ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು ದಾರಿ ದೀಪವಾಗಿವೆ: ಹುಕ್ಕೇರಿಮಠದ ಸದಾಶಿವ ಶ್ರೀಗಳು


ಲೋಕದರ್ಶನ ವರದಿ

ಹಾವೇರಿ07: ವಿದ್ಯಾಥರ್ಿಗಳಲ್ಲಿ ಶಾಲಾ ಹಂತದಿಂದಲೇ ಪ್ರಜಾಪ್ರಭುತ್ವದ ಉತ್ಕೃಷ್ಟ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ದೇಶ ಚಿಂತನೆಯ ಮನೋಭಾವ ಬೆಳೆಸುವಲ್ಲಿ ಶಾಲಾ ಸಂಸತ್ತಿನಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು ದಾರಿ ದೀಪವಾಗಿವೆ ಎಂದು   ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಗಳು ಹೇಳಿದರು. 

 ನಗರದ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2018-19 ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭದ  ಸಾನಿಧ್ಯ ವಹಿಸಿ ಮಾತನಾಡಿದರು.

 ಯಶಸ್ಸಿಗೆ ಅಡ್ಡ ದಾರಿಗಳಿಲ್ಲ. ಕಠಿಣ ಪರಿಶ್ರಮವೇ ಏಕೈಕ ದಾರಿಯಾಗಿದ್ದು, ವಿದ್ಯಾಥರ್ಿಗಳು ಜ್ಞಾನಾರ್ಜನೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸುಸಂಸ್ಕೃತ ಸಮಾಜ ನಿಮರ್ಾಣಕ್ಕೆ ಪ್ರಯತ್ನಿಸಬೇಕು. ಆ ಮೂಲಕ ಹೆತ್ತ ತಂದೆ ತಾಯಿಗೆ ಮತ್ತು ಕಲಿತ ಶಾಲೆಗೆ ಕೀತರ್ಿ ತರಬೇಕೆಂದು ಕಿವಿ ಮಾತು ಹೇಳಿದರು.

  ವಿದ್ಯೆ ಸಾಧಕನ ಸ್ವತ್ತೇ ಹೊರತು, ಸೋಮಾರಿಗಳ ಸ್ವತ್ತಲ್ಲ. ಹಾಗಾಗಿ ವಿದ್ಯಾಥರ್ಿಗಳು ಸ್ಪಷ್ಟ ಗುರಿಯೊಂದಿಗೆ, ಸತತ ಅಧ್ಯಯನ ಮಾಡಿ ಯಾವದೇ ಕಷ್ಟಕ್ಕೆ ಹೆದರದೇ ಜೀವನದಲ್ಲಿ ಮುನ್ನುಗ್ಗಿದಾಗ ಉಜ್ವಲವಾದ ಭವಿಷ್ಯವನ್ನು ತಮ್ಮದಾಗಿಸಿ ದೇಶದ  ಸತ್ಪ್ರಜೆಗಳಾಗಲು ಶ್ರಮಿಸಬೇಕೆಂದು ಹೇಳಿದರು.

 ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ತಜ್ಞ ವೀರಣ್ಣ ಅಂಗಡಿ ಮಾತನಾಡಿ, ಇಂದು ಮಕ್ಕಳ ಪ್ರಗತಿಯನ್ನು ಅಂಕಗಳ ಮೂಲಕ ಅಳೆಯಲಾಗುತ್ತದೆ. ಆದರೆ ಅಂಕಗಳೇ ಜೀವನದ ಮಾನದಂಡವಲ್ಲ. ಮಾನವೀಯ ಶಿಕ್ಷಣವು ಬದುಕಿಗೆ ದಾರಿದೀಪವಾಗಬಲ್ಲದು. ಆದ್ದರಿಂದ ಶಿಕ್ಷಕರು ವಿದ್ಯಾಥರ್ಿಗಳಿಗೆ ಶಿಕ್ಷಣದ ಜೊತೆಗೆ  ಉತ್ತಮ ಸಂಸ್ಕಾರವನ್ನು ನೀಡುವದು ಅವಶ್ಯಕವಾಗಿದೆ ಎಂದು ಹೇಳಿದರು. 

 ವಿದ್ಯಾಥರ್ಿಗಳು ದುಶ್ಚಟಗಳಿಗೆ ಹಾಗೂ ಮೊಬೈಲ್ಗೆ ದಾಸರಾಗದೇ ಅಮೂಲ್ಯವಾದ ವಿದ್ಯಾಥರ್ಿ ಜೀವನದಲ್ಲಿ ಸಜ್ಜನರ ಸಂಘ ಮಾಡಿ, ದೇಶದ ಸಂಪ್ರದಾಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳಿಸಿ ಕ್ರೀಯಾಶೀಲತೆ ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕೆಂದು ಹೇಳಿದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಎಸ್.ಎಸ್ ಮುಷ್ಠಿ ಮಾತನಾಡಿ,  ವಿದ್ಯಾಥಿಗಳು ಇಂದಿನ ತೀವ್ರ ಸ್ಪಧರ್ಾತ್ಮಕ ದಿನಗಳಲ್ಲಿ ಅಂಕಗಳನ್ನು ಗಳಿಸುವದರ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಜಾಸತ್ತಾತ್ಮಕ, ಸಾಮಾಜಿಕ, ಕೌಟುಂಬಿಕ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ತಮ್ಮ ಗಮ್ಯವನ್ನು ಮುಟ್ಟಲು ಶಿಕ್ಷಣವನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕೆಂದು  ಹೇಳಿದರು.

  ಇದೇ ಸಂದರ್ಭದಲ್ಲಿ  ಶಾಲಾ ಸಂಸತ್ತಿನ ವಿದ್ಯಾಥರ್ಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಬಡ ಪ್ರತಿಭಾವಂತ  ವಿದ್ಯಾಥರ್ಿಗಳಿಗೆ ಸಮವಸ್ತ್ರ ಹಾಗೂ ನೋಟಬುಕ್ಸ್ಗಳನ್ನು ವಿತರಿಸಲಾಯಿತು.

  ಸಮಾರಂಭದಲ್ಲಿ ಸಂಸ್ಥೆಯ  ಕಾರ್ಯದಶರ್ಿ ಜಗದೀಶ ತುಪ್ಪದ, ಉಪಾಧ್ಯಕ್ಷ ಷಣ್ಮುಖಪ್ಪ ಹತ್ತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ  ವೀಣಾ ಹಲಗಣ್ಣನವರ, ಮಹೇಶ ಚಿನ್ನಿಕಟ್ಟಿ, ಶಾಂತಣ್ಣ ಯಾವಗಲ್ಲ,  ಮುಖ್ಯೋಪಾಧ್ಯಾಯಿನಿ ಚನ್ನಮ್ಮ ಅಂತರವಳ್ಳಿ, ಎಸ್.ಎನ್ ಮಳೆಪ್ಪನವರ, ವಿ.ಬಿ ಬನ್ನಿಹಳ್ಳಿ, ಎಸ್.ಸಿ ಮರಳಿಹಳ್ಳಿ, ರೂಪಾ ಟಿ.ಆರ್, ಶೋಭಾ ನಾಶಿಪುರ, ರವಿ ಲಮಾಣಿ, ಎಂ.ಎಸ್ ಹಿರೇಮಠ, ರಾಜು ಬಾಕರ್ಿ, ನೀಲಾವತಿ ಅಂದಾನಿಮಠ, ಕವಿತಾ ಗುಡಗಂಟಿ, ಎಸ್.ಎಸ್ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.

 ಆರಂಭದಲ್ಲಿ ಸಹನಾ ಶಿರಸಪ್ಪನವರ ಪ್ರಾಥರ್ಿಸಿದರು. ಶಿಕ್ಷಕ ಎಸ್.ಸಿ ಮರಳಿಹಳ್ಳಿ  ಸ್ವಾಗತಿಸಿದರು. ಶಿಕ್ಷಕ ಕಾರ್ಯದಶರ್ಿ ಟಿ.ಕೆ ಪುಷ್ಪಾ ನಿರೂಪಿಸಿದರು. ಕೊನೆಯಲ್ಲಿ ರವಿ ಕರಲಿಂಗಣ್ಣನವರ ವಂದಿಸಿದರು.