ಲೋಕದರ್ಶನವರದಿ
ಶಿಗ್ಗಾವಿ : ವಿದ್ಯಾಥರ್ಿ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಅಡಿಪಾಯವಿದ್ದಂತೆ, ಇಲ್ಲಿ ಪ್ರಾಥಮಿಕ ಶಿಕ್ಷಕರು ಮಕ್ಕಳಿಗೆ ನ್ಯಾಯುತವಾಗಿ ಭೋಧನೆ ಮಾಡಿ ಅವರಿಗೆ ನ್ಯಾಯ ಒದಗಿಸುವಂತ ಕಾರ್ಯಗಳನ್ನು ಮಾಡಬೇಕಾದರೆ ಶಿಕ್ಷಕರು ಮೊದಲು ಮಾನಸಿಕವಾಗಿ ಸದೃಡರಾಗಿರಬೇಕು ಆದರೆ ಇಂದಿನ ಸಕರ್ಾರ ಕೆಲವು ದ್ವಂದ್ವ ಹಾಗೂ ಗೊಂದಲದ ನಿರ್ಣಯಗಳಿಂದ ಶಿಕ್ಷಕರ ವರ್ಗ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದೆ ಇದರಿಂದ ಮಕ್ಕಳಿಗೆ ನ್ಯಾಯ ಒದಸಲು ಆಗುತ್ತಿಲ್ಲ ಎಂದು ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಎಸ್.ಎನ್.ಮುಗಳಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು, ಅವರ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇಯದನ್ನೆ ಮುಂದುವರಿಸಭೆಕು, ಕೋರಿಕೆಯ ವಗರ್ಾವಣೆ ನಡೆಸಬೇಕು, ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್,ಕೆ,ಜಿ ಮತ್ತು ಯು,ಕೆ,ಜಿ ಆರಂಭಿಸಬೇಕು, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರಂತೆ ಪರಿಗಣಿಸಿ ಶಿಕ್ಷಕ ವಿದ್ಯಾಥರ್ಿ ಅನುಪಾತವನ್ನು ಗುರುತಿಸುವಾಗ ಮುಖ್ಯೋಪಾಧ್ಯಾಯ, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ಹೆಚ್ಚುವರಿ ಪ್ರಕ್ರೀಯೆಯನ್ನು ಆರಂಭಿಸಬೇಕು, 6ನೇ ವೇತನ ಆಯೋಗದ ವರದಿ ಪ್ರಕಾರ ಮುಖ್ಯ ಗುರುಗಳಿಗೆ ವರ್ಷದ ಬಡ್ತಿಗಳನ್ನು ನೀಡಬೇಕು, ಗ್ರಾಮೀಣ ಕೃಪಾಂಕ ಶಿಕ್ಷಕರ ಹಾಗೂ ನೌಕರರ ಸಮಸ್ಯೆಗಳನ್ನು ನಿವಾರಿಸಭೆಕು ಎನ್,ಪಿ,ಎಸ್ ಬೂತದಿಂದ ಶಿಕ್ಷಕರ ಭವಿಷ್ಯ ಹಾಳಾಗುವದನ್ನು ತಪ್ಪಿಸಬೇಕು ಈ ಎಲ್ಲ ಬೇಡಿಕೆಗಳನ್ನು ಇಟ್ಟುಕೊಂಡು ಈಗಾಗಲೇ ರಾಜ್ಯ ಕಾರ್ಯಕಾರಿ ಸಮಿತಿಯ ತಿಮರ್ಾನದಂತೆ ಮೊದಲನೆಯ ಹಂತವಾಗಿ ಮೇ. 31 ರಂದು ಪತ್ರಿಕಾ ಗೋಷ್ಠಿ ನಡೆಸಿ ಸಕರ್ಾರಕ್ಕೆ ಮನವಿ ಸಲ್ಲಿಸಲು ಮೇ. 30 ರ ಸಭೆ ನಿರ್ಣಯಿಸಿತ್ತು.
ಈಗ ಎರಡನೇ ಹಂತವಾಗಿ ಇಂದು ಜಿಲ್ಲಾ ಹಂತದಲ್ಲಿ ಶಿಕ್ಷಕರನ್ನು ಸೇರಿಸಿ ಹಕ್ಕೋತ್ತಾಯ ಮಾಡಲಾಗುತ್ತಿದ್ದು ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮೂರನೆ ಹಂತವಾಗಿ ಸೆ. 5 ರಂದು ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ ಅವರು ಸಕರ್ಾರ ಇದಕ್ಕೆ ಅವಕಾಶ ಕೋಡದೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಕರ್ಾರಕ್ಕೆ ಮನವಿ ಮಾಡಿದರು.
ಸಂಘದ ಕಾರ್ಯದಶರ್ಿ ಎ, ಎಫ್, ಹೊಸಮನಿ ಮಾತನಾಡಿ ನಮ್ಮದು ದೊಡ್ಡ ಸಂಘಟನೆ ಈ ಹಿಂದೆ ಸಾಕಷ್ಟು ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಂಡಿದ್ದೆವೆ, ಈ ಹಿಂದೆ ನಾವು ಗುಣಾತ್ಮಕ ಶಿಕ್ಷಣ ನೀಡಿಲ್ಲವೇ? ಸಕರ್ಾರ ಪದವೀಧರ ಶಿಕ್ಷಕರ ವಿಷಯದಲ್ಲಿ ದ್ವಂದ್ವ ನೀತಿಯನ್ನು ತಂದಿದೆ, ಪ್ರಾಥಮಿಕ ಶಿಕ್ಷಕರ ಸಮಸ್ಯಗಳನ್ನು ನಿಗದಿತ ಅವದಿಯಲ್ಲಿ ಬಗೆಹರಿಸದಿದ್ದರೆ ಸಾಮೂಹಿಕ ರಜೆ ಹಾಗೂ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕಾರ ಮಾಡಲಾಗುವದು ಎಂದರು.
ನೌಕರ ಸಂಘದ ಅಧ್ಯಕ್ಷ ಅರುಣ ಹುಡೆದಗೌಡ್ರ ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ಣಯಕ್ಕೆ ಮತ್ತು ಅವರ ನ್ಯಾಯಯುತ ಬೇಡಿಕೆಗಳ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಎನ್ಪಿಎಸ್ ಅದ್ಯಕ್ಷ ಎಮ್, ಜಿ, ತಂಗೋಡ ಮಾತನಾಡಿ ಶಿಕ್ಷಕರಿಗೆ ಮರಣ ಶಾಸನ ವಾಗಿರುವ ಹೊಸ ಪಿಂಚಣಿ ಯೋಜನೆಯನ್ನು ಬಿಟ್ಟು ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸುವಂತೆ ಅಗ್ರಹಿಸಿದರು.
ಸಂಘಟನಾ ಕಾರ್ಯದಶರ್ಿ ಬಿ, ವೈ, ಉಪ್ಪಾರ, ವೆಂಕಟೇಶ ಬೆವಿನಹಳ್ಳಿ, ಮಾತನಾಡಿದರು.
ಗೌರವಾಧ್ಯಕ್ಷ ಬಿ,ಐ,ಅಂಗಡಿ, ಕೆ,ಎಸ್,ಹೊಸಳ್ಳಿ, ಎಫ್,ಸಿ,ಕಾಡಪ್ಪಗೌಡ್ರ, ಎ,ಬಿ,ಜಕ್ಕಣ್ಣವರ, ವಿ,ಡಿ,ಜೋಷಿ, ಆರ್,ಎಚ್,ಕೊಪ್ಪ, ಎಸ್,ಕೆ,ಸುಂಕದ, ಸಿ,ಎನ್,ಕಲಕೋಟೆ, ಕೆ,ಎಚ್,ಕುರಬರ, ಜಿ,ಬಿ,ಹಸಬಿ, ಟಿ,ಕೆ,ಪಾಟೀಲ್, ಬಿ,ವೈ,ಹುಲಮನಿ, ಬಿ,ಬಿ,ಕಟ್ಟಿಮನಿ, ಆರ್,ಆರ್,ರಟ್ಟಿಹಳ್ಳಿ ಸೇರಿದಂತೆ ಬಿಆರ್ಸಿ, ಸಿಆರ್ಸಿಗಳು, ಶಿಕ್ಷಕರ ಸಂಘದ ಸದಸ್ಯರು ಹಾಗೂ ಶಿಕ್ಷಕರು ಇದ್ದರು.