ತಾಂತ್ರಿಕ ದೋಷ: ರಜನಿಕಾಂತ್ ಪ್ರಯಾಣಿಸುತ್ತಿದ್ದ ವಿಮಾನ ವಿಳಂಬ

ಚೆನ್ನೈ / ಮೈಸೂರು, ಜ 27  ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ 42 ಪ್ರಯಾಣಿಕರನ್ನು ಹೊತ್ತ ಮೈಸೂರಿಗೆ ಹೊರಟಿದ್ದ  ಖಾಸಗಿ ವಿಮಾನದಲ್ಲಿ ಸೋಮವಾರ ಬೆಳಿಗ್ಗೆ ತಾಂತ್ರಿಕ ದೋಷ ಉಂಟಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.‘ವಿಮಾನವು ಟೇಕ್-ಆಫ್ ಆಗುವ ಸ್ವಲ್ಪ ಸಮಯದ ಮುನ್ನವೇ ದೋಷ ಪತ್ತೆಯಾಗಿದೆ. ತಕ್ಷಣವೇ ಎಂಜಿನಿಯರ್ ಗಳನ್ನು ಕರೆಸಲಾಗಿದ್ದು, ದೋಷವನ್ನು ಅವರು ಸರಿಪಡಿಸಿದ್ದಾರೆ.’ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಾಂತ್ರಿಕ ದೋಷದಿಂದ ವಿಮಾನ ನಿರ್ದಿಷ್ಟ ಸ್ಥಳ ತಲುಪಲು ಸುಮಾರು ಎರಡು ತಾಸು ವಿಳಂಬವಾಗಿತ್ತು. ಎರಡು ತಾಸಿನ ನಂತರ ವಿಮಾನ ಮೈಸೂರಿನತ್ತ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಈ ಮಧ್ಯೆ ರಜನಿಕಾಂತ್ ಅವರು ವಿಮಾನದಲ್ಲಿದ್ದ ಕೆಲ ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಪ್ರಯಾಣಿಕರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.’ ಎಂದು ಅಧಿಕಾರಿಗಳು ಹೇಳಿದ್ದಾರೆ.