ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮರಂಭ

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮರಂಭ Award ceremony for SSLC and 2nd PUC toppers

ಲೋಕದರ್ಶನ ವರದಿ 

ಯರಗಟ್ಟಿ 11 : ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆಸಕ್ತಿಯಿಂದ ಓದಿದರೆ ಖಂಡಿತವಾಗಿಯೂ ಶೈಕ್ಷಣಿಕವಾಗಿ ಯಶಸ್ಸು ಪಡೆಯಬಹುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಯ ಭವಿಷ್ಯದ ಜೀವನಕ್ಕೆ ವಿದ್ಯೆ ಬಹಳ ಅವಶ್ಯಕತೆ ಇರುವದರಿಂದ ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು. 

ಗ್ರಾಪಂ ಮಾಜಿ ಅದ್ಯಕ್ಷ ಬಸವರಾಜ ಕಡಬಿ ಮಾತನಾಡಿ, ಶಿಕ್ಷಣ ಎಂದರೆ ಮಕ್ಕಳ ಸರ್ವೋತೊಮುಖ ಬೆಳವಣಿಗೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ, ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಿದರೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಸಾದ್ಯ ಎಂದರು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. 

ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಗ್ರಾಪಂ ಮಾಜಿ ಸದಸ್ಯ ಚೆನ್ನಯ್ಯ ಪೂಜೇರ, ವಿರೂಪಾಕ್ಷಯ್ಯ ಪೂಜೇರ, ವೈ.ಎಫ್‌.ನಾಯ್ಕರ, ಮಲ್ಲಿಕಾರ್ಜುನ ಯಡಳ್ಳಿ, ಮಲ್ಲನಾಯ್ಕ ನಾಯ್ಕರ, ಬಸವರಾಜ ಕಂಬಾರ, ಬಸಪ್ಪ ಬಡ್ರೋಳ್ಳಿ, ಈರಯ್ಯ ಗೌಡರ, ಗೌಡಪ್ಪ ನಾಯ್ಕರ, ವೇಂಕಣ್ಣ ಯರಡ್ಡಿ, ವೇಂಕಣ್ಣ ಕಮಕೇರಿ, ಕಲ್ಮೇಶ ಯಡಳ್ಳಿ, ಗಂಗಯ್ಯ ಗೌಡರ, ಪ್ರಕಾಶ ನಾಯ್ಕರ, ನಿಂಗಪ್ಪ ಬೀರ​‍್ಪನವರ ಕಲ್ಮೇಶ ಬಾಲರೆಡ್ಡಿ ಮತ್ತಿತರಿದ್ದರು.