ತಾಳಿಕೋಟಿ 11: ಸತತವಾಗಿ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾತ್ರ ನಾವು ಇಟ್ಟ ಗುರಿಯನ್ನು ತಲುಪಲು ಸಾಧ್ಯ ಗುರಿ ನಮ್ಮ ಭವಿಷ್ಯತ್ತನ್ನು ಬದಲಾಯಿಸುತ್ತದೆ .ಮತ್ತು ಸೋಲು ಗೆಲುವನ್ನು ಪ್ರೀತಿಸುವವನು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಅಗಸ್ತ್ಯ ಫೌಂಡೇಶನ ಶಿಕ್ಷಣ ಸಂಯೋಜಕರಾದ ದಿನೇಶ ರಾಥೋಡ ಅವರು ಹೇಳಿದರು.
ಸ್ಥಳೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸೃಜನಶೀಲ ಕೌಶಲ್ಯ ತರಬೇತಿ ಕಾರ್ಯಗಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು, ವಿದ್ಯಾರ್ಥಿಗಳಿಗೆ ಕಲಿಕೆ ಎಂಬುದು ನಿರಂತರವಾದದ್ದು ನಮ್ಮ ಜೀವನವನ್ನು ರೂಪಿಸುವ ಮಾರ್ಗವನ್ನು ನಾವು ಇಂದು ಹುಡುಕುವ ಪ್ರಯತ್ನ ಮಾಡಬೇಕು ಇಷ್ಟು ಬದ್ದ ಜೀವನ ಕಲಿಯಬೇಕಾದರೆ ಮತ್ತು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಬಿ ಎಡ್ ವ್ಯಾಸಂಗ ಸಂದರ್ಭದಲ್ಲಿ ತಂತ್ರಜ್ಞಾನದ ಬಳಕೆ ಅತ್ಯಂತ ಅವಶ್ಯಕ ಸಮಾಜದಲ್ಲಿ ಇಂದು ಬೆಲೆ ಸಿಗುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ವಿದ್ಯಾರ್ಥಿಗೂ ಅಚ್ಚುಮೆಚ್ಚು ವಿದ್ಯಾರ್ಥಿಗಳ ಕಲಿಕೆ ಕೊನೆಗೊಂಡರು ಅವರು ನಿರುದ್ಯೋಗಿಗಳಾಗದೆ ಯಾವುದಾದರೂ ಒಂದು ಉದ್ಯೋಗದಲ್ಲಿ ತೊಡಗಬೇಕೆ ಎನ್ನುವ ಉದ್ದೇಶದಿಂದ ಬಗ್ಗೆ ವಿಭಿನ್ನ ರೀತಿಯ ಫೋಟೋಗಳನ್ನು ಸೃಷ್ಟಿಸುವ ಬಗ್ಗೆ. ಆಮಂತ್ರಣ ಪತ್ರಿಕೆಗಳ ತಯಾರಿಕೆ. ವ್ಯಕ್ತಿ ವಿವರಗಳ ಬಗ್ಗೆ ತಯಾರಿಕೆ ಹಾಗೂ ತರಗತಿಯಲ್ಲಿ ಶಿಕ್ಷಕನು ಬೋಧಿಸುವ ವಿವಿಧ ವಿಷಯಗಳ ಪಿಪಿಟಿ ತಯಾರಿಕೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್. ಎಮ್.ಬಂಟನೂರ ಅವರು ಮಾತನಾಡಿ ವ್ಯಾಪಾರ ಕಾರಣಕ್ಕಾಗಿ ಶಿಕ್ಷಣವನ್ನು ನೀಡಬಾರದು ಮಗುವಿನಲ್ಲಿ ಮಾನವೀಯ ಮೌಲ್ಯ ನೈತಿಕ ಗುಣ ಬೆಳೆಸಿದಾಗ ಸಾಮರಸ್ಯದ ಬದುಕು ಸುಂದರಗೊಳತ್ತದೆ ಮತ್ತು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಒಡಮೂಡುತ್ತದೆ. ಆ ದಿಶೆಯಲ್ಲಿ ನಿಮ್ಮ ಚಿಂತನೆಗಳು ತಂತ್ರಜ್ಞಾನದ ಮೂಲಕ ಇರಲಿ ಎಂದು ಹೇಳಿದರು.
ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಮತ್ತು ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು