ಬೆಂಗಳೂರು: ಸುಪ್ರೀಂ ಕೋಟರ್್ ನ ಪಂಚಪೀಠದ ನ್ಯಾಯಾಧೀಶರು ಐತಿಹಾಸಿಕ ತೀಪು ನೀಡಿದ್ದಾರೆ.ಅದಕ್ಕಾಗಿ ನಾನು ಹರ್ಷ ವ್ಯಕ್ತಪಡಿಸುತ್ತೇನೆ. ಸತ್ಯಮೇವ ಜಯತೆ ಎಂಬ ತತ್ವಕ್ಕೆ ಶಕ್ತಿ ತುಂಬಿದೆ. ಭಾರತ ಏಕತೆ ಎತ್ತಿ ತೋರಿಸುವ ನ್ಯಾಯಾದೀಶರ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಒಂದೂವರೆ ಶತಮಾನಗಳ ವಿವಾದ ಕ್ಕೆ ಸುಪ್ರೀಂ ಕೋಟರ್್ ಪಂಚಪೀಠಗಳ ನ್ಯಾಯಾಧೀಶರು ಸರ್ವ ಸಮ್ಮತ ತೀಮರ್ಾನವನ್ನು ಪ್ರಕಟಿಸಿದ್ದಾರೆ.ಇಂದೊಂದು ಭಾರತೀಯ ಭಾವೈಕ್ಯತೆಯ ತೀಪರ್ಾಗಿದ್ದು,ಇಡೀ ದೇಶದ ಜನರು ಇದನ್ನು ಸ್ವಾಗತಿಸಿದ್ದಾರೆ.ದೇಶದ ಎಲ್ಲರೂ ಸೇರಿ ಅಯೋಧ್ಯೆಯನ್ನು ಪ್ರಭು ರಾಮ ಚಂದ್ರನ ಮಂದಿರ ನಿಮರ್ಿಸಲು ಮುಂದಾಗಬೇಕಿದೆ.ಕೇಂದ್ರ ಹಾಗೂ ರಾಜ್ಯ ಸಕರ್ಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದಲ್ಲಿ ಶಾಂತಿ ಸೌಹಾರ್ದತೆ ಯನ್ನು ಕಾಪಾಡಿದೆ ಎಂದರು.
ರಾಜ್ಯದಲ್ಲಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣದ ಮೂಲಕ ರಾಷ್ಟ್ರ ಮಂದಿರ ಆಗಬೇಕು.ತೀಪು ಹಿಂದು ಗಳ ಪರ ಬಂದಿದ್ದಕ್ಕಾಗಿ ವಿಜಯದ ಸಂಭ್ರಮ ಆಚರಣೆ ಮಾಡಬೇಕಾಗಿಲ್ಲ.ಪಕ್ಷದಿಂದ ಯಾವುದೇ ಆಚರಣೆ ಸಂಭ್ರಮ ನಡೆದಿಲ್ಲ ಹಾಗೂ ನಡೆಸುವುದೂ ಇಲ್ಲ. ಆದರೆ ಕೆಲವರು ವ್ಯೆಯಕ್ತಿಕವಾಗಿ ಕೆಲವರು ಸಂಭ್ರ ಮ ಮಾಡಿದ್ದರೆ ಅದು ಅವರ ಹಕ್ಕು ಎಂದು ಅವರು ತಿಳಿಸಿದರು.
ದೇಶದಲ್ಲಿ ಶಾಂತಿ ಸೌಹಾರ್ದತೆಗಾಗಿ ಕೇಂದ್ರ ಮುನ್ನಚ್ಚ ರಿಕೆಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಎಲ್ಲರೂ ಶಾಂತಿ ಸೌಹಾರ್ದವಾಗಿ ಇರಬೇಕು.ಬಿಜೆಪಿ ಸುಪ್ರೀಂ ಕೋಟರ್್ ತೀರ್ಪ ನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ.ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಲೇವಡಿ ಮಾಡಿದರು.
ಇಡೀ ದೇಶವೇ ತೀರ್ಪನ್ನು ಸ್ವಾಗತಿಸುವ ಸಮಯವಾಗಿ ದ್ದು ಅದನ್ನು ವಿಮಶರ್ಿಸುವುದು ಅನಗತ್ಯ.ಕೆಲವರು ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರೆ.ಪ್ರಜಾಪ್ರಭುತ್ವದ ಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ ಎಂದರು.