ಉಳ್ಳಾಗಡ್ಡಿ-ಖಾನಾಪೂರ:-ಮಾನವನ ಬದುಕು ಬೆಲೆಯುಳ್ಳದ್ದು ಅದನದನು ಸಮರ್ಪಕವಾಗಿ ಬಳಸಿಕೊಂಡು ಭಗವಂತನ ಚಿಂತನೆ ಮಾಡುವುದು ನಮ್ಮೇಲ್ಲರ ಕರ್ತವ್ಯ ವಾಗಿದೆ ಎಂದು ಸಮರ್ಥಣೆಗಾಗಿ ಅರಭಾವಿಯ ಜಗದ್ಗುರು ಶ್ರೀ ದುರದುಂಡಿಶ್ವರ ಸಿದ್ದ ಸಂಸ್ಥಾನ ಮಠದ ಶ್ರೀ ಗುರು ಬಸವ ಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಮಂಗಳವಾರ ದಿ, 4 ರಂದು ಹುಕ್ಕೇರಿ ತಾಲೂಕಿನ ಯಲ್ಲಾಪುರ (ಕ) ಗ್ರಾಮದಲ್ಲಿ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ನೂತನ ದೇವಸ್ಥಾನದ ಲೋಕಾರೆ್ಣ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭಗವಂತನು ನಮಗೆ ಭೂಮಿ, ನೆಲ, ಜಲ, ಎಲ್ಲವನ್ನು ನೀಡಿದ್ದು ಭಗವಂತನಿಗೆ ಕೃತಜ್ಞತೆ ಸಲ್ಲಿಸಲು ನಾಮ ಸ್ಮರಣೆ ಅತ್ಯಗತ್ಯ ಜೀವನದಲ್ಲಿ ಹಣ ಆಸ್ತಿಗಿಂತ ಅಧ್ಯಾತ್ಮಿಕವು ಆಸ್ತಿ ಶ್ರೇಷ್ಠ ವಿಶಾಲವಾದ ಮನಸ್ಸಿನಿಂದ ಎಲ್ಲರೂ ನನ್ನವರೆಂಭ ಭಾವನೆಯಿಂದ ಬದುಕಿದರೇ ಅವರೇ ಮಹಾತ್ಮರು ಈ ಶರೀರಕ್ಕೆ ಬೆಲೆ ದೊರೆಯಬೇಕಾದರೆ ಉತ್ತಮ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವೆನಿಸುತ್ತದೆ ಎಂದು ಹೇಳಿದರು,
ಅಂಕಲಗಿ-ಕುಂದರಗಿ ಶ್ರೀ ಅಡವಿಸಿದ್ದೇಶ್ವರ ಮಠದ ಡಾ. ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿದರು, ಕಮತೆನಟ್ಟಿಯ ಪ್ರಭುಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಗುರುದೇವರು ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ತವಗದ ಶ್ರೀ ಮುದಿ ಬಾಳಯ್ಯ ಮಹಾಸ್ವಾಮಿಗಳು ಬಸ್ಸಾಪುರದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಯುವ ಧುರಿಣ ರಾಹುಲ ಜಾರಕಿಹೊಳಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಕಲಗೌಡ ಪಾಟೀಲ, ಯಲ್ಲಾಪುರ ಪಿಕೆಪಿಎಸ್ ಅಧ್ಯಕ್ಷ ಅಡಿವೆಪ್ಪಾ ಜಿಂಡ್ರಾಳಿ, ಡಾ. ಲಖಮಗೌಡ ಪಾಟೀಲ, ಮಾನಿಕರಾವ ಪಾಟೀಲ, ಕಾಶಪ್ಪಾ ಪಾಟೀಲ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು, ನಿವೃತ್ತ ಶಿಕ್ಷಕ ಜಿ ವ್ಹಿ ಮಾಳಗಿ ಕಾರ್ಯಕ್ರಮ ನಿರೂಪಿಸಿದರು.