ಹೆಣ್ಣು ಮಕ್ಕಳ ಪರಿಪೂರ್ಣ ಶಿಕ್ಷಣಕ್ಕೆ ಶಿಕ್ಷಕಿಯರು ಶ್ರಮಿಸಬೇಕು- ಪ್ರಕಾಶ ಕೋಳಿವಾಡ
ರಾಣೆಬೆನ್ನೂರು : ಮಾ 22 ಅಂದಿನ ಮಹಿಳೆಯರಿಗೆ ಶಿಕ್ಷಣ ನಿಷೇಧವಿದ್ದ ಕಾಲದಲ್ಲಿಯೇ ಮಹಿಳೆಯರ ಪರ ಚಿಂತಕಿ, ಸಾವಿತ್ರಿಬಾಯಿ ಫುಲೆ ಅವರು, ಮಹಿಳಾ ಶಿಕ್ಷಣ ಸಮಾನತೆಯ ಹಕ್ಕಿಗಾಗಿ ಹೋರಾಡಿದ ಧೀಮಂತ ಮಹಿಳೆ ಅವರಾಗಿದ್ದರು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು, ಶನಿವಾರ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಭವನದಲ್ಲಿ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಮಹಿಳಾ ದಿನಾಚರಣೆ ಹಾಗೂ ಮತ್ತು ಸಾಧಕ ಶಿಕ್ಷಕಿಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.
ವೈದ್ಯ ತಪ್ಪು ಮಾಡಿದರೆ ರೋಗಿ ಸಾವು, ಅಭಿಯಂತರ ಲೆಕ್ಕ ತಪ್ಪಿದರೆ ಕಟ್ಟಡ ನೆಲಕ್ಕೆ, ಆದರೆ ಸಮಾಜದಲ್ಲಿ ಗೌರವ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಶಿಕ್ಷಕರು ಎಚ್ಚರ ತಪ್ಪಿದರೆ ಮಕ್ಕಳ ಭವಿಷ್ಯ ಹಾಳು. ಅದಕ್ಕಾಗಿ ಶಿಕ್ಷಕರು ಅತ್ಯಂತ ಜವಾಬ್ದಾರಿಯುತವಾಗಿ, ತಮ್ಮ ಸೇವೆ ಸಲ್ಲಿಸಬೇಕಾಗಿದೆ ಎಂದರು. ಆಂಗ್ಲ ಭಾಷೆಯ ಅಭಿವೃದ್ಧಿಗಾಗಿ ಸ್ಫೂಕನ್ ಇಂಗ್ಲೀಷ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಲೈಬ್ರಿಗಳನ್ನು ಸ್ಥಾಪಿಸಲಾಗುವುದು ಇದರಿಂದ ಆಂಗ್ಲ ಭಾಷಾ ಕೌಶಲ್ಯತೆ ಬೆಳೆದು ಭವಿಷ್ಯದಲ್ಲಿ ಅವರ ಜೀವನ ಉಜ್ವಲಪಡಿಸಿಕೊಳ್ಳಲು, ಇದು ಸಹಕಾರಿಯಾಗಲಿದೆ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ, ಸ್ಪಟಿಕಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಇಂದಿನ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ನೀಡಬೇಕಾದ ಅಗತ್ಯವಿದೆ.
ಶಿಕ್ಷಣ ಸಮಾನತೆಗಾಗಿ ಅಂದಿನ ಮಡಿವಂತಿಯ ಕಾಲದಲ್ಲಿ ಸಾವಿತ್ರಿಬಾಯಿ ಪುಲೆ ಅವರು, ಹೋರಾಡಿದ್ದರ ಫಲವಾಗಿ, ಇಂದು ಸಮಾಜದಲ್ಲಿ ಮಹಿಳೆಯರು ಶಿಕ್ಷಣವಂತರಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಮಾತೇಯರಾಗಿ ಹೊರ ಹೊಮ್ಮಿದ್ದಾರೆ. ಅವರ ಸಾಮಾಜಿಕ ಸೇವಾ ಕಾರ್ಯವು ಅತ್ಯಂತ ಶ್ಲಾಘನಿಯ ಕಾರ್ಯವಾಗಿದೆ. ಶಿಕ್ಷಕರು ತಮ್ಮ ನಿತ್ಯದ ಬದುಕಿನಲ್ಲಿ, ಧರ್ಮ, ಸಂಸ್ಕೃತಿ, ಮತ್ತು ಸಂಸ್ಕಾರ ಅಳವಡಿಸಿಕೊಂಡು, ವೃತ್ತಿ ಕಾಯಕಯೋಗಿಗಳಾಗಿ ಗುಣಮಟ್ಟದಲ್ಲಿ ಶಿಕ್ಷಣ ನೀಡಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.
ಮುಖ್ಯ ಅತಿಥಿಯಾಗಿದ್ದ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಅವರು, ತಾಲೂಕಿನಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣ ಚಿಂತಕರಾದ ಶಾಸಕರು ಶೈಕ್ಷಣಿಕ ಪ್ರಗತಿ ಮತ್ತು ಅಭಿವೃದ್ಧಿಯ ಕಾರ್ಯದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರೆ.
ತಾಲೂಕು ಶೈಕ್ಷಣಿಕವಂತರ ನಾಡಾಗಿ ಪರಿವರ್ತಿಸುವ ಕಾರ್ಯದಲ್ಲಿ ಮುಂದಾಗಿರುವ ಶಾಸಕರ ಈ ಕಾರ್ಯವು ಜನರ ಮತ್ತು ವಿದ್ಯಾರ್ಥಿಗಳ ಜನಮನ್ನಣೆಗೆ ಪಾತ್ರವಾಗಿದೆ ಎಂದು ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸಿದರು.
ಇನ್ನೋರ್ವ ಅತಿಥಿ ವಿಕೆಕೆ ಅಧ್ಯಕ್ಷ ಶ್ರೀಮತಿ ಪೂರ್ಣಿಮಾ ಕೋಳಿವಾಡ ಅವರು, ಸಮಾಜದಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದಿದೆ.ಸ್ವಾಭಿಮಾನ, ಸಮಾನತೆಗೆ ಸದಾ ಮುಂದಿರುವ ಸ್ತ್ರೀ ಅಭಲೆಯಲ್ಲ. ಸರ್ವರಂಗದಲ್ಲಿಯೂ ತನ್ನ ಸಾಧನೆ ಮೆರಯುತಿರುವುದು ದೇಶದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಆರ್. ಚೂಡಾಮಣಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಿಳೆ ಮತ್ತು ಆರೋಗ್ಯ ವಿಷಯ ಕುರಿತು ಡಾ,ಹೇಮಾ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿದರು.
ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಅವರು ಶಾಸಕರಿಗೆ ಮನವಿ ಸಲ್ಲಿಸಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ. ಸಿ.ಬಲ್ಲೂರ, ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆಯಲ್ಲಿ ಕ. ರಾ. ಪ್ರಾ. ಶಾ. ಶಿ. ಸಂಘದ ತಾಲೂಕ ಅಧ್ಯಕ್ಷ ಸುರೇಶ್ ಕೋಟಿಹಾಳ,
ರಾಜ್ಯ. ಸ. ನೌ. ಸಂಘದ ತಾಲೂಕ ಅಧ್ಯಕ್ಷ ಮಂಜುನಾಥ್ ಕೆಂಚರೆಡ್ಡಿ, ಡಯಟ್ ಉಪನ್ಯಾಸಕಿ ವಿಜಯಾ ಪಾಟೀಲ, ಬಿ ಆರ್ ಸಿ, ಮಂಜನಾಯಕ್ ಎಲ್, ಸಹನಾ ದೈವಜ್ಞ, ಹೋರಾಟ ಸಮಿತಿ ಅಧ್ಯಕ್ಷ ಎ. ಎ.ಮುಲ್ಲಾ, ವಿ.ಎಚ್. ಕೆಂಚರೆಡ್ಡಿ, ಎಂ ಎನ್ ರೆಡ್ಡಿ, ಇಸ್ಮಾಯಿಲ್ ಐರಣಿ, ಬಸವರಾಜ ನಾಯಕ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಂಘದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ,ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ರಂಗದಲ್ಲಿ ವಿಶಿಷ್ಟ ಸಾಧನೆ ಮೆರದ ಹಲವು ಮಹಿಳೆಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಪವಿತ್ರಾ ಪಾಟೀಲ ಪ್ರಾರ್ಥಿಸಿದರು. ತಾಲೂಕ ದೈ.ಶಿ.ಸಂ.ಅಧ್ಯಕ್ಷ ಎಸ್. ವಿ.ದೊಡ್ಡಮನಿ, ಸ್ವಾಗತಿಸಿದರು. ಶಿಕ್ಷಕಿ ಗೀತಾ ಅಜೋಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಕಾಶ ಹೊಸಳ್ಳಿ ನಿರೂಪಿಸಿ ವಂದಿಸಿದರು. ನಂತರ ನಡೆದ ಶಿಕ್ಷಕಿಯರ ವೈವಿಧ್ಯಮಯ ಸಾಂಸ್ಕೃತಿಕ, ಗಮನ ಸೆಳೆದವು.