ತೆರಬಂಡಿ ರೈತರ ಸ್ವಾಭಿಮಾನದ ಪ್ರತೀಕ : ಮಹಾದೇವ ಮಾರಾಪುರ
Terabandi festival
ಮಹಾಲಿಂಗಪುರ 02: ರೈತನ ಹರ್ಷ ಹೆಚ್ಚಿಸುವ ಸ್ಪರ್ಧೆ ಯಾವುದಾದರು ಇದ್ದರೆ ಅದು ತೆರಬಂಡಿ ಉತ್ಸವ ಎಂದು ಹಾಲು ಉತ್ಪಾದಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾದೇವ ಮಾರಾಪೂರ ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಬಸವೇಶ್ವರ ಜಾತ್ರಾ ಕಮಿಟಿ ಏರಿ್ಡಸಿರುವ ತೆರಬಂಡಿ ಉತ್ಸವ ಮಂಗಳವಾರದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಈ ಕ್ರೀಡೆ ಪ್ರಾಚೀನ ಕಾಲದಿಂದ ಬಂದಿದ್ದಲ್ಲದೆ, ರೈತರ ಹಾಗೂ ನಾಡಿನ ಸ್ವಾಭಿಮಾನದ ಪ್ರತೀಕ.ಇಂದು ಆಧುನಿಕ ಭರಾಟೆಯಲ್ಲಿ ಕೃಷಿ ರಂಗವೂ ಕೂಡ ತಾಂತ್ರಿಕತೆ ಕಡೆಗೆ ವಾಲ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿ, ರೈತರು ಟ್ರ್ಯಾಕ್ಟರ್, ಟಿಲ್ಲರ್ ಗಳ ಮೊರೆ ಹೋಗುತ್ತಿದ್ದಾರೆ.
ಸಹಜವಾಗಿ ಹೋರಿ, ಎತ್ತುಗಳು ನೇಪಥ್ಯಕ್ಕೆ ಸರಿದು ಹವ್ಯಾಸಿಗಳು ಏರಿ್ಡಸುವ ತೆರಬಂಡಿ ಉತ್ಸವಗಳು ಕಳಾಹೀನವಾಗುತ್ತಿವೆ ಎಂಬ ಸಂದೇಹ ಕಾಡುತ್ತಿದೆ.ಇಂತಹ ಸಮಯದಲ್ಲಿಯೂ ಆಯೋಜಕರು ಪೂರ್ವಜರ ಕ್ರೀಡೆಗಳು ಕಣ್ಮರೆಯಾಗದಂತೆ ಶತಾಯ ಗತಾಯ ಶ್ರಮಿಸಿ ತೆರಬಂಡಿ ಉತ್ಸವಗಳಂತ ಸ್ಪರ್ಧೆಗಳನ್ನು ಏರಿ್ಡಸಿ ರೈತರ ಉತ್ಸಾಹ ಹೆಚ್ಚುವಂತೆ ಮಾಡುತ್ತಿರುವ ಕಮಿಟಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಕಮಿಟಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಯುವ ಮುಖಂಡ ನಿಂಗಪ್ಪ ಬಾಳಿಕಾಯಿ ಮತ್ತು ತೆರಬಂಡಿ ಪ್ರೇಮಿ ಕುಮಾರ್ ಬೋರಡ್ಡಿ ಮಾತನಾಡಿ, ರೈತರು, ರೈತರಿಗೋಸ್ಕರ ಏರಿ್ಡಸಿರುವ ಸ್ಪರ್ಧೆ. ಈ ಪಂದ್ಯಾವಳಿ ಯಶಸ್ವಿಗೆ ಮತ್ತು ರೈತ ಕ್ರೀಡೆಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಹಾಗೂ ಕಮಿಟಿ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಜ್ಯೋತಿ ಬೆಳಗುವ ಮತ್ತು ರಿಬ್ಬನ್ ಕತ್ತರಿಸುವ ಮೂಲಕ ತೆರಬಂಡಿ ಉತ್ಸವಕ್ಕೆ ಚಾಲನೆ ನೀಡಿದರು. ವಿಜುಗೌಡ ಪಾಟೀಲ, ನಜೀರ್ ಝಾರೆ, ಅರ್ಜುನ ದೊಡಮನಿ, ಸದಾಶಿವ ಗೊಬ್ಬರದ, ಅರ್ಜುನ ಮೋಪಗಾರ, ಅನೀಲ ದೇಸಾಯಿ, ಕುಮಾರ ಬೊರಡ್ಡಿ, ಕೃಷ್ಟಗೌಡ ಪಾಟೀಲ, ವಿಷ್ಟುಗೌಡ ಪಾಟೀಲ, ಮಹಾಲಿಂಗ ಪಾಟೀಲ, ವಿಠ್ಠಲ ಕುಳಲಿ, ಹಣಮಂತ ಪಟ್ಟಣಶೆಟ್ಟಿ, ವಿಠ್ಠಲಗೌಡ ಪಾಟೀಲ, ಸುರೇಶ ಶಿಂಧೆ,ಮಹಾಲಿಂಗ ಮಾಳಿ, ಈಶ್ವರ ಮಠದ, ಶಿವಶಂಕರ ಕಡಬಲ್ಲವರ, ಶ್ರೀಶೈಲ ಪಾಟೀಲ, ಶ್ರೀಶೈಲ ಮಠಪತಿ, ರಾಘು ಚಿಂಚಲಿ, ರಾಘು ಕಪರಟ್ಟಿ, ಕರಿಯಪ್ಪ ಕಪರಟ್ಟಿ, ರಾಘವೇಂದ್ರ ಅನೆಪ್ಪಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪತ್ರಕರ್ತ ಚಂದ್ರಶೇಖರ ಮೋರೆ ನಿರೂಪಿಸಿ, ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 