಗತಿಸಿದರು. ವಿರೇಂದ್ರ ಗೌಡ ನಿರ್ವಹಿಸಿ, ವಂದಿಸಿದರು