ಹದಿಹರೆಯದವರ ಆರೋಗ್ಯ ದಿನಾಚರಣೆ

ಲೋಕದರ್ಶನವರದಿ

ಮಹಾಲಿಂಗಪುರ:  ಕೆ.ಎಲ್.ಇ ಡಿಪ್ಲೋಮಾ ಕಾಲೇಜ ಮಹಾಲಿಂಗಪುರದಲ್ಲಿ ಕೆಎಲ್ಇ ವಿ-ಕೇರ ಸವರ್ಿಸಸ್ ಬೆಳಗಾವಿ ಹಾಗು ಸಮುದಾಯ ಆರೋಗ್ಯ ಕೇಂದ್ರ ಮಹಾಲಿಂಗಪುರ ಇವರ ಸಂಯುಕ್ತ ಆಶ್ರಯದಲ್ಲಿ ದಿ. 14 ಹದಿಹರೆಯದವರ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅದ್ಯéಕ್ಷತೆ ವಹಿಸಿದ ಡಾ. ಬಿ.ಎಸ್.ಅಂಬಿ ಮಾತನಾಡಿ, ಹದಿಹರೆಯದ ಯುವಕ ಹಾಗೂ ಯುವತಿಯರ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳು ತೀವ್ರಗತಿಯಲ್ಲಿ ಆಗಿ ಮುಜುಗರಪಟ್ಟುಕೊಳ್ಳುವಂತಾಗುತ್ತದೆ,  ಅದಕ್ಕೆ ಹೆದರದೆ ಮತ್ತು ನಾಚಿಕೊಳ್ಳದೆ ಹಿರಿಯರ ಹಾಗೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.  ಪ್ರಾಚಾರ್ಯ ಎಸ್.ಐ.ಕುಂದಗೋಳ   ವಿ-ಕೇರ ಸವರ್ಿಸಸ್ ಸಂಸ್ಥೆಯಿಂದ ಕೆಎಲ್ಇ ಸಂಸ್ಥೆಯ ವಿದ್ಯಾಥರ್ಿಗಳಿಗೆ ಸಿಗುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿವರಿಸಿದರು.

 ಸಮಾಲೋಚಕರಾಗಿ ಆಗಮಿಸಿದ ವಿನಯಕುಮಾರ ಮುಡಸಿ ಮಾತನಾಡಿ ಹದಿಹರೆಯದವರ ಸಮಸ್ಯೆಗಳಿಗೆ ನಿಯಮಿತ ಹಾಗೂ ಕ್ರಮಬದ್ಧವಾದ ಪೌಷ್ಟಿಕ ಆಹಾರ ಸೇವನೆ ಮುಖ್ಯ ಎಂದರು. ಇನ್ನೋರ್ವ ಅಥಿತಿ ಉರಬನ್ನವರ ಮಾತನಾಡಿ ಆರೋಗ್ಯ ಮಿತ್ರ ಆಯುಷ್ಮಾನ ಭಾರತ ಯೋಜನೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು. ಏಡ್ಸ ಆಪ್ತ ಸಮಾಲೋಚಕರಾಗಿ ಆಗಮಿಸಿದ ಬಿ.ಎಸ್.ತೇಲಿ ಏಡ್ಸ ರೋಗ ಹರಡುವಿಕೆ ಮತು ಸುರಕ್ಷಿತೆ ಬಗ್ಗೆ ವಿವರಿಸಿದರು. ಎಸ್.ಎಮ.ಸಿರಗುಪ್ಪಿ ಉಪಸ್ಥಿತರಿದ್ದರು.   

  ಕಾಲೇಜು ಸಿಬ್ಬಂದಿ ಸವಿತಾ ಗೋಂದಿ, ಅಭಿಶೇಕ ಮುರಗುಂಡಿ, ಪೂಜಾ ಬರಗಿ, ಗುರುರಾಜ ಅಥಣಿ, ವಿಶಾಲ ಮೆಟಗುಡ್ಡ, ಈಶ್ವರ ಹೂಲಿ, ಮಂಜುನಾಥ ಅರಕೇರಿ, ಪ್ರಕಾಶ ಬಡಿಗೇರ, ನವೀನ ಕಡ್ಲಿಬುಡ್ಡಿ ಮುಂತಾದವರು ಹಾಗೂ ವಿದ್ಯಾಥರ್ಿಗಳು ಇದ್ದರು.