ಉಗ್ರರ ಅಡಗುದಾಣ ಧ್ವಂಸ: ಗ್ರೆನೇಡ್, ಮದ್ದುಗುಂಡು ವಶ

ಜಮ್ಮು, ಮೇ 10,ಉಗ್ರರ ಅಡಗುತಾಣವನ್ನು ಸ್ಫೋಟಿಸಿರುವ ಸಾಂಬಾ ಪೊಲೀಸರು,   ಗೌರಬ್ ಪ್ರದೇಶದಿಂದ ಗ್ರೆನೇಡ್ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಭಾನುವಾರ ತಿಳಿಸಿದ್ದಾರೆ.ಗೌರನ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಾವು ಮದ್ದುಗುಂಡು ಮತ್ತು ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದೇವೆ ಎಂದು ಸಾಂಬಾದ ಎಸ್‌ಎಸ್‌ಪಿ ಶಕ್ತಿ ಪಾಠಕ್ ಸುದ್ದಿಗಾರರಿಗೆ ತಿಳಿಸಿದರು.ಎಕೆ 47ನ 54 ಜೀವಂತ ಗುಂಡುಗಳು, ಚೀನಾ ನಿರ್ಮಿತ ಜೀವಂತ ಹ್ಯಾಂಡ್‌ ಗ್ರೆನೇಡ್‌ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಸಾಂಬಾ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ವಸ್ತು ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.