ದಿ. ಭೀಮರಾಯ ಬೋರಗಿ ಪುಣ್ಯ ಸ್ಮರಣೋತ್ಸವ: ಸಾಧಕರಿಗೆ ಸನ್ಮಾನ

The. Bhimaraya Boragi Commemoration: Felicitation to achievers

ದೇವರಹಿಪ್ಪರಗಿ 30: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿ. ಭೀಮರಾಯ ಬೋರಗಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಸಂಗೀತ ಕಲಾವಿದರನ್ನು ಸನ್ಮಾನಿಸುವ ವಿಶಿಷ್ಟವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಂಗೀತ ಕಲಾವಿದ ಶಿಕ್ಷಕ ಹಣಮಂತ ಬೋರಗಿ ತಿಳಿಸಿದ್ದಾರೆ.ತಾಲೂಕಿನ ಯಲಗೋಡ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರವಿವಾರದಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿ. ಭೀಮರಾಯ ಬೋರಗಿ ಅವರು ಜಾನಪದ ಕಲಾವಿದರಾಗಿ ಸುಮಾರು 50 ವರ್ಷಗಳ ಕಾಲ ತಮ್ಮದೇ ಆದ ಬಳಗವನ್ನು ಕಟ್ಟಿಕೊಂಡು ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ದೇವಿಯ ನಾಟಕ ಸೇರಿದಂತೆ ಹಲವಾರು ಜಾನಪದ ಕಲಾವಿದರಿಗೆ ತಮ್ಮದೇ ಆದ ಮಾರ್ಗದರ್ಶನ ನೀಡುವುದನ್ನು ಗಮನಿಸಿ ಕರ್ನಾಟಕ ರಾಜ್ಯ ಸರ್ಕಾರ 2018 ರಲ್ಲಿ ಕನ್ನಡ ನಾಡು ನುಡಿಗಾಗಿ ಸಲ್ಲಿಸಿದ ಸೇವೆಗೆ ರಾಜ್ಯೋತ್ಸವದ ಪ್ರಯುಕ್ತ ಜಾನಪದ ಕ್ಷೇತ್ರದಲ್ಲಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ವರ್ಷ ವಯೋ ಸಹಜ ಕಾಯಿಲೆಯಿಂದ ನಿಧನ ಹೊಂದಿದ್ದರು. ಅವರ ಸವಿನೆನಪಿಗಾಗಿ ರವಿವಾರದಂದು ಗ್ರಾಮದಲ್ಲಿ ಸರ್ವ ಜನಾಂಗದ ಪ್ರಮುಖರು ಗಣ್ಯರು ಸೇರಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸುವ ಹಾಗೂ ಸಂಗೀತ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಹೇಳಿದರು. 

ಮಠದ ನಿಂಗಯ್ಯ ಮಹಾಸ್ವಾಮಿಗಳು, ರಾಜಶೇಖರಯ್ಯ ಹಿರೇಮಠ, ಗ್ರಾಮದ ಪ್ರಮುಖರು ಗಳಾದ ಅಣ್ಣಪ್ಪಗೌಡ ಪಾಟೀಲ, ಜಗನ್ನಾಥ ಕುಲಕರ್ಣಿ, ಶರಣಪ್ಪ ಶಬನೂರ, ಗೌಡಪ್ಪಗೌಡ ಶಾಸ್ತ್ರಿ, ನಿಂಗಣ್ಣ ಶಾಸ್ತ್ರಿ, ದೇವೇಂದ್ರ​‍್ಪ ಶಾಸ್ತ್ರಿ, ಚಿದಾನಂದ ಶಾಸ್ತ್ರಿ, ವಿನಾಯಕ ಕುಲಕರ್ಣಿ, ಮಾಂತಗೌಡ ದಂಡಪಗೌಡ್ರ, ಸಾಯಿಬಣ್ಣ ಬಾಗೇವಾಡಿ, ಬಾಬು ಕ್ಯಾತ್ನಾಳ, ಮಶಾಕಶಾಬ ಪತ್ತೆಪುರ, ಹುಸೇನ ತಳ್ಳೂಳ್ಳಿ,ಹುಯೋಗಿ ತಳ್ಳೊಳ್ಳಿ, ಚಂದ್ರಶೇಖರ ಬೋರಗಿ, ಹಳೆಪ್ಪ ಬೋರಗಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು,ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಕಲಾವಿದರು ಪಾಲ್ಗೊಳ್ಳಲಿದ್ದಾರೆ.