ಮಹಿಳಾ ಟಿ-20 ವಿಶ್ವಕಪ್ಗೆ ಅರ್ಹತೆ ಪಡೆದ ಥಾಯ್ಲೆಂಡ್-ಬಾಂಗ್ಲಾದೇಶ

ದುಬೈ, ಸೆ 6:     ಥಾಯ್ಲೆಂಡ್ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ಮಹಿಳಾ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿವೆ.  ಟಿ-20 ಮಹಿಳಾ ವಿಶ್ವಕಪ್ ಅರ್ಹತಾ ಸುತ್ತಿನ ಸೆಮಿಫೈನಲ್ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ತಂಡವನ್ನು ಥಾಯ್ಲೆಂಡ್ ಮಣಿಸುವ ಮೂಲಕ ಐಸಿಸಿ ಟಿ-20 ಮಹಿಳಾ ವಿಶ್ವಕಪ್ಗೆ ಚೊಚ್ಚಲ ಪ್ರವೇಶ ಮಾಡಿದೆ. ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ ಮಹಿಳಾ ತಂಡ ಐಲರ್ೆಂಡ್ ವಿರುದ್ಧ ನಾಲ್ಕು ವಿಕೆಟ್ಗಳಿಂದ ದಾಖಲೆಯ ಜಯ ಸಾಧಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ನೀಡಿದ್ದ 68 ರನ್ ಗುರಿ ಹಿಂಬಾಲಿಸಿದ ಥಾಯ್ಲೆಂಡ್ ಇನ್ನೂ 15 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು. 18ನೇ ಓವರ್ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಥಾಯ್ಲೆಂಡ್ ಈ ಸಾಧನೆಗೆ ಭಾಜನವಾಯಿತು.  ಥಾಯ್ಲೆಂಡ್ ಗೆಲುವು ಸಾಧಿಸುತ್ತಿದ್ದಂತೆ ತಂಡದ ಇತರೆ ಆಟಗಾರ್ತಿಯರು ಮೈದಾನಕ್ಕೆ ಇಳಿದು ವಿಶ್ವಕಪ್ ಅರ್ಹತೆ ಪಡೆದಿರುವ ಸಂಭ್ರಮ ಆಚರಿಸಿದರು. ಟಿ-20 ಮಹಿಳಾ ವಿಶ್ವಕಪ್ ಅರ್ಹತಾ ಸುತ್ತಿನ  ಏಷ್ಯಾ ಪ್ರಾಂತ್ಯದ ಏಳು ತಂಡಗಳಲ್ಲಿ ಥಾಯ್ಲೆಂಡ್ ದಾಖಲೆಯ ಜಯ ಸಾಧಿಸಿತು. ಇದಕ್ಕೂ ಮುನ್ನ ಕಳೆದ ಫೆಬ್ರವರಿಯಲ್ಲಿ ಥಾಯ್ಲೆಂಡ್ ಅರ್ಹತಾ ಸುತ್ತಿನ ಮುಖ್ಯ ಸುತ್ತಿಗೆ ಪ್ರವೇಶ ಮಾಡಿತ್ತು.  ಎರಡೂ ಸೆಮಿಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಥಾಯ್ಲೆಂಡ್ ಹಾಗೂ ಬಾಂಗ್ಲಾದೇಶ ಟಿ-20 ಮಹಿಳಾ ವಿಶ್ವಕಪ್ಗೆ ಅರ್ಹತೆ ಪಡೆದಿವೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟೂರ್ನಿಯಲ್ಲಿ ಇವೆರಡೂ ಭಾಗವಹಿಸಲಿವೆ. ಮೊದಲ ಪಂದ್ಯ ಆಸ್ಟ್ರೇಲಿಯಾ ಹಾಗೂ ಭಾರತ ಸೆಣಸಲಿವೆ.