ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಶಿಕ್ಷಕರು ಕಾಯ, ವಾಚ ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು: ಭುನೇಶ ಪಾಟೀಲ ಸಿಇಓ

Teachers should be active and literate so that children get quality education: Bhunesh Patil CEO

ಧಾರವಾಡ 25: ಸತತವಾಗಿ ಅಧ್ಯಯನಶೀಲರಾಗಿ ಮಕ್ಕಳಿಗೆ ಪ್ರಾಯೋಗಿಕ ಪಾಠಗಳನ್ನು ವರ್ಗಕೋಣೆಯಲ್ಲಿ ಅನುಷ್ಠಾನಗೊಳಿಸಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಕ್ಷಕರೊಂದಿಗೆ ನೇರಸಂವಾದ ಕ್ರಿಯೆ ಮಾಡಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸರ್ಕಾರಿ ಶಾಲೆಗಳ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುವಲ್ಲಿ ಶಿಕ್ಷಕರು ಕಾಯ, ವಾಚ ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ ಧಾರವಾಡದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ರವರು ಹೇಳಿದರು. 

ಶಾಲಾ ಶಿಕ್ಷಣ ಇಲಾಖೆ ಧಾರವಾಡ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತು ಕಿಣಚಿಟಛಿಠಟ ಸಹಯೋಗದೊಂದಿಗೆ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾರ್ಥನಾ ಮಂದಿರದಲ್ಲಿ ಇಂದು(ಫೆ.25) ಆಯೋಜಿದ್ದ ಪ್ರೌಢಶಾಲೆಗಳಿಗೆ ವಿಜ್ಞಾನ ಪ್ರಯೋಗ ಸಲಕರಣೆಗಳ ವಿತರಣೆ ಹಾಗೂ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.  

5 ವರ್ಷಗಳಿಂದ 25 ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಹಾಗೂ ಶಾಲೆಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು, ಪಾಠೋಪಕರಣ ಹಾಗೂ ಪಿಠೋಪಕರಣಗಳನ್ನು ಒಸಗಿಸಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಪ್ರತಿ ತಾಲೂಕಿನಲ್ಲಿ ವಿಷಯವಾರು 5 ಜನ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿಗೊಳಿಸಿ ಜಿಲ್ಲಾಮಟ್ಟದಲ್ಲಿ ಪಡೆದ ಪ್ರಾಯೋಗಿಕ ಚಟುವಟಿಕಾ ಅಂಶಗಳನ್ನು ತಾಲೂಕಾ ಮಟ್ಟದಲ್ಲಿ ಎಲ್ಲ ಶಾಲೆಗಳ ಶಿಕ್ಷಕರಿಗೆ ತರಬೇತಿಯನ್ನು ನೀಡಿ ವಿಜ್ಞಾನದಲ್ಲಿ ಮಕ್ಕಳಿಗೆ ವಿಶೇಷ ಆಸಕ್ತಿ, ವೈಜ್ಞಾನಿಕ ಮನೋಭಾವನೆ ಬೆಳೆಸುವಂತೆ ಕ್ರಮವಹಿಸಲು ತಿಳಿಸಿದರು. ಬರುವ ಶೈಕ್ಷಣಿಕ ವರ್ಷದಲ್ಲಿ ಮೇ ತಿಂಗಳಿನಲ್ಲಿಯೇ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ತಿಂಗಳುವಾರು ಅನುಷ್ಠಾನಗೊಳಿಸುತ್ತಾ ಕಾಲಕಾಲಕ್ಕೆ ಮೌಲ್ಯಮಾಪನ ಕಾರ್ಯ ಮಾಡಿ ಶೈಕ್ಷಣಿಕ ಸಾಧನೆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸೂಕ್ತವಾಗಿ ಮಾರ್ಗೋಪಾಯಗಳನ್ನು ಕಂಡುಕೊಂಡು ಮಕ್ಕಳಿಗೆ ತಿಳುವಳಿಕೆ ನೀಡುವುದು. ಪ್ರತಿಯೊಬ್ಬ ಶಿಕ್ಷಕರು ವರ್ಗಕೋಣೆಯಲ್ಲಿ ಸೂಕ್ತ ರೀತಿಯಿಂದ ಬೋಧನೋಪಕರಣಗಳನ್ನು ಹಾಗೂ ಪ್ರಯೋಗಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳಿಗೆ ಕಲಿಕಾ ಪರಿಕರಣಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಹೇಳಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಯಟ್ ಪ್ರಾಚಾರ್ಯರಾದ ಜಯಶ್ರೀ ಕಾರೇಕಾರ ಮಾತನಾಡಿ, ಪ್ರೌಢಶಾಲಾ ಸಹಶಿಕ್ಷಕರು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯವರು ಪೂರೈಕೆ ಮಾಡಿದ ವಿಜ್ಞಾನ ಉಪಕರಣಗಳನ್ನು ಶಾಲಾಹಂತದಲ್ಲಿ ಸಮರ​‍್ಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.  

ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಸ್‌.ಎಂ ಹುಡೇದಮನಿ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯವರು ಸರ್ಕಾರಿ ಶಾಲೆಗಳಲ್ಲಿ ಅನೇಕ ಶೈಕ್ಷಣಿಕ ಚಟುವಟಿಕೆಗಲನ್ನು ಅನುಷ್ಠಾನಗೊಳಿಸಿದ್ದಾರೆ. ಶಾಲೆಗಳಿಗೆ ಅವಶ್ಯಕವಿರುವ ವಿಜ್ಞಾನ ಉಪಕರಣಗಳನ್ನು ಕಂಪ್ಯೂಟರ್‌ಗಳನ್ನು, ಪ್ರೊಜೆಕ್ಟರ್ ಹಾಗೂ ಹೆಡ್‌ಫೋನ್ಸ್‌ಗಳನ್ನು ಟ್ಯಾಬ್‌ಗಳನ್ನು, ಶೈಕ್ಷಣಿಕ ಬೋಧನೋಪಕರಣಗಳನ್ನು ಮತ್ತು ಶುದ್ಧ ಕುಡಿಯತುವ ನೀರಿನ ಘಟಕಗಳನ್ನು, ಹೆನ್ಣು ಮತ್ತು ಗಂಡು ಪ್ರತ್ಯೇಕ ಹೈಟೆಕ್ ಶೌಚಾಲಯಗಳನ್ನು ನಿರ್ಮಾಣ ಮಾಡಿ ಕಟ್ಟಿದ್ದಾರೆ. ಅಲ್ಲದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವೇಕ ಸ್ಕಾಲರ್‌ಶಿಪ್‌ಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಸಾಂಗಕ್ಕಾಗಿ ಧನಸಹಾಯ ಮಾಡಿ, ಸಮಾಜಮುಖಿಯಾಗಿ ಸಮಾಜದ ಪ್ರತಿಯೊಬ್ಬ ಸದಸ್ಯರಿಗೆ ಶಿಕ್ಷಣ ಮತ್ತು ಕೌಶಲ್ಯಗಳನ್ನು ಬೆಳೆಸುವುದರಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಸರ್ಕಾರಿ ಪ್ರೌಢಶಾಲೆಗಳಿಗೆ ಭೌತಶಾಸ್ತ್ರ, ರಾಸಾಯನಶಾಸ್ತ್ರ ಹಾಗೂ ಪ್ರಾಣಿ ಮತ್ತು ಸಸ್ಯಶಾಸ್ತ್ರಗಳ ಪ್ರಯೋಗಗಳನ್ನು 8, 9 ಮತ್ತು 10 ನೇ ತರಗತಿ ಮಕ್ಕಳಿಗೆ ಸರಳವಾಗಿ ಕೈಗೊಳ್ಳಲು ಸಹಾಯಕವಾಗುವಂತ 100 ವಿಜ್ಞಾನ ಉಪಕರಣಗಳನ್ನು 25 ಶಾಲೆಗಳಿಗೆ ಪೂರೈಕೆ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಇದರ ಅವಶ್ಯಕತೆ ಇರುವುದರಿಂದ ಮಕ್ಕಳು ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಕಾರಿಯಾಗಿವೆ ಎಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾದೇಶಿಕ ಸ್ವಾಮಿ ವಿವಚೇಕಾನಂದ ಯೂಥ್ ಮೂವ್‌ಮೆಂಟ್ ಧಾರವಾಡ  ಮುಖ್ಯಸ್ಥರಾದ ಜಯಂತ್ ಕೆ.ಎಸ್ ಮಾತನಾಡಿ ವಿಜ್ಞಾನ ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವಂತೆ ತಿಳಿಸಿದರು.  

ಡಯಟ್‌ನ ಹಿರಿಯ ಉಪನ್ಯಾಸಕರಾದ ಎ.ಎ ಖಾಜಿ ಮಾತನಾಡಿ, ಎಸ್ ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯಲ್ಲಿ ಡಯಟ್ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.  

ಡಯಟ್‌ನ ಹಿರಿಯ ಉಪನ್ಯಾಸಕರಾದ ಎ.ಎನ್‌. ಕಂಬೋಗಿ ಇವರು ಡಯಟ್ ಕೈಗೊಳ್ಳುವ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.  

ಸದರಿ ಕಾರ್ಯಾಗಾರದಲ್ಲಿ ಎಸ್‌.ಎನ್‌.ದೊಡಮನಿ, ದೀಪಕ್ ಕುಲಕರ್ಣಿ, ರೇಖಾ ಭಜಂತ್ರಿ, ಜೆ.ಜಿ.ಸಯ್ಯದ್, ಲಕ್ಷ್ಮಿ ಭಗವತಿ, ಕುಮಾರ ಹುಲಗೂರ, ಪ್ರಾಸ್ತವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಪ್ರಕಲ್ಪ ನಿರ್ದೇಶಕರು ಜಯಕುಮಾರ ಕೆ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಚೇತನ, ಭರಮಪ್ಪ, ಕೃಷ್ಣ ಲಮಾಣಿ, ಅಮೃತಾ ಮುಂತಾದವರು ಭಾಗವಹಿಸಿದ್ದರು.