ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಟೆಕ್ ಕ್ಲಸ್ಟರ್-25
Tech Cluster-25 unveils the talent of technical students
ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಟೆಕ್ ಕ್ಲಸ್ಟರ್-25
ಮಹಾಲಿಂಗಪುರ 16: ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನಾ ವಿಷಯಗಳ ಬಗ್ಗೆ ತಿಳಿದುಕೊಳ್ಳವುದು ಈ ಆಧುನಿಕ ಯುಗದಲ್ಲಿ ಅತೀ ಅವಶ್ಯ ಎಂದು ಗೋದಾವರಿ ಬಯೋರಿಪೈನರೀಸ್ ನ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ ಹೇಳಿದರು.
ಸ್ಥಳೀಯ ಕೆ.ಎಲ್.ಇ ಡಿಪ್ಲೋಮಾ ಕಾಲೇಜನಲ್ಲಿ ಸೋಮವಾರ ಆಯೋಜಿಸಿದ್ದ ಇಂಜಿನಿಯರ್ಸ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್ ಇಂಟಲಿಜನ್ಸಿ) ವಿಷಯ ಇಂದು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತೀ ಅವಶ್ಯ ಎಂದರು.
ಇನ್ಯೋರ್ವ ಅತಿಥಿ ನಿರಾಣಿ ಶುಗರ್ಸನ ಡಿಜಿಎಮ್ ದಯಾನಂದ ನಾಡಗೌಡ,ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಐ ಕುಂದಗೋಳ ಮಾತನಾಡಿ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯನವರ ವಿಶೇಷ ಗುಣಗಳಾದ ಕಠಿಣ ಪರೀಶ್ರಮ, ಕಾಯಕನಿಷ್ಠೆ, ಪ್ರಾಮಾಣಿಕತೆ, ಶಿಸ್ತು ಮತ್ತು ಸರಳತೆಗಳನ್ನ ಮೈಗೂಡಿಸಿಕೊಂಡಾಗ ಈ ಆಚರಣೆ ಸಾರ್ಥಕವಾಗುತ್ತದೆ ಎಂದರು. ಸಾಂಸ್ಕ್ರತಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಂದನಾ ಪಸಾರ ವೇದಿಕೆಯ ಮೇಲೆ ಇದ್ದರರೀ ಸಂದರ್ಭದಲ್ಲಿ ಸರ್. ಎಂ ವಿಶ್ವೇಶ್ವರಯ್ಯನವರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಲಾಯಿತ
ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ತಾಂತ್ರಿಕ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಟೆಕ್ ಕ್ಲಸ್ಟರ್-25 ಅಂದರೆ ಹಲವು ಅಂತರ ಕಾಲೇಜು ಸ್ಫರ್ಧೆಗಳನ್ನ ಏರಿ್ಡಸಲಾಗಿತ್ತು. ಕಾಲೇಜಿನ ಐಎಸ್‌ಟಿಇ ವಿದ್ಯಾರ್ಥಿ ಸಂಘದವತಿಯಿಂದ ಆಧುನಿಕ ಸಂಶೋಧನೆಗಳ ವಿಷಯದ ಬಗ್ಗೆ ವಿಷಯ ಮಂಡನೆಯ ಪಿ.ಪಿ.ಟಿ ಸ್ಪಧೆ, ಇಂಜಿನಿಯರಿಂಗ್ ಮಾದರಿ ತಯಾರಿಕಾ ಸ್ಫರ್ಧೆ ಏರಿ್ಡಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಬಾಗಲಕೋಟ ಜಿಲ್ಲೆಯ ನಾಲ್ಕು ಡಿಪ್ಲೋಮಾ ಕಾಲೇಜುಗಳಾದ ಬಿವಿವಿಎಸ್ ಬಾಗಲಕೋಟ, ಸರ್ಕಾರಿ ಪಾಲಿಟೆಕ್ನಿಕ ಮುಧೋಳ ಮತ್ತು ರಬಕವಿ ಹಾಗೂ ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನ್ಯತೃ ಸ್ಪರ್ಧೆಯಲ್ಲಿ ಸರಕಾರಿ ಪಾಲಿಟೆಕ್ನಿಕ ರಬಕವಿ ಪ್ರಥಮ ಸ್ಥಾನ ಹಾಗೂ ಕೆಎಲ್‌ಇ ಪಾಲಿಟೆಕ್ನಿಕ ಮಹಾಲಿಂಗಪುರ ದ್ವಿತೀಯ ಸ್ಥಾನ ಪಡೆದವು. ಕಂಪ್ಯೂಟರ್ ಸೈನ್ಸ ವಿಭಾಗ ಮತ್ತು ಮೆಕ್ಯಾನಿಕಲ್ ವಿಭಾಗದ ಪಿ.ಪಿ.ಟಿ ಸ್ಪರ್ಧೆಯಲ್ಲಿ ಬಿವಿವಿಎಸ್ ಬಾಗಲಕೋಟ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಿಭಾಗದ ಪಿಪಿಟಿ ಸ್ಪರ್ಧೆಯಲ್ಲಿ ಕೆಎಲ್‌ಇ ಪಾಲಿಟೆಕ್ನಿಕ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಇಂಜಿನಯರಿಂಗ್ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ ವಿಭಾಗದ ಕೆಎಲ್‌ಇ ಪಾಲಿಟೆಕ್ನಿಕ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು.
ಉಪನ್ಯಾಸಕಿ ಲಕ್ಷ್ಮಿ ನಾಯಕ ನಿರೂಪಿಸಿದರು. ಮಹಾದೇವಿ ಅಂಬಿ ಸ್ವಾಗತಿಸಿದರು, ಪ್ರವೀಣ ಅವರಾದಿ ಪರಿಚಯಿಸಿದರು, ಲಕ್ಷ್ಮಿ ಅಂಗಡಿ ವಂದಿಸಿದರು. ಉಪನ್ಯಾಸಕರಾದ ಸುಭಾಷ ಮೂಷಿ, ಉಮೇಶ ಹಾದಿಮನಿ, ಮಂಜುನಾಥ ಅರಕೇರಿ, ಸವಿತಾ ಬೀಳಗಿ, ಮಿನಾಜ ಅತ್ತಾರ, ಪ್ರೀಯಾ ಸೋನಾರ, ಅಮಿತ ಜಾಧವ, ವಿಶಾಲ ಮೆಟಗುಡ್, ಪ್ರಕಾಶ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 