ಜಮಖಂಡಿ 25: ನಗರ ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುವ ಜನರಿಂದ ನಿಗದಿಪಡಿಸಿದ ದರಗಳಂತೆ ಸಂತೆ ಕರ ವಸೂಲಿ ಮಾಡುವ ಟೆಂಡರ ಪ್ರಕಿಯೆ ಜರುಗಿತು.
ನಗರದ ನಗರಸಭೆ ಸಭಾಭವನದಲ್ಲಿ ನಡೆದ ಕರ ವಸೂಲಾತಿ ಟೆಂಡರನಲ್ಲಿ 8 ಜನ ಭಾಗವಹಿದರು. 8 ಜನರಲ್ಲಿ ಲೀಲಾವಿನ ತಮ್ಮಗೆ ಬೇಕಾದಷ್ಟು ಅನುಕೂಲಕ್ಕೆ ತಕಂತೆ ಬೇಡಿಕೆಯನ್ನು ಬೇಡಿದರು. ಅದರಲ್ಲಿ ಹೆಚ್ಚು ಮೊತ್ತದ ಬೇಡಿಕೆಯನ್ನು ಬೇಡಿದವರಿಗೆ ಲೀಲಾವು ಟೆಂಡರ್ ಅಂತಿಮವಾಯಿತು.
ಲೀಲಾವ ಟೆಂಡರ್‌ನಲ್ಲಿ ಅತೀ ಹೆಚ್ಚು ಮೊತ್ತದ 16 ಲಕ್ಷ 65 ಸಾವಿರ ರೂ,ಗಳ ಬೇಡಿಕೆಯನ್ನು ಮುತ್ತಪ್ಪ ಹಣಮಂತ ಬಜಂತ್ರಿ ಅವರು ಪಡೆದು ಟೆಂಡರ ತಮ್ಮದಾಗಿಸಿಕೊಂಡರು ಎಂದು ನಗರಸಭೆಯ ಪೌರಾಯುಕ್ತ ಜೋತಿ ಗೀರಿಶ ತಿಳಿಸಿದರು.
2025-26 ನೇ ಸಾಲಿನಲ್ಲಿ ಅತೀ ಹೆಚ್ಚಿನ ಮೊತ್ತದ ಬೇಡಿಕೆಯಾದ 16 ಲಕ್ಷ 65 ಸಾವಿರ ರೂ.ಗಳು ಆಗಿದೆ. ಇದು 12 ತಿಂಗಳದ ವರೆಗೆ ಮಾತ್ರ ಇರುತ್ತದೆ. ಕಳೆದ 2024 - 25 ರ ಸಾಲಿನಲ್ಲಿ 6 ಲಕ್ಷ 40 ಸಾವಿರ ರೂ.ಗಳವರೆಗೆ ಬೇಡಿಕೆಯಾಗಿತ್ತು. ಅದು ಪರಸಪ್ಪ ಮಾಳಿ ಅವರಿಗೆ ಟೆಂಡರ ಆಗಿತ್ತು. ಕೇವಲ 9 ತಿಂಗಳ ಮಾತ್ರ ಟೆಂಡರ ಆಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತ ಜೋತಿ ಗೀರಿಶ, ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕಂದಾಯ ನೀರೀಕ್ಷಕ ಅಮೀತ ಯಳಗಾರ, ಕಂದಾಯ ನೀರೀಕ್ಷಕ ಎಸ್.ಆರ್. ದೇವರಮನಿ, ಕರ ವಸೂಲಿಗಾರ ಅನೀಲ ಜೀರಗಾಳ ಸೇರಿದಂತೆ ಕರವಸೂಲಾತಿ ಟೆಂಡರ್‌ನಲ್ಲಿ ಪ್ರಕ್ರಿಯಲ್ಲಿ 8 ಜನರು ಇದ್ದರು.