ಲೋಕದರ್ಶನ ವರದಿ
ತಾಳಿಕೋಟೆ 29: ಈ ಭಾಗದಲ್ಲಿ ಸುಮಾರು 7, 8 ವರ್ಷಗಳಿಂದ ಮಳೆಯ ಅಭಾವದಿಂದ ಸೃಷ್ಠಿಯಾಗಿರುವ ಬರದಿಂದ ರೈತಾಪಿ ಜನತೆಗೆ ಕಂಗೆಟ್ಟು ಹೋಗಿದ್ದರಿಂದ ಜಾತ್ರೆಯಲ್ಲಿ ಕಿಕ್ಕಿರಿದು ಸೇರುತ್ತಿದ್ದ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಇಳಿಮುಖ ಗೊಳ್ಳುತ್ತಾ ಸಾಗಿದೆ ಅಲ್ಲದೇ ಈ ಭಾರಿಯ ಜಾತ್ರೆಯಲ್ಲಿ ಜಾನುವಾರುಗಳ ಬೆಲೆಯೂ ಕೂಡಾ ಗಗನಕ್ಕೇರಿದೆ.
ಪ್ರತಿ ವರ್ಷ ತಾಳಿಕೋಟೆ ಪಟ್ಟಣದ ಆರಾದ್ಯ ದೈವ ಸಾಂಭ ಪ್ರಭು ಶರಣಮುತ್ಯಾರ ಜಾತ್ರೋತ್ಸವ ಅಂಗವಾಗಿ ಜರುಗುತ್ತಾ ಬರುತ್ತಿರುವ ಜಾನುವಾರುಗಳ ಜಾತ್ರೆಯಲ್ಲಿ ಈ ಮೊದಲು ಸುಮಾರು 5 ಸಾವಿರಕ್ಕೂ ಅಧಿಕ ಜಾನುವಾರುಗಳನ್ನು ರೈತಾಪಿ ಜನತೆ ತರುವದರೊಂದಿಗೆ ಜಾತ್ರೆಯಲ್ಲಿ ಭಾಗವಹಿಸಿ ಜಾನುವಾರುಗಳ ಜಾತ್ರೆಯ ಸೊಬಗನ್ನು ಹೆಚ್ಚಿಸುವದರೊಂದಿಗೆ ತಮ್ಮಗೆ ಇಚ್ಚಿತ ಜಾನುವಾರುಗಳ ಖರೀದಿಯ ಬರಾಟೆಯಲ್ಲಿ ತೊಡಗುತ್ತಿದುದ್ದು ಸಾಮಾನ್ಯವಾಗಿರುತ್ತಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಾ ಸಾಗಿರುವ ಜಾನುವಾರುಗಳ ಜಾತ್ರೆಯಲ್ಲಿ ವರ್ಷಕ್ಕಿಂತ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಗೊಳ್ಳುತ್ತಾ ಸಾಗಿದೆ.
ಶ್ರೀ ಶರಣಮುತ್ಯಾರ ಜಾತ್ರೋತ್ಸವ ಕಮಿಟಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಾಳಿಕೋಟೆ ಇವರುಗಳ ನೇತೃತ್ವದಲ್ಲಿ ಎಪಿಎಂಸಿ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ನಡೆದ ಈ ಜಾನುವಾರುಗಳ ಜಾತ್ರೋತ್ಸವದಲ್ಲಿ ಎಪಿಎಂಸಿಯ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಒಳಗೊಂಡಂತೆ ಎಲ್ಲರೀತಿಯಿಂದಲೂ ವ್ಯವಸ್ಥೆ ಕಲ್ಪಿಸಲಾಗಿದೆ ಅಲ್ಲದೇ ಈ ಜಾನುವಾರುಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳಲ್ಲಿ ಆಯ್ಕೆಮಾಡಲಾದ ಉತ್ತಮ ತಳಿ ಜಾನುವಾರುಗಳಿಗೆ ಎಪಿಎಂಸಿ ವತಿಯಿಂದ ಹಾಗೂ ಸಹಕಾರಿ ಬ್ಯಾಂಕ್ ವತಿಯಿಂದ ಭಹುಮಾನವನ್ನು ನೀಡಲು ನಿರ್ಧರಿಸಲಾಗಿದೆ.
2 ಲಕ್ಷದ ವರೆಗೆ ಜೋಡೆತ್ತುಗಳ ಮಾರಾಟ:
ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದ್ದರಿಂದ ಪ್ರತಿವರ್ಷಕ್ಕಿಂತ ಈ ವರ್ಷ ಜಾನುವಾರುಗಳ ಬೆಲೆಯಲ್ಲಿ ದುಪ್ಪಟ್ಟು ಹೆಚ್ಚಳ ಕಂಡಿದೆ. ಒಂದು ಜೋಡೆತ್ತುಗಳು 2 ಲಕ್ಷದ ವರೆಗೆ ಮಾರಾಟವಾಗಿದ್ದು ಕಂಡು ಬಂದರೆ 1 ಹೋರಿಯ ಬೆಲೆ 1 ಲಕ್ಷದ 20 ಸಾವಿರದ ವರೆಗೆ ಮಾರಾಟವಾಗಿದ್ದು ಕಂಡುಬಂದಿತು.
ಸಲಕರಣಿಗಳ ಕೊಂಡುಕೊಳ್ಳವರಿಲ್ಲಾ:
ಜಾತ್ರೆಯಲ್ಲಿ ಜಾನುವಾರುಗಳಿಗೆ ಸಂಬಂದಿಸಿ ಗೆಜ್ಜಿ, ಗುಮಟೆ, ಹಗ್ಗ ಒಳಗೊಂಡಂತೆ ಇನ್ನಿತರ ಸಲಕರಣೆಗಳ ಮಾರಾಟ ಸಂಪೂರ್ಣ ಕುಂಟಿತಗೊಂಡಿದೆ ಸಲಕರಣೆಗಳ ಬೆಲೆಯಲ್ಲಿಯೂ ವರ್ಷಕ್ಕಿಂತ ಈ ವರ್ಷ ಹೆಚ್ಚಳ ಕಂಡುಬಂದಿದೆ ಜಾನುವಾರುಗಳನ್ನು ಕೊಂಡುಕೊಳ್ಳುವವರಿಕ್ಕಿಂತ ಮಾರಾಟ ಮಾಡಲು ಬಂದ ರೈತರೇ ಹೆಚ್ಚಳವಾಗಿದ್ದರಿಂದ ಸಲಕರಣೆಗಳ ಕೊಂಡುಕೊಳ್ಳುವವರು ಯಾರೂ ಇಲ್ಲದಂತಾಗಿದೆ ಇದರಿಂದ ವ್ಯಾಪಾರ ವೈಹಿವಾಟು ಕುಂಟಿತಗೊಂಡಿದೆ.
ಮುರಿಗೆಪ್ಪ ಜಮ್ಮಲದಿನ್ನಿ ಹಗ್ಗದ ವ್ಯಾಪಾರಿ:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಜಾನುವಾರುಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳಿಗೆ ಪ್ರತಿವರ್ಷದಂತೆ ಈ ಸಲವೂ ಕೂಡಾ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಹಾಗೂ ಇನ್ನಿತ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ
ಬಸವರಾಜ ಜುಮನಾಳ ಎಪಿಎಂಸಿ ಕಾರ್ಯದಶರ್ಿ: ಮಳೆ ಇರಲಾರದ್ದಕ್ಕ ಬಾಳ ತ್ರಾಸ ಆಗೈತ್ರಿ ದನಗೊಳಗೆ ತಿನ್ನಾಕ ಹಾಕಾಕ ಮೇವಿನ ಸಮಸ್ಯೆ ಆಗೈತ್ರಿ ಹಿಂಗಾಗಿ ಅವಕೂರಗೋಳ ನೋಡಾಕಾಲಾರ್ದಕ ಮಾರಾಕ ಬಂದೀನ್ರಿ ಆದ್ರಾ ದನಗೋಳನ ಅಡ್ಡೀಗ ದುಡ್ಡಿಗ ಕೇಳ್ತಾರೀ ನೋಡಬೇಕು ಏನಾಗತೈತಿ. ಶಿವಪ್ಪ ಯಂಕಂಚಿ ರೈತ