ತೇಜಶ್ವಿನಿ ಸ ಚೇಂದ್ರ ಲಂಬುಗೆ ಪಿಎಚ್‌ಡಿ ಪದವಿ ಪ್ರದಾನ

Tejashwini S. Chandra Lambu was conferred with the degree of Ph.D

ವಿಜಯಪುರ 10: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ 16ನೇ ಘಟಿಕೋತ್ಸವದಲ್ಲಿ ಸ್ನಾತ್ತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾದ ತೇಜಶ್ವಿನಿ  ಸಚೇಂದ್ರ  ಲಂಬು ಅವರು ಪ್ರೋ. ಶಾಂತಾದೇವಿ ಟಿ. ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “ಇನ್ಫಮೇಷನ್ ಲಿಟರೆಸಿ ಸ್ಕಿಲ್ಸ್‌ ಅಮಂಗ್ ಡಿಸೇಬಲ್ಡ್‌ ಪೀಪಲ್‌: ಎ ಸ್ಟಡಿ ಆಫ್ ವಿಜಯಪುರ ಡಿಸ್ಟ್ರಿಕ್ಟ್‌” ಕುರಿತು ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ.  

ಇವರಿಗೆ ಕುಲಪತಿ ಪ್ರೋ. ಬಿ.ಕೆ. ತುಳಸಿಮಾಲಾ, ಕುಲಸಚಿವ ಪ್ರೋ. ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೋ.ಎಚ್‌.ಎಂ. ಚಂದ್ರಶೇಖರ ಅವರು ಅಭಿನಂದಿಸಿದ್ದಾರೆ.