ಬೆಂಗಳೂರು, ಫೆ 05 ,ತಾಯಿಯ ಮಮತೆಯನ್ನು ಸಾರುವ ಹಲವು ಚಿತ್ರಗಳು ಚಂದನವನದಲ್ಲಿ ತೆರೆಕಂಡಿವೆಯಾದರೂ, ವಿಭಿನ್ನ ರೀತಿಯಲ್ಲಿ ಚಿತ್ರಿತವಾಗಿರುವ ‘ಸಾಗುತ ದೂರ ದೂರ’ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುವುದು ಖಚಿತ ಎಂದು ನಿರ್ದೇಶಕ ರವಿತೇಜ ಹೇಳಿದ್ದಾರೆ ತಾಯಿಯನ್ನು ಹುಡುಕಿಕೊಂಡು ಹೊರಟ ಮಗ, ಮಮತಾಮಯಿಯರಾದ ಹಲವು ತಾಯಂದಿರನ್ನು ಭೇಟಿ ಮಾಡುವ ವಿಶಿಷ್ಟ ಚಿತ್ರವಿದು ಎಂದ ರವಿತೇಜ, “ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ, ಭದ್ರವಾಗಿ ನೆಲೆಯೂರಲು ಸಾಧ್ಯವಾಗಿಲ್ಲ ಇದಕ್ಕೆ ಕಾರಣ ಹಲವಾರು ಬಹುಶಃ ಈ ಚಿತ್ರ ಗೆಲ್ಲದಿದ್ದಲ್ಲಿ ನನ್ನ ಕೊನೆಯ ಚಿತ್ರವೂ ಆದೀತು ಎಂದು ಗದ್ಗದಿತರಾದರು “ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ನಾಯಕರ ಚಿತ್ರಗಳನ್ನು ನಿರ್ದೇಶಿಸಲು ಅವಕಾಶ ಸಿಕ್ಕಿತ್ತು ಆದರೆ ಧಾರಾವಾಹಿಗಳ ಕಮಿಟ್ ಮೆಂಟ್ ಇದ್ದಿದರಿಂದ ಸಾಧ್ಯವಾಗಲಿಲ್ಲ ಮತ್ತೊಂದೆಡೆ ಕುಟುಂಬದ ಸಮಸ್ಯೆಗಳತ್ತಲೂ ಗಮನಹರಿಸಬೇಕಿತ್ತು ಎಂದು ಕಣ್ಣೀರು ಮಿಡಿದರು‘ಸಾಗುತ ದೂರ ದೂರ’ ಚಿತ್ರದಲ್ಲಿ ಅಪೇಕ್ಷಾ ಪುರೋಹಿತ್, ಮಹೇಶ್, ದೀಕ್ಷಿತ್ ಶೆಟ್ಟಿ, ಜಾಹ್ನವಿ ಜ್ಯೋತಿ, ಉಷಾ ಭಂಡಾರಿ ಮುಂತಾದವರಿದ್ದಾರೆ. ನಿರ್ಮಾಪಕ ಅಮಿತ್ ಪೂಜಾರಿ, “ನಾನು ನನ್ನ ತಾಯಿಯನ್ನು ಅತಿಹೆಚ್ಚು ಪ್ರೀತಿಸುತ್ತೇನೆ ಅದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ ಹೀಗಾಗಿಯೇ ಅಂತಹ ಕಥಾಹಂದರದ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಲು ಒಪ್ಪಿಕೊಂಡೆ” ಎಂದಿದ್ದಾರೆ.