ಹೂವಿನಹಡಗಲಿ 25: ಕಡಿಮೆ ವೆಚ್ಚದಲ್ಲಿ ಬಡ ವಿದ್ಯಾರ್ಥಿಗಳಿಗೆ ಕಳೆದ 25 ವರ್ಷದಿಂದ ಉತ್ತಮ ಶಿಕ್ಷಣ ಒದಗಿಸುತ್ತಿರುವ ಪಟ್ಟಣದ ಮಲ್ಲಿಗೆ ವಿದ್ಯಾ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ ಹೇಳಿದರು.
ಪಟ್ಟಣದ ಮಲ್ಲಿಗೆ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಮಟ್ಟದ ಹುದ್ದೆಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಹೆಚ್.ಎಂ. ಬೆಟ್ಟಯ್ಯ . ಪುರಸಭೆ ಮಾಜಿ ಅದ್ಯಕ್ಷ ವಾರದ ಗೌಸಮೊಹಿದ್ದೀನ್ ಮಾತನಾಡಿದರು. ಮಾತನಾಡಿದರು.ಶಿಕ್ಷಕ ಎಲ್ ಖಾದರ್ ಬಾಷಾ ಮಾತನಾಡಿ, ಮಲ್ಲಿಗೆ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದವು ಉತ್ತಮ ಪಾಠ ಬೋಧನೆ ಜೊತೆಗೆ ಪ್ರಯೋಗಿಕವಾಗಿ ಮಕ್ಕಳ ಜ್ಞಾನ ಹೆಚ್ಚುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಹೆಚ್.ಎಂ. ಬೆಟ್ಟಯ್ಯ . ಪುರಸಭೆ ಮಾಜಿ ಅದ್ಯಕ್ಷ ವಾರದ ಗೌಸಮೊಹಿದ್ದೀನ್ ಮಾತನಾಡಿದರು.
ಪ್ರಾಸ್ತಾವಿಕವಾಗಿ ಸಂಸ್ಥೆಯ ಕೆ. ಮಹಬೂಬ್ ಸುಬಾನ್, ಹೆಚ್. ಷೇಕ್ ಮಹ್ಮದ್ ಅವರು ವರದಿ ವಾಚನ ಮಾಡಿದರು. ಸ್ವಾಗತ ಮುಖ್ಯ ಶಿಕ್ಷಕಿ ಫರ್ವಿನ್ ತಾಜ್, ಶಿಕ್ಷಕಿಯರಾದ ಲಕ್ಷ್ಮೀದೇವಿ, ಕುಮಾರಿ ಅನಿತಾ, ಕೊಟ್ರಮ್ಮ, ಪೂಜಾ, ಸವಿತಾ, ಫಾತಿಮಾ, ಲಕ್ಷ್ಮಿದೇವಿ ಕಾರ್ಯಕ್ರಮ ಸಂಯೋಜಿಸಿದರು. ಸಮಾರಂಭದಲ್ಲಿ ಸಂತೋಷ್ಕುಮಾರ್ ಜೈನ್, ಪೊಲೀಸ್ ಇಲಾಖೆಯ ಖಲಂದರ್ ಬಾಗಳಿ, ಸಿಆರ್ಿ ಚನ್ನವೀರ ಗೌಡ್ರು, ಮೊಹ್ಮದ್ ಅಲಿ, ಹೆಚ್. ನಜೀರ್ ಸಾಬ್, ಎಸ್ ಇಸ್ಮಾಯಿಲ್ ಸಾಬ್, ಸಂಸ್ಥೆಯ ಕಾರ್ಯದರ್ಶಿ ಎಲ್. ಅಕ್ಬರ್ ಸೇರಿದಂತೆ ಮಕ್ಕಳ ಪಾಲಕರು, ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.