ರಾಯಬಾಗ 19: ಕಲಿಕೆಯಲ್ಲಿ ಹಿಂದಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸಿತವ್ವ ಜೊಡಟ್ಟಿ ಹೇಳಿದರು.
ಬುಧವಾರ ಪಟ್ಟಣದ ನೌಕರರ ಭವನದಲ್ಲಿ ಮಹಿಳಾ ಅಭಿವೃದ್ಧಿ ಸಂರಕ್ಷಣೆ ಸಂಸ್ಥೆ ಘಟಪ್ರಭಾ ಇವರು ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ಓದುತ್ತಿರುವ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಹಮ್ಮಿಕೊಂಡಿದ್ದ ಬೋಧನಾ ಕೌಶಲ್ಯ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸುಮಾರು 80 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಾಶವ್ವ ಕುರ್ಣಿ, ರೇಖಾ ಬಂಡಾರೆ, ಬಸವರಾಜ ಗವಾನಿ, ಬಾಹುಸಾಹೇಬ ಸಾಮನೆ, ಸಾಗರ ಶಿವಕ್ಕನವರ, ಅನೀಲ ಈರಗಾರ, ಮಾರುತಿ ಮಗದುಮ, ಹಣಮಂತ ಮಾಂಗ, ಅವಿನಾಶ ಕಾಂಬಳೆ ಹಾಗೂ ವಿದ್ಯಾರ್ಥಿಗಳು ಇದ್ದರು.