ಲೋಕದರ್ಶನ ವರದಿ
ಪಿಯೂಸಿ ವಿಜ್ಞಾನದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ತೇಜಸ್ವಿನಿಗೆ ಸನ್ಮಾನ
ಕಂಪ್ಲಿ 21: ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ 177ನೇಮಹಾಮನೆ ಕಾರ್ಯಕ್ರಮ ನಡೆಯಿತು. ಎಮ್ಮಿಗನೂರಿನ ಬ್ರಾಹ್ಮಣಿಕ್ಯಾಂಪಿನ ಸಕಿಪ್ರಾ ಶಾಲೆ ಅತಿಥಿ ಶಿಕ್ಷಕ ಎಚ್.ಪಂಪಾಪತಿ ‘ಶರಣರ ವೈಚಾರಿಕ ನಿಲುವುಗಳು’ ಕುರಿತು ವಿಶೇಷ ಉಪನ್ಯಾಸ ನೀಡಿ, ಶರಣ ಸಾಹಿತ್ಯ ಸೇರಿದಂತೆ ದಾರ್ಶನಿಕರ ತತ್ವಾದರ್ಶಗಳನ್ನು ಬಾಯಿಚಪಲಕ್ಕೆ ಸೀಮಿತವಾಗಿದ್ದು ನಿತ್ಯ ಜೀವನದಲ್ಲಿ ಅನುಷ್ಠಾನಗೊಳಿಸಿಕೊಂಡಿಲ್ಲ. ಮನುಷ್ಯ ಮನುಷ್ಯನಾಗಿ ಬದುಕುವ ಕಲೆಯನ್ನು ಕಲಿಯಬೇಕಿದೆ. ಕಲ್ಲು ಮಣ್ಣು ಎಲ್ಲದರಲ್ಲಿ ದೇವರನ್ನು ಕಾಣುವ ಮನುಷ್ಯ ತನ್ನಂತಿರುವ ಮನುಷ್ಯನಲ್ಲಿ ದೇವರನ್ನು ಕಾಣುತ್ತಿಲ್ಲ.
ಬಸವಣ್ಣ ಸೇರಿ ಶರಣರ ತತ್ವಗಳು ಸಮಾನತೆ, ಜಾತ್ಯಾತೀತತೆ, ಕಾಯಕ ಮಹತ್ವ, ದಾಸೋಹ ತತ್ವ, ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತವೆ. ಸೂರ್ಯಚಂದ್ರರಿರುವತನಕ ಬಸವಣ್ಣನವರ ವಚನ ಸಾಹಿತ್ಯ ಅಮೂಲ್ಯವಾಗಿರುತ್ತದೆ. ಸಮಾನತೆ, ಸಹಬಾಳ್ವೆ, ಶಾಂತಿ, ನೆಮ್ಮದಿ, ಸಹೋದರತೆ ಬಸವಣ್ಣನವರ ವಚನಗಳ ತಿರುಳಾಗಿದೆ ಎಂದರು.ಪರಿಷತ್ತು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿ ಮಾತನಾಡಿ, ಎಲ್ಲ ಸಮಸ್ಯೆಗಳಿಗೂ ಶರಣರ ವೈಚಾರಿಕತೆಯಿಂದ ಪರಿಹಾರ ದೊರಕಲು ಸಾಧ್ಯವಿದೆ. ಭ್ರಷ್ಟಾಚಾರ, ಬಡತನ, ಹಿಂಸೆಗಳಿಂದ ದೂರವಾಗಲು ಶರಣರ ವೈಚಾರಿಕ ನಿಲುವುಗಳನ್ನು ಅರಿತು ಪಾಲಿಸಬೇಕಿದೆ ಎಂದರು.
ದ್ವೀತಿಯ ಪಿಯೂಸಿ ವಿಜ್ಞಾನದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ತೇಜಸ್ವಿನಿ ಅಶೋಕ ಕುಕನೂರರನ್ನು ಗೌರವಿಸಲಾಯಿತು. ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಸಂಚಾಲಕ ಬಡಿಗೇರ ಜಿಲಾನ್‌ಸಾಬ್, ಪರಿಷತ್ತು ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಕೆ.ಚಂದ್ರಶೇಖರ, ಎಸ್.ಶಾಮಸುಂದರರಾವ್, ಅಶೋಕ, ಎಸ್.ರಾಮು, ಪೀರಾಸಾಬ್, ಬಿ.ಎಂ.ಪುಷ್ಪಾ, ಬಿ.ಎಂ.ರುದ್ರಯ್ಯ,ತೆಂಗಿನಕಾಯಿ ತಿಪ್ಪೇಸ್ವಾಮಿ, ಅಂಬಿಗರ ಮಂಜುನಾಥ, ಜೀರು ಲೋಕೇಶ್ ಸೇರಿ ಇತರರಿದ್ದರು.