ನೂಲ್ವಿ, ಹುಬ್ಬಳ್ಳಿ,-20, ಸುಸ್ಥಿರ ಅರ್ಥ ವ್ಯವಸ್ಥೆಗೆ ಆಥರ್ಿಕ ಸೇರ್ಪಡೆ ಪರಿಣಾಮಕಾರಿಯಾಗಿರುವ ಈ ಸಂರ್ಭದಲ್ಲಿ, ರಿಸವರ್್ ಬ್ಯಾಂಕಿನ ವರದಿ ಪ್ರಕಾರ ರಾಷ್ಟ್ರದ ಶೇ. 80 ರಷ್ಟು ಜನರಿಗೆ ಬ್ಯಾಂಕ ಪರಿಚಯವಿದೆ ಎಂದು ಹೇಳಲಾಗಿದೆ. 2018ರಲ್ಲೇ ಆಥರ್ಿಕ ಸೇರ್ಪಡೆ ಬಗ್ಗೆ ರಂಗರಾಜನ್ ಸಮೀತಿ ಶಿಫಾರಸ್ಸು ಮಾಡಿದ್ದಿತು ಎಂದು ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಬಾಪೂಗೌಡ ಡಿ. ಪಾಟೀಲ ಹೇಳಿದರು.
66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ. ಬ್ಯಾಂಕ ಧಾರವಾಡ, ಸಹಕಾರ ಇಲಾಖೆ, ಧಾರವಾಡ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂಲ್ವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಹಕಾರ ಸಂಸ್ಥೆಗಳ ಮುೂಲಕ ಆಥರ್ಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀಕರಣ ದಿನದ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ದಿಸೆಯಲ್ಲಿ 2014ರ ಅಗಸ್ಟ್ನಲ್ಲಿ ಜಾರಿಗೆ ಬಂದ ಪ್ರಧಾನ ಮಂತ್ರಿ ಜನದನ್ ಯೋಜನೆ ಪ್ರಮುಖ ಬದಲಾವಣೆಗೆ ದಾರಿ ಮಾಡಿಕೊಟ್ಟಿತು. ಇದರ ಪರಿಣಾಮಕಾರಿ ಕಾರ್ಯರೂಪಕ್ಕೆ ತಾಂತ್ರಿಕತೆ ಅಳವಡಿಕೆ ಅಗತ್ಯವೆನಿಸಿದೆ ಎಂದರು. ವಿಶ್ವ ಸಂಸ್ಥೆಯೊಂದರ ವರದಿಯಂತೆ ಹಿಂದೆ ಬ್ಯಾಂಕ ಖಾತೆಯನ್ನು ಶೇ.35ರಷ್ಟು ಜನ ಮಾತ್ರ ಹೊಂದಿದ್ದರು. ಕ್ರಮೇಣ ಅದು ಶೇ.53ಕ್ಕೆ ಹೆಚ್ಚಿರುವುದು ಗಣನೀಯ ಪ್ರಗತಿಯಾಗಿದೆ. ಅದು 2017ರ ವೇಳೆಗೆ ಶೇ. 80 ಆಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಸಿ.ಸಿ. ಬ್ಯಾಂಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ ಅವರು ಸಹಕಾರ ಸಂಘಗಳು ಮಾರುಕಟ್ಟೆಯಲ್ಲಿನ ಸ್ಪಧರ್ೆಯನ್ನು ನಿಭಾಯಿಸುವಲ್ಲಿ ವೈಜ್ಞಾನಿಕ, ಅಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮೌಲ್ಯಾಧಾರಿತ ವಹಿವಾಟುಗಳನ್ನು ನಡೆಸುವತ್ತ ಅದ್ಯತೆ ನೀಡಬೇಕೆಂದರು. ಸಹಕಾರಿ ಕ್ಷೇತ್ರ ದುರ್ಬಲ ವರ್ಗದವರ ಸಾಮಾಜಿಕ-ಆಥರ್ಿಕ ಅಭಿವೃದ್ಧಿಗೆ ಪ್ರಮುಖ ಮಾಗರ್ೋಪಾಯವಾಗಿದೆ. ತನ್ನ ಕಾರ್ಯವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಆಥರ್ಿಕ ಉನ್ನತಿಗಾಗಿ ಸೇವೆ ಸಲ್ಲಿಸುವುದೇ ಸಹಕಾರ ಸಂಘಗಳ ದ್ಯೇಯವಾಗಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಕೆ.ಸಿ.ಸಿ. ಬ್ಯಾಂಕ ನಿದರ್ೆಶಕರು ಮತ್ತು ಮಹಾನಗರ ಸಭೆ ಸದಸ್ಯ ಮಲ್ಲಿಕಾಜರ್ುನ ಎ. ಹೊರಕೇರಿ ಮಾತನಾಡಿ ಜವಾಹರಲಾಲ ನೆಹರು ಜನ್ಮ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿರುವ ಸಹಕಾರ ಸಪ್ತಾಹ ಕೇವಲ ಒಂದು ದಿನದ ಸಂಭ್ರಮವಾಗಬಾರದು. ಎಲ್ಲ ಸಹಕಾರ ಸಂಸ್ಥೆಗಳು ತಮ್ಮ ಕ್ಷೇತ್ರದ ಕುರಿತು ಚಿಂತನ ಮಂಥನ ಮಾಡುವಂತಾಗಬೇಕೆಂದರು. ರೈತ ಚಳುವಳಿಯಾಗಿ ಪ್ರಾರಂಭವಾದ ಸಹಕಾರ ಚಳುವಳಿ ಸಮಾಜ ಎಲ್ಲ ವರ್ಗದ ಜೀವನ ಪ್ರಕಾರವನ್ನು ಅವಲಂಬಿಸಿದ್ದರೂ ಇಂದಿಗೂ ಚಳುವಳಿಯಲ್ಲಿ ರೈತರಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ರೈತರ ಕೃಷಿ ಚಟುವಟಿಕೆಗೆ ಅಗತ್ಯ ಸಾಲ, ಪರಿಕರಗಳ ಲಭ್ಯತೆ ಜೊತೆಗೆ ರೈತರು ಬೆಳೆದ ಉತ್ಪನ್ನಗಳಿಗೆ ತಕ್ಕ ಬೆಲೆಯನ್ನು ದೊರಕಿಸಿಕೊಡುವ ಜವಾಬ್ದಾರಿಯು ಸಹಕಾರ ಸಂಘಗಳದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂಲ್ವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರಗೌಡ ಚ ಶಿದ್ದನಗೌಡ್ರ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಮಹಾದೇವಪ್ಪ ಕಪ್ಪಿ ಸ್ವಾಗತಿಸಿ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿವರ್ಾಹಕ ಕಲ್ಲನಗೌಡ ಮೂಗಣ್ಣವರ ವಂದಿಸಿದರು.