ತಾಲೂಕಿನ ಆಯ್ದ ಹತ್ತು ರೈತರಿಗೆ ಗೌರವ ಸನ್ಮಾನ

Ten selected farmers of the taluk honored

ತಾಲೂಕಿನ ಆಯ್ದ ಹತ್ತು ರೈತರಿಗೆ ಗೌರವ ಸನ್ಮಾನ  

 ಶಿಗ್ಗಾವಿ 03 : ನಮ್ಮ ಪೂರ್ವಜರ ಆಹಾರ ಪದ್ಧತಿಯನ್ನು, ವಿಶೇಷವಾಗಿ ಉತ್ತರ ಕರ್ನಾಟಕದ ಪ್ರಸಿದ್ಧ ಆಹಾರ ಪದ್ಧತಿಯನ್ನು ದೇಶದಲ್ಲಿ ಪ್ರಥಮವಾಗಿ ತಯಾರಿಸಲ್ಪಡುತ್ತಿರುವ ಜವಾರಿ ಫುಡ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತಯಾರಿಸಲ್ಪಡುತ್ತಿರುವ ತನ್ನ ಆಹಾರ ಉತ್ಪನ್ನಗಳನ್ನು ಅಮೇರಿಕಾಗೆ ರು​‍್ತ ಮಾಡುವ ಅವಕಾಶ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ಷಣವನ್ನು ಅವಿಸ್ಮರಣೀಯವಾಗಿಸಲು ಎ. 4 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಆಯ್ದ ಹತ್ತು ರೈತರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜವಾರಿ ಫುಡ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಇಒ ಚೆನ್ನಯ್ಯ ಎಮ್ಮಟ್ಟಿ ಹಿರೇಮಠ ಹೇಳಿದರು.  

   ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ತಿಳಿಸಿದ ಅವರು ನೈಸರ್ಗಿಕ ಆಹಾರ ಪದಾರ್ಥಗಳಿಂದ ತಯಾರಿಸಲ್ಪಡುತ್ತಿರುವ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದ್ಧತಿಯ ಸುಮಾರು ಮೂವತ್ತಕ್ಕೂ ಹೆಚ್ಚು ಆಹಾರ ಪದಾರ್ಥಗಳು ಈ ಸಂಸ್ಥೆಯಲ್ಲಿ ತಯಾರಾಗುತ್ತಿದ್ದು. ಈಗಾಗಲೇ ಸಿಂಗಾಪುರ, ಆಸ್ಟ್ರೇಲಿಯಾ, ಯುಎಇ, ನ್ಯೂಜಿಲ್ಯಾಂಡ್, ಯುಎ???, ಜಪಾನ್ ಸೇರಿದಂತೆ ಹಲವಾರು ವಿದೇಶಗಳಲ್ಲಿ ಇಲ್ಲಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದ್ದು. ಕೆಪೆಕ್‌ ಸಂಸ್ಥೆ ಅನುಷ್ಠಾನಗೊಳಿಸುತ್ತಿರುವ ಪಿಎಂಎ???ಂಇ ಯೋಜನೆಯ ನೆರವನ್ನು ಪಡೆದುಕೊಂಡು ಸಂಸ್ಥೆಯ ಆಹಾರ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಲು ಯುಎ???ಫ್ ಡಿಎ ಪ್ರಮಾಣ ಪತ್ರವನ್ನು ಪಡೆಯಲಾಗಿರುತ್ತದೆ ಎಂದರು.  

  ಸಂಸ್ಥೆಯ ಸತತ ಪರಿಶ್ರಮ ಹಾಗೂ ಕೆಫೆಕ್ ಸಂಸ್ಥೆಯ ನೆರವಿನಿಂದ ದೊಡ್ಡ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ತಿಂಡಿ ತಿನಿಸುಗಳನ್ನು ಅಮೆರಿಕಕ್ಕೆ 40 ಅಡಿಗಳ ಕಾಂಟೇನರ್ ಮೂಲಕ ಮುಂಬೈ ಬಂದರೆ ನಿಂದ ರತ್ತು ಮಾಡಲಾಗುತ್ತಿದ್ದು ಇದನ್ನು ಸ್ಮರಣೀಯವಾಗಿಸಲು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಹಾಗೂ ನವೋದ್ಯಮಿಗಳಿಗೆ ಪ್ರೇರಣೆ ನೀಡಲು ಜವಾರಿ ಫುಡ್ ಪ್ರಾಡಕ್ಟ್‌ ಪ್ರೈವೇಟ್ ಲಿಮಿಟೆಡ್ ಶಿಗ್ಗಾವಿ, ಕೆಫೆಕ್ ಹಾಗೂ ಜಿಲ್ಲಾಡಳಿತ ಹಾವೇರಿ ವತಿಯಿಂದ ಎ. 4 ನೇ ಶುಕ್ರವಾರ ರಂದು ರೈತರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿ ಇ ಓ ಸೇರಿದಂತೆ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.