ಧಾರವಾಡ: ನಿಜವಾದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿ ಕುರಿತು ಸತ್ಯವಾದ ಮುಂದಿನ ಜನಾಂಗಕ್ಕೆ ತಿಳಿಸುವ ಜವಾಬ್ದಾರಿ ಚರಿತ್ರೆಕಾರರ ಮೇಲಿದೆ ಎಂದು ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿದರ್ೇಶಕ ಡಾ. ಬಿ.ಕೆ.ಎಸ್. ವರ್ಧನ್ ಹೇಳಿದರು.
ಅವರು ಕರ್ನಾ ಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗ ಮತ್ತು ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ಕವಿವಿಯ ಮಾನಸೋಲ್ಲಾಸ ಸಭಾಂಗಣದಲ್ಲಿ ವಿಶ್ವ ಪರಂಪರೆ ಸಪ್ತಾಹ ಅಂಗವಾಗಿ 'ಕರ್ನಾ ಟಕ ಸಾಂಸ್ಕೃತಿಕ ಪರಂಪರೆ' ವಿಷಯ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದರು.
ಇಂದಿನ ವಿದ್ಯಾರ್ಥಿ ಗಳು ನಿಜವಾದ ಪಾರಂಪರಿಕವಾದ ಜ್ಞಾನ ತಿಳಿದುಕೊಳ್ಳುವ ಅವಶ್ಯಕತೆ ಇದೆ. ತತ್ವಜ್ಞಾನವನ್ನು ಬ್ರ್ಯಾಂಡ್ ಮಾಡುವುದರಿಂದ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ಯಜಮಾನ್ಯ, ಏಕ ವ್ಯಕ್ತಿಯ ಸಂಸ್ಕೃತಿ, ಸಿದ್ಧಾಂತ ಮತ್ತು ಪರಂಪರೆಗಿಂತ ಬಹುಜನರ ಜನಪದ ಸಂಸ್ಕೃತಿ, ಪರಂಪರೆಯು ಸಮ್ಮತವಾದ ಮೌಲ್ಯಗಳನ್ನು ಒಳಗೊಂಡಿರುತ್ತದೆ. ಬುದ್ಧನ ತತ್ವ ಮತ್ತು ಆತನ ಮೌಲ್ಯಗಳು ಪ್ರಸ್ತುತ ಸಾಮಾಜಿಕ ವ್ಯವಸ್ಥೆಗೆ ಅವಶ್ಯಕತೆ ಇದೆ ಎಂದರು. ಜನಪದದ ಬಹುಜನ ಸಂಸ್ಕೃತಿ ಮತ್ತು ಪರಂಪರೆಯು ವ್ಯಕ್ತಿಗೆ ಬದಕುವ ಕಲೆ ಕಲಿಸುತ್ತದೆ. ವಿಕೃತವಾದ ಸಂಸ್ಕೃತಿ, ಪರಂಪರೆ ಸಮಾಜಕ್ಕೆ ಮತ್ತು ದೇಶಕ್ಕೆ ಮಾರಕವಾಗಲಿದೆ ಎಂದರು.
ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಮ್. ಸಾಲಿ ಮಾತನಾಡಿ, ಹಿರಿಯರಿಂದ ಬಂದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳಸುವುದರ ಜೊತೆಗೆ ನಾಡಿನ ಐತಿಹಾಸಿಕ ಚರಿತ್ರೆಯ ಪರಂಪರೆಯ ಕುರಿತು ಇಂದಿನ ವಿದ್ಯಾಥರ್ಿಗಳಿಗೆ ತಿಳಿಸುವ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿಲಾಧರ ಮುಗಳಿ ಮಾತನಾಡಿ, ಕನರ್ಾಟಕದ ಚರಿತ್ರೆಯ ಪರಂಪರೆಯಲ್ಲಿ ಆಥರ್ಿಕ, ಸಾಮಾಜಿಕ ರಾಜಕೀಯ ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿದ್ದು, ಇತಿಹಾಸಕ್ಕೆ ಪರ್ಯಾ ಯ ಪದವಾಗಿ ಪರಂಪರೆ ಎನ್ನುವ ಪದ ಬಳಸಲಾಗುತ್ತಿದ್ದು, ಪರಂಪರೆ ಹೆಸರಿನಲ್ಲಿ ಸತಿ ಸಹಗಮನ, ದೇವದಾಸಿ ಪದ್ದತಿಯಂತಹ ಪರಂಪರೆಗಳು ಸಮಾಜಕ್ಕೆ ಮಾರಕವಾಗಿದ್ದು, ಯುವ ಸಂಶೋಧಕರು ಪರಂಪರೆಯ ಕುರಿತು ಸರಿಯಾಗಿ ಅರ್ಥೈ ಸಿಕೊಳ್ಳಬೇಕು ಎಂದರು.
ಡಾ.ಶಿವರುದ್ರ ಕಲ್ಲೋಳಿಕರ್, ಡಾ.ಎಸ್.ಕೆ.ವಾಸುದೇವ, ಡಾ.ಎಲ್.ಪಿ.ಮಾರುತಿ, ಡಾ. ಆರ್.ಎಮ್. ಷಡಕ್ಷರಯ್ಯ, ಡಾ. ಈರಣ್ಣ ಪತ್ತಾರ, ಡಾ ಜಗದೀಶ್ ಕಿವುಡನವರ, ಡಿನ್ರಾದ ಡಾ. ಟಿ.ಎಂ.ಭಾಸ್ಕರ್ ಸೇರಿದಂತೆ ದೇಶದ ಇತರೆಡೆಗಳಿಂದ ಆಗಮಿಸಿದ ಸಂಶೋಧಕರು ಪ್ರಾಧ್ಯಾಪಕರು ವಿದ್ಯಾರ್ಥಿ ಗಳು 60ಕ್ಕೂ ಅಧಿಕ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಿದರು.