ದೇವಸ್ಥಾನ ಸಮುದಾಯ ಭವನ-20 ಲಕ್ಷ ಕಾಮಗಾರಿ ಚಾಲನೆ
Temple Community Bhawan-20 Lakh work started
ದೇವಸ್ಥಾನ ಸಮುದಾಯ ಭವನ-20 ಲಕ್ಷ ಕಾಮಗಾರಿ ಚಾಲನೆ
ಸಂಬರಗಿ 31: ಈ ವರ್ಷ ಒಂದು ತಿಂಗಳ ಮುಂಚಿತವಾಗಿ ಮಳೆಯಾದ ಕಾರಣ ನೀರಾವರಿ ಯೋಜನೆಯ ಕಾಮಗಾರಿ ವಿಳಂಬವಾಗಿದೆ. ಇಲ್ಲವಾದರೆ, ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಮುಕ್ತಾಯಗೊಳ್ಳುತ್ತಿದ್ದು, ಮಳೆಯಿಂದ ವಿಳಂಬವಾಗಿದೆ ಎಂದು ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ಹೇಳಿದರು. ಖಿಳೇಗಾಂವ ಗ್ರಾಮಗಳಲ್ಲಿ ದೇವಸ್ಥಾನ ಸಮುದಾಯ ಭವನ ಕಾಮಗಾರಿ ಚಾಲನೆ ನೀಡಿ ಮಾತನಾಡಿ ಅವರು ನಾವು ಹೇಳಿದ ಪ್ರಕಾರ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಯ ಪ್ರಭಾವದಿಂದ ವಿಳಂಬವಾಗಿದ್ದು, ಶೀರ್ಘದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ನೀರು ಹರಿಸುತ್ತೇನೆ. ಸನ್ 2026ರ ಜೂನ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುತ್ತೇವೆ. ಮಳೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕ್ಷೇತ್ರದಲ್ಲಿ 74 ಸಮುದಾಯ ಭವನ 13 ಕೋಟಿ ರೂಪಾಯಿ ಮಂಜೂರಾತಿ ಮಾಡಿ ಪ್ರತಿ ಗ್ರಾಮದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಮಾಡುತ್ತೆವೆ. ಕ್ಷೇತ್ರದಲ್ಲಿ ನೆನಗುದ್ದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಈ ವೇಳೆ ವಿನಾಯಕ ಬಾಗಡಿ, ಖಂಡೇರಾವ ಘೋರೆ್ಡ, ಜಿಲ್ಲಾ ಪಂಚಾಯತ ಅಭಿಯಂತರರಾದ ವಿರಣ್ಣ ವಾಲಿ, ಕಿರಿಯ ಅಭಿಯಂತರರು ಮಡಿವಾಳ ಪಾಟೀಲ, ವಿಶಾಲ ನಿಂಬಾಳ, ಹೊಣ್ಣಪ್ಪ ಬಗಲಿ, ರಮೇಶ ಪಾಟೀಲ, ಸತೀಶ ಹೊನ್ನಾಗೋಳ, ಸಂತೋಷ ದಿವಾನಗೋಳ, ರಾಮ ಶಿರಗುಪ್ಪಿ, ಸುರೇಶ ಅವಟಿ, ದಿಪಕ ಶಿವಾಗೋಳ, ರಘುನಾಥ ಹಜಾರೆ, ಎಸ್.ಎಲ್ ಪಾಟೀಲ ಇನ್ನೀತರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 