ಸಿಕ್ಯಾಬ್ ಇಂಜಿನಿಯರಿಂಗ್ ಮಹಾವಿದ್ಯಾಲಯದ ಆವರಣದಲ್ಲಿ ತಾಂತ್ರಿಕ ಉತ್ಸವ ಕಾರ್ಯಕ್ರಮ
ವಿಜಯಪುರ 09: ನಗರದ ಪ್ರತಿಷ್ಠಿತ ಸಿಕ್ಯಾಬ್ ಇಂಜಿನಿಯರಿಂಗ್ ಮಹಾವಿದ್ಯಾಲಯದ ಆವರಣದಲ್ಲಿ 2 ದಿನಗಳ ಕಾಲ ತಾಂತ್ರಿಕ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ರಾಜಕೀಯ ಧುರೀಣ ಸಿ. ಎಂ. ಇಬ್ರಾಹಿಂ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಕೊಟ್ಟ ಕೊಡುಗೆ ಅಪಾರ. ಅಂಥ ಮಹಾನ್ ವ್ಯಕ್ತಿ ನಮ್ಮ ರಾಜ್ಯದವರು ಎನ್ನುವುದು ಹೆಮ್ಮೆಯ ಸಂಗತಿ. ಹೀಗಾಗಿ ವಿದ್ಯಾರ್ಥಿಗಳು ಶ್ರೇದ್ಧೆಯಿಂದ ಓದಿದರೆ ಯಶಸ್ಸು ಸಾಧಿಸಲು ಸಾಧ್ಯ. ಕೇವಲ ಓದಿನಿಂದ ಪ್ರಮಾಣಪತ್ರ ತೆಗೆದುಕೊಳ್ಳುವದಲ್ಲ ವಿದ್ಯಾರ್ಥಿಗಳಾದವರು ಹೊಸ, ಹೊಸ ಆವಿಷ್ಕಾರ ಮಾಡಿದರೆ ಮಾತ್ರ ಮುಂದೆ ಬರಲು ಸಾಧ್ಯವಾಗುತ್ತದೆ. ಓದು ಸಫಲವಾಗುತ್ತದೆ. ಇಂಜಿನಿಯರ ಅಂದ್ರೆ ಉದ್ಯೋಗ ನೀಡುವಂತಹವನಾಗಬೇಕು ಉದ್ಯೋಗ ಬೇ ಡುವಂತಹವನಾಗಬಾರದು ಅದಕ್ಕೆ ಇಂಜಿನಿಯರ್ ಎನ್ನುತ್ತಾರೆ. ಮನುಷ್ಯನಿಗೆ ಆರೋಗ್ಯವು ದೇಹವನ್ನು ಕಾಪಾಡಿದ್ರೆ ಇಂಜಿನಿಯರಿಂಗ್ ದೇಶವನ್ನು ಕಾಪಾಡುತ್ತಾನೆ ಇವತ್ತು ನಮ್ಮ ದೇಶ ಕಂಪ್ಯೂಟರ್ ಟೆಕ್ನಾಲಜಿಯಲ್ಲಿ ಬಹಳಷ್ಟು ಮುಂದೆ ಒರೆದಿದೆ ಹೀಗಾಗಿ ಬೇರೆ ದೇಶಗಳು ಕೂಡಾ ನಮ್ಮ ಭಾರತ ದೇಶಕ್ಕೆ ಸೇಲ್ಯೂಟ್ ಮಾಡುತ್ತವೆ. ಅಮೇರಿಕಾ ದೇಶದಲ್ಲಿಯೂ ಶೇಕಡಾ ಎಪ್ಪತ್ತು ರಷ್ಟು ಎಂಜನಿಯರ್ ನಮ್ಮ ಭಾರತದವರಿದ್ದಾರೆ.
ಭಾರತ ಸೂಫಿ ಸಂತರ ನಾಡು. ವಿದ್ಯಾರ್ಥಿಗಳಾದವರು ಬೆಳಿಗ್ಗೆ ಎದ್ದು ವಿದ್ಯಾಭ್ಯಾಸ ಮಾಡಿದ್ರೆ ಗುರಿ ಮುಟ್ಟಿಲು ಸಾಧ್ಯವಾಗುತ್ತದೆ. ಹೀಗಾಗಿ ನೀವು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಬೇಕು ನಿಮ್ಮ ಗುರಿ ತಲುಪಲು ಸಾದ್ಯವಾಗುತ್ತದೆ ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಬೇಕು. ಈಗಿನ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಹೆಚ್ಚು ವಿದ್ಯಾಭ್ಯಾಸ ಮಾಡಿ ಮುಂದೆಬರುತ್ತಿದ್ದಾರೆ ಇದರಿಂದ ಬಹಳಷ್ಟು ಸಂತೋಷವಾಗುತ್ತದೆ. ಬೇರೆ ದೇಶಗಳಲ್ಲಿ ಸಂಸ್ಕಾರ ಅಷ್ಟಕ್ಕೇ ಅಷ್ಟೇ ಉಳಿದಿದೆ ನಮ್ಮ ದೇಶದಲ್ಲಿ ಇನ್ನೂ ಸಂಸ್ಕಾರ ಉಳಿದಿದೆ. ತಂದೆ ತಾಯಿಯಾದವರು ಮಕ್ಕಳಿಗೆ ಸಂಸ್ಕಾರ ಕೊಡಬೇಕು ವಿದ್ಯಾರ್ಥಿಗಳು ಯಾವತ್ತೂ ಸಂಸ್ಕಾರ ಮರೆಯಬಾರದು. ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಾಗಿ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮತ್ತು ಇದೆ ಸಂದರ್ಭದಲ್ಲಿ ಕಮರ್ಶಿಯಲ್ ಪೈಲಟ್ ರಾದ ಸಮೀರಾ ಹುಲ್ಲೂರ ಅವರಿಗೆ ಸನ್ಮಾನಿಸಲಾಯಿತು.ಇನ್ನೂ ಎರಡನೇ ದಿನದಂದು ಪ್ರತಿಭಾ ಪ್ರದರ್ಶನದ ಸ್ಪರ್ಧೆಗಳಾದ ಸರ್ಕಿಟ್ ವಿನ್ಯಾಸ, ರಸಪ್ರಶ್ನೆ,ನೀಟ್ ಹಾಗೂ ಜೆಇಇಇ ಪೂರ್ವ ಸಿದ್ಧತೆ, ತಾಂತ್ರಿಕ ಮಾದರಿ ಮಾಡುವುದು, ಭಿತ್ತಿ ಪತ್ರ (ಫೋಸ್ಟರ್) ವ್ಯಾವಹಾರಿಕ ಕೌಶಲ್ಯ (ಶಾರ್ಕಟ್ಯಾಂಕ್) ದೋಷ ಪರಿಹಾರ (ಡಿಬಗ್ಗಿಂಗ್) ಹಾಗೂ ಐಡಿಯಾಥಾನ್ ದಂತಹ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನವನ್ನು ತಮದಾಗಿಸಿಕೊಂಡರು.ಇನ್ನೂ ಸ್ವಾಗತ ಕಾರ್ಯವನ್ನು ಅಫ್ರಾ ಜಹಗೀರದಾರ,ಮತ್ತು ಫರೀನ್ ಮೇಟಿ, ಕಾರ್ಯಕ್ರಮದ ನೀರೂಪಣೆಯನ್ನು ಊಜ್ಮಾ ಸತ್ತಿಕರ್ ಮುಕ್ತಾಯ ಸಮಾರಂಭವನ್ನು ಡಾ. ಎಸ್. ಎ. ಖಾದ್ರಿ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಸಿಕ್ಯಾಬ್ ಸಂಸ್ಥೆಯ ನಿರ್ದೇಶಕರಾದ ಸಲಾವುದ್ದಿನ್ ಪಣೇಕರ್, ಸಂಸ್ಥೆಯ ಕಾರ್ಯದರ್ಶಿಗಳಾದ ಎ,ಎಸ್, ಪಾಟೀಲ, ಪ್ರಾಂಶುಪಾಲರಾದ ಡಾ. ಸೈಯದ್ ಅಬ್ಬಾಸ್ ಅಲಿ ನಿವೃತ್ತ ಪ್ರಾಚಾರ್ಯರಾದ ಎನ್, ಎಸ್ ಭೂಸನೂರ, ಎಸ್.ಎಸ್. ಬಿಳಗೀಪೀರ,ಹೈದರ ಪಾಷಾ,ಡಾ ಅವ್ವಾಬ್ ಫಕಿಹ್, ಶ್ರೀ ಮತಿ ರುಕ್ಸಾನಾ ಅಲ್ಗೂರ್,ಸಲೀಂ ಜಹಗೀರದಾರ,ಭಾಗಿಯಾಗಿದ್ದರು.