76 ದಿನಗಳ ‘ಪ್ರಜಾಸೌಧ’ ಹೋರಾಟಕ್ಕೆ ತಾತ್ಕಾಲಿಕ ವಿರಾಮ: ಹೋರಾಟಗಾರರ ಪಟ್ಟು ಸಡಿಲ
Temporary pause in 76-day 'Praja Soudha' protest: Protesters' resolve loosened
ತಾಳಿಕೋಟೆ 11: ಪಟ್ಟಣದ ವ್ಯಾಪ್ತಿಯಲ್ಲಿಯೇ ಸರ್ಕಾರಿ ಜಮೀನಿನಲ್ಲಿ ’ಪ್ರಜಾಸೌಧ’ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 76 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸೋಮವಾರದಂದು ತಾತ್ಕಾಲಿಕ ವಿರಾಮ ಘೋಷಿಸಲಾಗಿದೆ. ಹೋರಾಟಗಾರರ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಪರ್ಯಾಯ ಸ್ಥಳದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.ದೂರದ ಜಾಗಕ್ಕೆ ಸಾರ್ವಜನಿಕರ ವಿರೋಧ:ಈ ಮೊದಲು ಮೈಲೇಶ್ವರ ಬಳಿ ಪ್ರಜಾಸೌಧ ನಿರ್ಮಾಣಕ್ಕೆ ಆಡಳಿತ ಮಂಡಳಿ ಮುಂದಾಗಿತ್ತು. ಆದರೆ, ಈ ಸ್ಥಳವು ಪಟ್ಟಣದಿಂದ ಸುಮಾರು 4-5 ಕಿ.ಮೀ ದೂರವಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಸ್ಥಳೀಯರು ಹೋರಾಟ ಆರಂಭಿಸಿದ್ದರು.
ಪಟ್ಟಣದ ಹೃದಯಭಾಗದಲ್ಲಿರುವ ಸರ್ಕಾರಿ ವಿಶ್ರಾಂತಿ ಭವನ (ಋ) ಅಥವಾ ಹೆಸ್ಕಾಂ (ಊಇಖಅಓಒ)ಕಚೇರಿಯ ಜಾಗವನ್ನು ಪ್ರಜಾಸೌಧಕ್ಕೆ ಬಳಸಿಕೊಳ್ಳಬೇಕೆಂಬುದು ಹೋರಾಟಗಾರರ ಪ್ರಬಲ ಒತ್ತಾಯವಾಗಿತ್ತು.ಜಿಲ್ಲಾಧಿಕಾರಿಗಳ ಮಹತ್ವದ ಕ್ರಮ:ಹೋರಾಟದ ತೀವ್ರತೆಯನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ದಿನಾಂಕ 24.04.2026ರಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಪರ್ಯಾಯ ಸ್ಥಳ ನೀಡಿಕೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಪತ್ರದ ನಕಲು ಪ್ರತಿಗಳನ್ನು ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರಿಗೆ ಹಸ್ತಾಂತರಿಸಿ, ಸತ್ಯಾಗ್ರಹ ಕೈಬಿಡುವಂತೆ ಕೋರಿದರು.ಹೋರಾಟ ಸಮಿತಿಯ ಎಚ್ಚರಿಕೆ:ಪತ್ರ ಸ್ವೀಕರಿಸಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಮುರಾಳ, "ಜಿಲ್ಲಾಧಿಕಾರಿಗಳ ಸ್ಪಂದನೆಯನ್ನು ಗೌರವಿಸಿ ಸದ್ಯಕ್ಕೆ ಹೋರಾಟ ನಿಲ್ಲಿಸುತ್ತಿದ್ದೇವೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಈ ಪ್ರಸ್ತಾವನೆಗೆ ಮಂಜೂರಾತಿ ಪಡೆಯುತ್ತೇವೆ. ಒಂದು ವೇಳೆ ಮತ್ತೆ ಮೈಲೇಶ್ವರ ಬಳಿಯೇ ಕಟ್ಟಡ ಕಟ್ಟಲು ಮುಂದಾದರೆ, ನಮ್ಮ ಹೋರಾಟ ಪುನರಾರಂಭವಾಗಲಿದೆ" ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ನಂದಗಾವಿ, ತಹಶೀಲ್ದಾರ ಡಾ. ವಿನಯಾ ಹೂಗಾರ,ಸಿಪಿಐ ಹಾಗೂ ಪಿಎಸ್ಐ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು. ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಮುತ್ತಪ್ಪ ಚಮಲಾಪುರ, ಕಾಶೀನಾಥ ಸಜ್ಜನ, ಸುರೇಶ ಹಜೇರಿ, ಮಹೇಶ ಚಲವಾದಿ ಸಂಜು ಬರದೆನಾಳ, ಪ್ರಕಾಶ ಹಜೇರಿ, ನಾಗೇಶ ಕಟ್ಟಿಮನಿ, ಮುದಕಪ್ಪ ಬಡಿಗೇರ, ಮಂಜು ಶೆಟ್ಟಿ ಗಂಗಾಧರ ಕಸ್ತೂರಿ ಸುರೇಶ ಪುಲುಸ್ ಮಯೂರ ಪಾಟೀಲ, ಅಮಿತ್ ಮನಗೂಳಿ, ಪ್ರಭುಗೌಡ ಪಾಟೀಲ ಬಳಗನೂರ, ರಾಮಣ್ಣ ಕಟ್ಟಿಮನಿ, ಪರಶುರಾಮ ತಂಗಡಗಿ,ಕಳಕುಸಾ ರಂಗರೇಜ್, , ನಿಂಗನಗೌಡ ದೇಸಾಯಿ, , ಸದ್ದಾಂ ಹುಸೇನ್ ಬೀಳಗಿ, ರವಿ ಕಟ್ಟಿಮನಿ ಸೇರಿದಂತೆ ನೂರಾರು ಹೋರಾಟಗಾರರು ಭಾಗವಹಿಸಿದ್ದರು.
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ 