ತಂತ್ರಜ್ಞಾನ ಬೋಧನೆ, ಕಲಿಕೆಯ ಅನುಭವಗಳನ್ನು ಶ್ರೀಮಂತಗೊಳಿಸಿದೆ

 ಬಳ್ಳಾರಿ ಮೇ 20. ತಾಂತ್ರಿಕ ಅಂಶಗಳು ಮಾನವ ಸೃಷ್ಟಿಯ ಫಲಶೃತಿಗಳಾಗಿದ್ದು, ಶಿಕ್ಷಣವನ್ನೊಳಗೊಂಡಂತೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೆಯಾದ ಪಾತ್ರವಹಿಸಿವೆ ಎಂದು ಗೋನಾಳ ರಾಜಶೇಖರ ಗೌಡ ನುಡಿದರು.

    ವೀರಶೈವ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ "ಆನ್ಲೈನ್ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ " ಎಂಬ ವಿಷಯ ಕುರಿತು ಮಹವಿದ್ಯಾಲಯದ ಅಧ್ಯಾಪಕರಿಗೆ ಸಾಮಾಜಿಕ ಅಂತರ ಪಾಲಿಸಿ ಏರ್ಪಡಿಸಿದ  ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಅವರು ತಂತ್ರಜ್ಞಾನ ಮಾನವನ ಜೀವನ ಮಟ್ಟದ ಸುಧಾರಣೆಯಾಗುವಲ್ಲಿ ವಹಿಸಿದ ಪಾತ್ರ  ಅನನ್ಯವಾದುದು ಎಂದರು. ತರಗತಿ ಕೋಣೆಯೊಳಗೆ ಮತ್ತು ಹೊರಗೆ  ವಿದ್ಯಾಥರ್ಿಗಳ ಕಲಿಕೆಗೆ  ತಂತ್ರಜ್ಞಾನ ಬಹು ವಿಧದಲ್ಲಿ ನೆರವಾಗಲಿದೆ ಎಂದು ಹೇಳಿದರು. ಆಕಸ್ಮಿಕವಾಗಿ ಸಂಭವಿಸುವ ಅವಘಡಗಳ ಸಂದರ್ಭದಲ್ಲಿ ತಂತ್ರಜ್ಞಾನ ಶೈಕ್ಷಣಿಕ ಉದ್ದೇಶಗಳನ್ನು ಈಡೇರಿಸುವಲ್ಲಿ ಸಹಕಾರಿಯಗುತ್ತದೆ. ಕರೋನ ಹರಡುವಿಕೆಯಿಂದ ನಿಂತು ಹೋಗಿದ್ದ ಬೋಧನೆ ಮತ್ತು ಕಲಿಕೆ ಸಾಂಗೋಪವಾಗಿ ಸಾಗಲು ತಂತ್ರಜ್ಞಾನವೇ ಉರುಗೋಲಾಗಿ ನೆರವಾಗಿದ್ದು ನೆನಪಿಸಿಕೊಳ್ಳಬಹುದು.  ವಸ್ತುಗಳ ಉತ್ಪಾದನೆ ಮತ್ತು ಸೇವೆಗಳು ಎಲ್ಲ ಸ್ತರಗಳಿಗೂ ವಿಸ್ತರಣೆಯಾಗಿ ತಲುಪಿರುವುದಕ್ಕೆ ತಂತ್ರಜ್ಞಾನವೇ ಕಾರಣ ಎಂದರು. ಮಾನವ ತಂತ್ರಜ್ಞಾನವನ್ನು ಸದುಪಯೋಗ ಮಾಡಿಕೊಳ್ಳಬೇಕೇ ಹೊರತು ಅದರ ದುರ್ಬಳಿಕೆ ಆಗಬಾರದು ಎಂದು ಎಚ್ಚರಿಸಿದರು.ವಿಶೇಷ ಉಪನ್ಯಾಸ ನೀಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ರಮೇಶ್ ಪುಸ್ತಕಗಳ ಮತ್ತು ವಿಶ್ವಕೋಶಗಳ ಬದಲಾಗಿ ಗಣಕಯಂತ್ರ  ಮತ್ತು ಟ್ಯಾಬಲೇಟ್ಸ್ಗಳನ್ನು ಶಿಕ್ಷಕರು ಮತ್ತು ವಿದ್ಯಾಥರ್ಿಗಳು ದೈನಂದಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಬಳಸುತ್ತಿರುವುದರಿಂದ ಬೋಧನೆ ಮತ್ತು ಕಲಿಕೆ ಹೆಚ್ಚು ಉತ್ತಮ ಫಲಿತಾಶ ನೀಡುತ್ತಿದೆ ಎಂದರು. ಕಲಿಕೆಯಲ್ಲಿ ತಂತ್ರಜ್ಞಾನ ಬಳಸಿದರೆ ಏಕಾಗ್ರತೆ ಹೆಚ್ಚುತ್ತದೆ. ಮೊಬೈಲ್ನಂತಹ ಉಪಕರಣಗಳು ಸ್ವಯಂ ನಿದರ್ೇಶಿತ ಕಲಿಕೆಯ ಮಹತ್ವವನ್ನು ಹೆಚ್ಚಸಿವೆ ಎಂದರು . ಸ್ಕೈಪ್ , ಗೂಗಲ್ ಕ್ಲಾಸ್ ಹಾಗೂ ವಚ್ರ್ವಲ್ ತರಗತಿಗಳಲ್ಲಿ ಬಳಸಬಹುದಾದ ಹಲವು ನಮೂನೆಗಳ ಬಗ್ಗೆ ವಿವರಿಸಿದರು. ಐಕ್ಯುಎಸಿ ಸಂಯೋಜನಾಧಿಕಾರಿ  ಸಿದ್ಧರಾಮ ಜಿ ಮುಳಜೆ  ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಕು.ರಾಧಾ ಪ್ರಾರ್ಥನೆ ಹೇಳಿದರು. ಶರಣ ಕುಮಾರ ವಂದಿಸಿದರು.