ಮುಂಬೈ ಸೆ 17: ಬಾಲಿವುಡ್ ನಟಿ ವಿದ್ಯಾಬಾಲನ್ ಅಭಿನಯಿಸುತ್ತಿರುವ 'ಶಕುಂತಲಾ ದೇವಿ' ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.
ಇತ್ತೀಚೆಗೆಷ್ಟೇ ವಿದ್ಯಾ, 'ಮಿಷನ್ ಮಂಗಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ 'ಮಾನವ ಕಂಪ್ಯೂಟರ್' ಎಂದೇ ಖ್ಯಾತಿ ಪಡೆದಿರುವ ಭಾರತೀಯ ಶ್ರೇಷ್ಠ ಗಣಿತಶಾಸ್ತ್ರಜ್ಞೆ, ಶಕುಂತಲಾ ದೇವಿ ಅವರ ಜೀವನಾಧಾರಿತ ಚಿತ್ರದಲ್ಲಿ ವಿದ್ಯಾ ನಟಿಸುತ್ತಿದ್ದಾರೆ.
ವಿದ್ಯಾ ಬಾಲನ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಟೀಸರ್ ಶೇರ್ ಮಾಡಿದ್ದಾರೆ. ಸೀರೆ ತೊಟ್ಟು ಬಾಬ್ ಹೇರ್ ಕಟ್ ನಲ್ಲಿ ಥೇಟ್ ಶಕುಂತಲಾ ದೇವಿ ಅವರಂತೆ ವಿದ್ಯಾ ಕಾಣಿಸಿಕೊಂಡಿದ್ದಾರೆ.
ಶಕುಂತಲಾ ಅವರು ತಮ್ಮ ಮನಸ್ಸಿನಲ್ಲಿಯೇ ಕಠಿಣ ಲೆಕ್ಕಾಚಾರ ಬಿಡಿಸುವ ಅದ್ಭುತ ಸಾಮಥ್ರ್ಯ ಹೊಂದಿದ್ದು, ಮಾನವ ಕಂಪ್ಯೂಟರ್ ಎಂದು ಪ್ರಸಿದ್ಧರಾಗಿದ್ದರು.