ಲೋಕದರ್ಶನ ವರದಿ
ಕೊಪ್ಪಳ 22: ಶಿಕ್ಷಕರು ನಿರಂತರ ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ವಿಷಯಗಳನ್ನು ಹೆಚ್ಚು ತಿಳಿದುಕೊಂಡರೆ ತರಗತಿಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾದ್ಯವಾಗುತ್ತದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಿ.ಎಡ್ ವಿದ್ಯಾಥರ್ಿಗಳ ಪ್ರಾಯೋಗ ಪಾಠದ ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಪಠ್ಯ, ಪಠ್ಯೇತರ ಹಾಗೂ ಸಾಮಾನ್ಯ ಜ್ಞಾನವನ್ನು ಹೆಚ್ಚು ಸಂಪಾದಿಸಿಕೊಳ್ಳುವ ಮೂಲಕ ವಿದ್ಯಾರ್ಥಿಳಿಗೆ ಹೆಚ್ಚಿನ ವಿಷಯವನ್ನು ತಿಳಿಸಲು ಅನೂಕೂಲವಾಗುತ್ತದೆ.ಆದ್ದರಿಂದ ಶಿಕ್ಷಕರು ನಿರಂತರ ಕಲಿಯುವ ವಿದ್ಯಾರ್ಥಿಯಾಗಿರಬೇಕು ಜೊತೆಗೆ ಗಣಕಯಂತ್ರದ ಜ್ಞಾನವಿಲ್ಲದ ಇದ್ದರೆ ಶಿಕ್ಷಕರು ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯ, ನೈಪುಣ್ಯತೆ ತುಂಬಲು ಸಾಧ್ಯವಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಶಿಕ್ಷಕರು ಗಣಕ ಜ್ಞಾನವನ್ನು ಪಡೆಯಬೇಕು. ತರಬೇತಿ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಹೆಚ್ಚು ಮಹತ್ವವನ್ನು ಪಡೆದಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ವೃತ್ತಿಗೆ ಸೇರುವ ಮುನ್ನ ಪಡೆಯುವ ತರಬೇತಿ ಬಹಳ ಮಹತ್ವ ಪಡೆದಿದೆ.ತರಬೇತಿಯ ಸಮಯದಲ್ಲಿ ನೀಡಲಾಗುವ ಎಲ್ಲಾ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆದು, ವೃತ್ತಿಗೆ ಸೇರಿದ ನಂತರ ತರಬೇತಿ ಸಮಯದಲ್ಲಿ ನೀಡಿದ ಜ್ಷಾನವನ್ನು ಬಳಿಸಿಕೊಂಡಾಗ ಮಾತ್ರ ವೃತ್ತಿಯಲ್ಲಿ ದಕ್ಷತೆಯು ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೇಣುಕಾನಂದ ಅಂಗಡಿ ಮಾತನಾಡುತ್ತಾ, ಎಲ್ಲಾ ವೃತ್ತಿಗಿಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ನೇಮಕಾತಿ ಪೂರ್ವದಲ್ಲಿ ನೀಡಲಾಗುವ ಎಲ್ಲಾ ಜ್ಞಾನವನ್ನು ತಮ್ಮ ಬೋಧನಾ ಚಟುವಟಿಕೆಯಲ್ಲಿ ಬಳಸಿಕೊಳ್ಳಬೇಕು.ಶಿಕ್ಷಣ ಕ್ಷೇತ್ರ ಸದಾ ಬದಲಾವಣೆ ಹೊಂದು ಕ್ಷೇತ್ರವಾಗಿದೆ. ಅದರ ಜೊತೆಗೆ ಶೈಕ್ಷಣಿಕ ಪ್ರಗತಿಯಲ್ಲಿ ಸಮಯದಲ್ಲಿ ಶಿಕ್ಷಕರ ಜೊತೆಯಲ್ಲಿ ಪಾಲಕರು ಕೂಡಾ ಕೈ ಜೋಡಿಸಬೇಕು ಅಂದಾಗ ಮಾತ್ರ ಮಗುವಿನ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಮೊಹಮ್ಮದ್ ಆಬೀದ ಹುಸೇನ ಅತ್ತಾರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸ್ಪಧರ್ೆಯು ಹೆಚ್ಚಾಗಿದ್ದು, ಸ್ಪರ್ಧೆಗೆ ತಕ್ಕಂತ ಶಿಕ್ಷಣವನ್ನು ಶಿಕ್ಷಕರು ನೀಡಬೇಕು ಅದರ ಜೊತೆಗೆ ಮಕ್ಕಳು ಕೂಡಾ ಹೆಚ್ಚು ಕಠಿಣ ಪರಿಶ್ರಮವನ್ನು ಪಟ್ಟಾಗ ಮಾತ್ರ ಸ್ಪಧರ್ೆಯಲ್ಲಿ ಜಯಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗುರುರಾಜ ಕಟ್ಟಿ, ನಾಗಪ್ಪ ನರಿ, ಶ್ರೀನಿವಾಸರಾವ ಕುಲಕಣರ್ಿ, ಸುನಂದಾಬಾಯಿ, ಶಂಕ್ರಮ್ಮ ಬಂಗಾರ ಶೆಟ್ಟರ್, ಜಯಶ್ರೀ ದೇಸಾಯಿ, ಭಾರತಿ, ಮೋಹಿನಪಾಷಾಬೀ, ಗಂಗಮ್ಮ, ದಿವ್ಯ ಬಿ.ಎಂ.ಮುಂತಾದವರು ಹಾಜರಿದ್ದರು. ಬಿ.ಎಡ್.ಪ್ರಶಿಕ್ಷಣಾರ್ಥಿ ಸುಜಾತ ಹುರಕಡ್ಲಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಿ.ಎಡ್.ಪ್ರಶಿಕ್ಷಣಾಥರ್ಿ ಬಾದಾಬಿ ಪ್ರಾರ್ಥನೆ ನಿರ್ವಹಿಸಿದರು. ಬಿ.ಎಡ್. ಪ್ರಶಿಕ್ಷಣಾಥರ್ಿ ಮಮತಾ.ಎಸ್.ಎಂ.ಸ್ವಾಗತಿಸಿ,ಸುಜಾತ.ಬಿ.ಎಂ.ವಂದಿಸಿದರು.