ಬೆಂಗಳೂರು, ಜ.22,ಭಾರತದಲ್ಲಿ ಮುಂಚೂಣಿಯಲ್ಲಿರುವ ಸೆಲ್ಫ್-ಡ್ರೈವ್ ಮೊಬಿಲಿಟಿ ವೇದಿಕೆಯಾದ ಜೂಮ್ ಕಾರ್ ಸಂಸ್ಥೆಯು 30 ದಶಲಕ್ಷ ಬಂಡವಾಳವನ್ನು ಕ್ರೋಡಿಕರಿಸಿದೆ. ಈ ಬಂಡವಾಳ ಕ್ರೋಡಿಕರಣ ಪ್ರಕ್ರಿಯೆಯು 100 ದಶಲಕ್ಷ ಬಂಡವಾಳ ಕ್ರೋಡಿಕರಣದ ಸೀರೀಸ್ ಡಿ ಫಂಡ್ ನ ಭಾಗವಾಗಿದ್ದು, ಐಜಿವಿಯ ಸೋನಿ ಇನ್ನೋವೇಶನ್ ಫಂಡ್ ನಿಂದ ಈ ಬಂಡವಾಳ ಕ್ರೋಡಿಕರಿಸಲಾಗಿದೆ. ತಂತ್ರಜ್ಞಾನವನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಐಜಿವಿಯ ಸೋನಿ ಇನ್ನೋವೇಶನ್ ಫಂಡ್ ಶ್ರಮಿಸುತ್ತಿದ್ದು ಮುಂಬರುವ ದಶಕದಲ್ಲಿ ಚಲನಶೀಲತೆ ನಾವೀನ್ಯತೆ ಮತ್ತು ಹೊಸ ಸೇವೆಗಳಿಗೆ ಕೇಂದ್ರ ಬಿಂದುವಾಗುವ ಮುನ್ಸೂಚನೆಯಾಗಿದೆ.
ಜೂಮ್ ಕಾರ್ ತನ್ನ ಚಂದಾದಾರಿಕೆ ಸೇವೆಗೆ ಹೆಚ್ಚುವರಿಯಾಗಿ ಉದ್ಯಮವನ್ನುಮುನ್ನಡೆಸುವ ಐಒಟಿ ವಿನ್ಯಾಸವನ್ನು ಹೆಚ್ಚಿಸುವತ್ತ ಗಮನಹರಿಸಿ ಹೂಡಿಕೆ ಬೆಳವಣಿಗೆ, ತಂತ್ರಜ್ಞಾನ ಮತ್ತು ದತ್ತಾಂಶ ವಿಜ್ಞಾನಕ್ಕೆನಿಯೋಜಿಸಲು ಯೋಜಿಸಿದೆ. ಕಳೆದ ಏಳು ವರ್ಷದಲ್ಲಿ ಜೂಮ್ ಕಾರ್ ಭಾರತದ ನಗರಚಲನಶೀಲತೆಯನ್ನು ಪರಿವರ್ತಿಸುತ್ತಿದೆ. ಜೂಮ್ ಕಾರ್ ಭಾರತೀಯ ಮಾರುಕಟ್ಟೆಯಲ್ಲಿ ಆಳವಾದ ಪ್ರವೇಶವನ್ನು ಗಮನಿಸುತ್ತಿದೆ ಮತ್ತು ಉತ್ತಮ ತಂತ್ರಜ್ಞಾನದ ಕಾರಣದಿಂದಾಗಿ ಜೂಮ್ ಕಾರ್ ಕಾರುಗಳಿಗೆ ಪ್ರವೇಶವನ್ನು ಪ್ರಜಾಪ್ರಭುತ್ವಗೊಳಿಸಿದೆ. ಜೂಮ್ ಕಾರ್‌ನ ಪ್ರಾಥಮಿಕ ಗುರಿ 18-24 ತಿಂಗಳುಗಳಲ್ಲಿ 1,00,000 ಕ್ಕೂ ಹೆಚ್ಚು ವಾಹನಗಳನ್ನು ರಸ್ತೆಯಲ್ಲಿ ತರುವುದು ಮತ್ತು ಉತ್ತಮ ಚಲನಶೀಲತೆ ಪರ್ಯಾಯಗಳೊಂದಿಗೆ ತನ್ನ ಗ್ರಾಹಕರಿಗೆ ಸೇವೆ ಒದಗಿಸುವುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.