ಶಿಕ್ಷಕರು ನಾಡು ಕಟ್ಟುವ ಶಿಲ್ಪಿಗಳು

Teachers are the architects of the nation

ಶಿಕ್ಷಕರು ನಾಡು ಕಟ್ಟುವ ಶಿಲ್ಪಿಗಳು 

ಹೂವಿನ ಹಡಗಲಿ 06: ಶಿಕ್ಷಕರು ನಾಡು ಕಟ್ಟುವ ಶಿಲ್ಪಿಗಳು ಎಂದು ಡಾ ಹಿರಿಶಾಂತವೀರ ಮಹಾಸ್ವಾಮಿಗಳು ನುಡಿದರು. ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಭಾನುವಾರ ತಾಲೂಕಿನ ಬೂದನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತರಾದ ಶಿವಾನಂದಪ್ಪ ಕೆ ರವರ ನಿವೃತ್ತಿ ಬೆಸುಗೆ ಹಾಗೂ 60 ನೇ ಜನ್ಮದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರೈತರು ಶಿಕ್ಷಕರು ವೈದ್ಯರು ದೈಹಿಕ ಶಿಕ್ಷಕರು ಸಮಾಜ ಸೇವಕರನ್ನು ನಿವೃತ್ತಿಯ ಸಮಾರಂಭದಲ್ಲಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ಗುತ್ತಿಗೆದಾರರಾದ ಎಲ್ ಜಿ ಹೊನ್ನಪ್ಪನವರ್ ಅಧ್ಯಕ್ಷತೆ ವಹಿಸಿದ್ದರು.ಹಿಮಾಲಯ ಯೋಗಶ್ರೀ, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಚ್ ಎಂ ಬೆಟ್ಟಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ತಾಲೂಕು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್, ಮೈಸೂರಿನ ಪರಶುರಾಮಪ್ಪ,ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ ಬಿ ಜಗದೀಶ್ , ವಾಲ್ಮೀಕಿ ಸಮಾಜದ ಹಿರಿಯರಾದ ಯು ಹನುಮಂತಪ್ಪ ಇತರರು ಉಪಸ್ಥಿತರಿದ್ದರು. 

ಶಿಕ್ಷಣ ಆರೋಗ್ಯ ಕ್ರೀಡೆ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.ಚಿತ್ತಾರ ನೃತ್ಯ ಶಾಲೆಯ ಮಕ್ಕಳು ಭರತನಾಟ್ಯ ಪ್ರದರ್ಶಿಸಿದರು. ಅರ್ಚನಾ ಜೋಷಿ ಮಲ್ಲಿಕಾರ್ಜುನ, ಕವಿತಾ ಎಂ ,ದ್ವಾರಕೀಶ್ ರೆಡ್ಡಿ ನಿರೂಪಿಸಿದರು.