ತಾಂಬಾ: ಜೋಳದ ಹಂತಿ ನಾಡಿನ ದೊಡ್ಡಹಬ್ಬ: ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಹೇಳಿಕೆ

ಲೋಕದರ್ಶನ ವರದಿ

ತಾಂಬಾ 16: ಶರಣ, ಸಂಸ್ಕ್ರತಿ ಕಾಯಕ ಸಿದ್ದಾಂತಕ್ಕೆ ಮಹತ್ವ ನೀಡಿದ ರೈತನ ಹಾಗೂ ನಾಡಿನ ದೊಡ್ಡಹಬ್ಬ ಜೋಳದ ಹಂತಿಯ ಗತವೈಭವವ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ  ಬಾಳನಗೌಡ ಪಾಟೀಲ ಹೇಳಿದರು.   

ಗಂಗನಳ್ಳಿ ಗ್ರಾಮದ  ಬಸವೇಶ್ವರ ಹಂತಿ ಮೇಟೆಯನ್ನು ಪೂಜೆ ಮಾಡಿ ಚಾಲನೆ ನೀಡಿ ಮಾತನಾಡಿದ ಅವರು ಈ ಹಿಂದೆ ನಮ್ಮ ರೈತರು ಪ್ರತಿಯೊಂದು ರಾಶಿಗಳು ತಮ್ಮ ಹೊಲಗಳಲ್ಲಿ ಕಣ ಮಾಡಿ ಅದರಲ್ಲಿ ಮೇಟಿ ನೆಟ್ಟು ಎತ್ತುಗಳಿಂದ ತುಳಿಸಿ ರಾಶಿ ಮಾಡುತ್ತಿದ್ದರು ಪ್ರಸ್ತುತ ಯಂತ್ರಗಳು ಬಂದು ಹಿಂದಿನ ಹಂತಿ ರಾಶಿಗಳು ಮಾಯವಾಗಿವೆ ಅದನ್ನು ನೆನಪಿಸಲು ಗಂಗನಳ್ಳಿ ಗ್ರಾಮದ ದಿ.ವೀರಯ್ಯ ಸಾಲಿಮಠ ಅವರು ಹಂತಿ ಮೇಟೆಯನ್ನು ತಂದು ಬಸವೇಶ್ವರ ದೇವಾಲಯದ ಭಕ್ತರಿಂದ ಜೋಳದ ತೆನಿಗಳನ್ನು ಕ್ರೂಡಿಕರಿಸಿ ಜೋಳದ ಹಂತಿಯು ಪ್ರಾರಂಭಗೊಳಿಸಿರುವದು ಶ್ಲಾಂಘನಿಯ ಎಂದರು 

ಅಧ್ಯಕ್ಷತೆ ವಹಿಸಿ ಮಾತನಾಡಿದ ತೊರವಿಯ ಚಿದಾನಂದ ಹಿರೇಮಠ ಶಾಸ್ತ್ರಿಗಳು ನಾವು ಎಷ್ಟೆ ಎತ್ತರವಾಗಿ ಬೆಳೆದರು ನಮ್ಮ ದೇಶದ ಪುರಾತನ ಸಂಸ್ಕೃತಿಯಲ್ಲಿಯೇ ಬದುಕನ್ನು ಅನಾವರಣಗೊಳಿಸಬೇಕು.

ಮುಖ್ಯ ಅತಿಥಿಯಾಗಿ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕ ಕಜಾಪ ಅಧ್ಯಕ್ಷ ನಾನಾಗೌಡ ಪಾಟೀಲ್. ಚಿದಾನಂದ ಗೌಡಗಾಂವಿ ಮತನಾಡಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಸದಾಶಿವ ಕರ್ಜಗಿ, ಮಲ್ಲಪ್ಪ ದುದ್ದಗಿ, ದಯಾನಂದ ದೊಡಮನಿ, ಮಲ್ಲಪ್ಪ ಬೇನೂರ, ಮಲ್ಲಪ್ಪ ಗಡ್ಡದ, ಶಿವನಗೌಡ ಪಾಟೀಲ್, ಬಸವೇಶ್ವರ ಹಂತಿ ಮೇಳದ ಸದಸ್ಯರು ಉಪಸ್ಥಿತರಿದ್ದರು. ಹಣಮಂತ ಅಥಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ ದೊಡಮನಿ ಸ್ವಾಗತಿಸಿದರು. ಅಮೋಗಿ ಪಾಸೋಡಿ ನಿರೂಪಿಸಿದರು. ಶ್ರೀಶೈಲ ಅಲದಿ ವಂದಿಸಿದರು.