ಬೆಂಗಳೂರು, ಮೇ 7,ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಅವರು 31ನೇ ವಸಂತಕ್ಕೆ ಕಾಲಿಟ್ಟ ಪ್ರಯುಕ್ತ ಅವರ ನಟನೆಯ ಗ್ರಾಮಾಯಣ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಗಿದೆ.ನನ್ನ ದೊಡ್ಡ ಮಗನಾದ ವಿನಯ್ ರಾಜ್ ಕುಮಾರ್ ಅವರ ಗ್ರಾಮಾಯಣ ಟೀಸರ್ ನಿಮ್ಮ ಮುಂದೆ ಎಂದು ಬರೆದು ರಾಘವೇಂದ್ರ ರಾಜ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.ಹಳ್ಳಿ ಸೊಗಡಿನಲ್ಲಿ ಟೀಸರ್ ಅದ್ಭುತವಾಗಿ ಮೂಡಿಬಂದಿದೆ.ಅಣ್ಣಾವ್ರ ಹುಟ್ಟೂರು ಗಾಜನೂರಿನಲ್ಲಿ ಈ ಗ್ರಾಮಾಯಣ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.ಚಿತ್ರದಲ್ಲಿ ವಿನಯ್ ಜೊತೆಗೆ ಅಮೃತಾ ಅಯ್ಯರ್ ಬಣ್ಣ ಹಚ್ಚಿದ್ದಾರೆ. ಇನ್ನು ಈ ಚಿತ್ರದಲ್ಲಿ ಸಂಪತ್, ಅಪರ್ಣಾ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗ್ಡೆ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಎಸ್. ಎಲ್.ಎನ್.ಮೂರ್ತಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ದೇವನೂರು ಚಂದ್ರು ಅವರು ನಿರ್ದೇಶಿಸಿದ್ದಾರೆ.