ಸಿಆರ್ ಪಿ ಎಫ್ ಶಿಬಿರದ ಮೇಲೆ ಉಗ್ರರ ದಾಳಿ: ಒಬ್ಬ ಉಗ್ರ ಹತ

ಜಮ್ಮು, ಜನವರಿ 31, ನಗರದ ಹೊರವಲಯದಲ್ಲಿರುವ ನಾಗ್ರೋಟಾದ ಬಾನ್ ಟೋಲ್ ಬಳಿ ಸಿಆರ್ ಪಿ ಎಫ್ ಶಿಬಿರದ ಮೇಲೆ ಉಗ್ರರು ದಾಳಿ ಮಾಡಿದ್ದು ಪ್ರತಿಯಾಗಿ ಭದ್ರತಾಪಡೆ ನಡೆಸಿದ ಗುಂಡಿನ ಕಾರ್ಯಾಚರಣೆಯಲ್ಲಿ  ಒಬ್ಬ   ಭಯೋತ್ಪಾದಕ ಹತನಾಗಿದ್ದು,  ಒಬ್ಬ ಭದ್ರತಾ ಸಿಬ್ಬಂದಿ ಗಾಯಗಳಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಸಿಆರ್ಪಿಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ  "ಬಾನ್ ಟೋಲ್ ಬಳಿಯ ಸಿಆರ್ಪಿಎಫ್ ಶಿಬಿರದ ಮೇಲೆ  ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದಾಗ ಒಬ್ಬ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. 

ಮುಂಜಾನೆ,  ಭಯೋತ್ಪಾದಕರ ಗುಂಪು ನಾಗ್ರೋಟಾ ಪ್ರದೇಶದ ಬಾನ್ ಟೋಲ್ ಬಳಿ ಗುಂಡಿನ ದಾಳಿ ನಡೆಸಿತು  ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ನಾಗ್ರೋಟಾದ ಬಾನ್ ಟೋಲ್ನಲ್ಲಿ ಸಿಆರ್ಪಿಎಫ್ ಕ್ಯಾಂಪ್ ಬಳಿ ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆಎಂದು ಅವರು ಹೇಳಿದರು. "ಬಾನ್ ಟೋಲ್ ಪ್ಲಾಜಾದಲ್ಲಿ ಸಿಆರ್ಪಿಎಫ್ ಪೋಸ್ಟ್ ಬಳಿ ಗುಂಡಿನದಾಳಿ  ಘಟನೆ ಜರುಗಿದೆ, ಕತ್ತಲೆಯ ಲಾಭ ಪಡೆದು ಶಂಕಿತ ವ್ಯಕ್ತಿಗಳು ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ ಇದು ಭಯೋತ್ಪಾದಕ ದಾಳಿ ಎಂದು ಅವರು ಹೇಳಿದರು.  ಸಿಆರ್ಪಿಎಫ್ ಅಧಿಕಾರಿಯೊಬ್ಬರು, ಬಹಳ ಕಡಿಮೆ ಸಮಯದಲ್ಲೇ  ಮೇಲೆ ಉಗ್ರರು  ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಸರು, ಸಿಆರ್ಪಿಎಫ್ ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ವ್ಯಾಪಕ ಶೋಧನಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.