ಲೋಕದರ್ಶನ ವರದಿ
ಸಿಂದಗಿ 01: ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡಿಬೇಕು. 7ನೇ ತರಗತಿವರೆಗೆ ಮಾತೃಭಾಷೆ ಕನ್ನಡದಲ್ಲಿ ಕಲಿಸಬೇಕು. ನಂತರ ಮಗುವಿನ ಇಚ್ಛಾನುಸಾರ ಬೋಧನಾ ಮಾಧ್ಯಮವನ್ನು ಬದಲಾಯಿಸಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಮಕ್ಕಳ ಸಾಹಿತಿ ಹ.ಮ.ಪೂಜಾರ ಹೇಳಿದರು.
ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ 5ನೇ ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಸಂಖ್ಯೆ ಕಡಿಮೆಯಿದೆ ಎಂದು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಕಾರ್ಯ ಸರಕಾರ ಎಂದಿಗೂ ಮಾಡಬಾರದು. ಮಕ್ಕಳ ಸಂಖ್ಯೆ ಎಷ್ಟೇ ಇರಲಿ ಅಲ್ಲಿ ಪರಿಣಾತ್ಮಕವಾಗಿ ಶಿಕ್ಷಣ ನೀಡಬೇಕು. ಶಿಕ್ಷಕರಿಗೆ ಪ್ರೇರಣೆ ನೀಡುವ ಕೆಲಸ ಸರಕಾರ ಮಾಡಬೇಕು. ಮಹಾನಗರಗಳಲ್ಲಿ ಕನ್ನಡ ಮಿಶ್ರಭಾಷೆ ಸಿಗುತ್ತಿದೆ. ಅಚ್ಚು ಕನ್ನಡ ಭಾಷೆ ಹಳ್ಳಿಗರಲ್ಲಿ ಮಾತ್ರ ಸಿಗುವಂತ ಸ್ಥಿತಿ ಬಂದೊದಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಭಾಷೆ ಅಭಿವೃದ್ಧಿ ಪಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಾನಿಧ್ಯ ವಹಿಸಿದ ಸಿಂದಗಿಯ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದಲ್ಲಿ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ. ಸಮ್ಮೇಳನಗಳು ಗ್ರಾಮೀಣ ಮಟ್ಟದಲ್ಲಿ ನಡೆದು ಗ್ರಾಮೀಣ ಜನತೆಯಲ್ಲಿ ಕನ್ನಡಪರ ಚಿಂತನೆ ನಡೆಸಬೇಕು. ಸರಕಾರ ಶೈಕ್ಷಣಿಕ ಅಭಿವೃದ್ಧಿ ಮಾಡಲು ಸಾಕಷ್ಟು ಶ್ರಮಿಸುತ್ತಿದೆ. ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು. ಇದರಿಂದ ಬಡಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ದೊರಕಲು ಸಾಧ್ಯ ಎಂದರು.
ಸಮ್ಮುಖ ವಹಿಸಿದ ತಾಲೂಕಿನ ಕನ್ನೊಳ್ಳಿ ಗ್ರಾಮದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸೋಣ ಎಂದರು. ಸಾಹಿತಿ ಮನು ಪತ್ತಾರ ಅವರು ಮಾತನಾಡಿದರು.
ಗ್ರಾಮದ ಬಿ.ಎನ್.ಪಾಟೀಲ, ಜೆಡಿಎಸ್ ರಾಜ್ಯ ಮಹಿಳಾ ಕಾರ್ಯದಶರ್ಿ ಶೈಲಜಾ ಸ್ಥಾವರಮಠ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಚಿಕ್ಕಸಿಂದಗಿಯ ಚಿತ್ರಲೇಖಾ ಜೋಗುರ, ಸಾಹಿತಿ ಮನು ಪತ್ತಾರ, ಸಾಹಿತಿ ಸಿದ್ಧಾರೂಡ ಕಟ್ಟಿಮನಿ, ಚಂದ್ರಶೇಖರ ನಾಗರಬೆಟ್ಟ, ಡಾ.ಶಿವಾನಂದ ಹೊಸಮನಿ, ಗುರುರಾಜ ಪಡಶೆಟ್ಟಿ, ಸಂಜೀವ ಯಂಕಂಚಿ, ಈರಣ್ಣ ಬಡಿಗೇರ, ಪ್ರೀತಿ ರಜಪೂತ, ಡಾ. ಪ್ರಶಾಂತ ಬಮ್ಮಣ್ಣಿ, ಮೀನಾಕ್ಷಿ ವಾಗ್ಮೋರೆ, ಮಲ್ಲಿಕಾಜರ್ುನ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಸಿಂಚನ : ಸಮಾರೋಪ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು. ಗ್ರಾಮದ ಅಪ್ಪಯ್ಯ ಹಿರೇಮಠ ಅವರು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ ವಿಜಯಪುರದ ಚಾಣಿಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ ಅವರು ಮಾತನಾಡಿದರು.
ಬಿಎಸ್ಪಿ ರಾಜ್ಯ ಪ್ರಧಾನಕಾರ್ಯದಶರ್ಿ ಡಾ.ದಸ್ತಗೀರ ಮುಲ್ಲಾ, ಡಾ.ಸಮೀರ ಹಾದಿಮನಿ, ಎಂ.ಬಿ.ಅಲ್ದಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾ ತಂಡಗಳು, ಸಿಂದಗಿಯ ಎಬಿಸಿಡಿ ಡ್ಯಾನ್ಸ್ ಕ್ಲಾಸ್ ವಿದ್ಯಾಥರ್ಿಗಳು, ಪ್ರಾಥಮಿಕ ಶಾಲೆ ವಿದ್ಯಾಥರ್ಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ತಾಲೂಕಿನ ವಿವಿಧ ಗ್ರಾಮಗಳ ಶಾಲಾ ಶಿಕ್ಷಕರು, ವಿದ್ಯಾಥರ್ಿಗಳು, ಸಾಹಿತ್ಯಾಸಕ್ತರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.