ಲೋಕದರ್ಶನವರದಿ
ಗುಳೇದಗುಡ್ಡ11: ಬಾದಾಮಿ ಬನಶಂಕರಿ ದೇವಸ್ಥಾನದ ಎದುರುಗಡೆ ಇರುವ ಹೊಂಡದ ಅಲಂಕಾರಕ ಪ್ರದಕ್ಷಿಣ ಹಾಕುವ ಪಥ ಅಂದಗೆಟ್ಟು ಪ್ರವಾಸಿಗರಿಗೆ ಅನಾನುಕೂಲವಾಗಿದೆ ಎಂದು ಭಕ್ತರು ಹೇಳುತ್ತಾರೆ.
ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಜಾತ್ರಗೆ ರಾಜ್ಯದ ಹಾಗೂ ಹೊರ ರಾಜ್ಯಗಳಿಂದಲೂ ಬರುತ್ತಾರೆ. ಅವರಿಗೆಲ್ಲ ವಿಶ್ರಾಂತಿಗೆ ಸಾಕಷ್ಟು ಅನುಕೂಲವಾಗಿರುವ ಮಂಟಪವಿದು. ನೂರಕ್ಕೂ ಹೆಚ್ಚು ಚಿಕ್ಕ ಚಿಕ್ಕ ಮಂಟಪಗಳಿವೆ. ಇವು ನೋಡಲು ಸುಂದರವಾಗಿಯೂ ಕಾಣುತ್ತವೆ. ಆದರೆ ಪ್ರತಿಬಾರಿ ಕೆಲವು ಭಕ್ತರು ಈ ಮಂಟಪಗಳನ್ನು ವಸತಿಗಗಿ ಪರದೆ ಕಟ್ಟಿ ಟೆಂಟ್ ತರಹ ಬಳಸಿಕೊಳ್ಳುತ್ತಾರೆ. ಇದರಿಂದ ಭಕ್ತರಿಗೆ ಕೆಳಗೆ ಇಳಿದು ಸ್ನಾನ ಮಾಡಲು ಅನಾನುಕೂಲವಾಗುತ್ತಿದೆ. ಅಲ್ಲದೆ ಕ್ಷಣ ಕಾಲ ವಿಶ್ರಾಂತಿ ಪಡೆಯಲೂ ಅನುಕೂಲವಾಗುತ್ತಿಲ್ಲ.
ಶಾಸಕರ ಇಚ್ಚಶಕ್ತಿಯಿಂದ ಈ ಬಾರಿ ಈ ಹೊಂಡಕ್ಕೆ ಸಾಕಷ್ಟು ನೀರು ಬಿಟ್ಟಿರುವ ಕಾರಣ ಹೊಂಡ ಸುಂದರವಾಗಿ ಕಾಣುತ್ತಿದೆ. ವಿದೇಶಿ ಪ್ರವಾಸಿಗರೂ ಬರುವ ಈ ಜಾತ್ರೆಗೆ ಕಳೆ ಎಂದರೆನೇ ಈ ವಿಶಾಲವಾದ ಚೌಕಾಕಾರದ ಹೊಂಡದ ಮಂಟಪ. ಒಂದು ಸುತ್ತು ಸುತ್ತು ಹಾಕಿ ಬಂದರೆ ಮನಸ್ಸಿಗೆ ಆಲ್ಹಾದಕರ ಉಂಟು ಮಾಡುತ್ತದೆ. ಆದರೆ ಈ ಟೆಂಟ್ ಹಾಕಿ ಅಂದಗೆಡಿಸಿ ಭಕ್ತ ವರ್ಗಕ್ಕೆ ಅನಾನುಕೂಲವಾಗಿದೆ. ಕಾರಣ ಟೆಂಟ್ಗಳನ್ನು ತೆರವುಗೊಳಿಸಬೇಕೆಂದು ಭಕ್ತರು ಶಾಸಕರನ್ನು ಒತ್ತಾಯಿಸಿದ್ದಾರೆ.
ಜಾತ್ರೆಯಲ್ಲಿ ಮಹಿಳೆಯರು ತೆಲೆಯ ಮೇಲೆ ಬುಟ್ಟಿ ಹೊತ್ತು ಇದೇ ಮಂಟಪದಲ್ಲಿ ಸಾವಿರಾರು ಜನ ಭಕ್ತರಿಗೆ ಮಂಟಪದಲ್ಲಿ ಕೂಡ್ರಿಸಿ ಊಣಬಡಿಸುತ್ತಾರೆ. ಆದರೆ ಈ ಬಾರಿ ಟೆಂಟ್ಗಳು ಮಂಟಪದಲ್ಲಿ ಕಂಡು ಬಂದಿದ್ದೂ ಮಹಿಳೆಯರ ಸ್ವಯಂ ಉದ್ಯೋಗಕ್ಕೂ ಪೆಟ್ಟು ಬಿದ್ದಿದೆ ಎಂದು ಚೋಳಚಗುಡ್ಡ ಗ್ರಾಮದ ಮಹಿಳೆ ಶಂಕ್ರಮ್ಮ ಹೇಳುತ್ತಾಳೆ. ಆದಷ್ಟು ಬೇಗ ಮಂಟಪದಲ್ಲಿನ ಕೆಲ ಟೆಂಟ್ಗಳನ್ನು ತೆರವುಗೊಳಿಸಬೇಕೆಂದು ಭಕ್ತರು ಶಾಸಕರನ್ನು ಆಗ್ರಹಿಸಿದ್ದಾರೆ.