ಮುಗಳಖೋಡ : ಮಕ್ಕಳಲ್ಲಿನ ವಿಶೇಷ ಪ್ರತಿಭೆಯನ್ನು ಆನಾವರಣ ಮಾಡಬೇಕಾದರೆ ಶಿಕ್ಷಕರಲ್ಲಿ ಅಂತಹ ಪ್ರತಿಭೆ ಇರುವುದು ಮುಖ್ಯವಾಗಿದೆ. ಅಂತಹ ಪ್ರತಿಭೆಯನ್ನು ಹೊರಗೆಳೆಯಲೂ ಇರುವ ವೇದಿಕೆ ಎಂದರೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳು, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಿಕ್ಷಕರು ರಾಜ್ಯಮಟ್ಟದವರೆಗೂ ಆಯ್ಕೆಯಾಗಿ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಬೇಕೆಂದು, ಇಂತಹ ಚಟುವಟಿಗಳ ಮೂಲಕ ತಮ್ಮಲ್ಲಿ ವಿಶಿಷ್ಟವಾದ ಅಂಶಗಳನ್ನು ಎಲ್ಲರ ಮುಂದೆ ವ್ಯಕ್ತಪಡಿಸಿ ತಮ್ಮ ವ್ಯಕ್ತಿತ್ವದ ಚೈತನ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ರಾಯಬಾಗ ಕ್ಷೇತ್ರ ಶಿಕ್ಷಣ ಸಂಯೋಜಕರು ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀ ಎಸ್.ಆರ್.ಕಂಬಾರ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮುಗಳಖೋಡ ಪಟ್ಟಣದ ಶ್ರೀ ಸಿದ್ದಶ್ರೀ ಪ್ರೌಢಶಾಲೆಯಲ್ಲಿ ಆಯೋಜಿಸಿದ ಸನ್ 2019-20 ನೇ ಸಾಲಿನ್ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪಧರ್ೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಎಲ್ಲ ಶಿಕ್ಷಕರು ಪಾದರಸದಂತೆ ಚಟುವಟಿಕೆಯುತವಾಗಿ ಇದ್ದು ತಮ್ಮಲ್ಲಿಯ ಪ್ರತಿಭೆಯನ್ನು ಮಕ್ಕಳಿಗೆ ಧಾರೆ ಎರಿಯಬೇಕೆಂದು ಹೇಳಿದರು.
ನಂತರ ಮುಖ್ಯ ಅಥಿತಿಗಳಾಗಿ ಆಗಮಿಸಿದ ರಾಯಬಾಗ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಬಿ.ಎಂ.ಮಾಳಿ ಶಿಕ್ಷಕರು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಹೆಚ್ಚು ಹೆಚ್ಚು ಜನ ತಮ್ಮ ಪ್ರತಿಭೆಯನ್ನು ಅನಾವರಣಗೋಳಿಸಬೇಕೆಂದು ಇದು ವ್ಯಕ್ತಿತ್ವ ವಿಕಸನದ ಸಾಧನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ರಾಯಬಾಗ ಬಿಇಓ ಎಸ್.ಎ.ಭಜಂತ್ರಿ ಆಗಮಿಸಿದ್ದರು. ಅಥಿತಿಗಳಾಗಿ ಮುಖ್ಯೋಪಾಧ್ಯಾಯರಾದ ಡಿ.ವಿ.ನಡಟ್ಟಿ, ಎಸ್,ಎಸ್,ಮಧಾಳೆ, ಪಿ.ಪಿ.ಹುಲ್ಲೋಳ್ಳಿ, ಎಸ್.ಬಿ.ಕಡಕಭಾವಿ, ಇಸಿಓ ಎಚ್.ಎಸ್.ಬೆನ್ನಾಡಿ, ಮಲ್ಲಿಕಾರ್ಜುನ ಶಾಸ್ತ್ರಿ, ಎಂ.ಎಸ್.ಬಡಿಗೇರ ಮುಂತಾದವರು ಪಾಲ್ಗೊಂಡಿದ್ದರು.