ಶಿಕ್ಷಕರು ಸಾಧಕರಿಗೆ ಮೆಟ್ಟಿಲು, ಸಂಸ್ಕಾರದ ತೊಟ್ಟಿಲು : ಶಿವಲಿಂಗ ಸಿದ್ನಾಳ
Teachers are stepping stones for achievers, cradle of culture: Shivalinga Sidnal
ಮಹಾಲಿಂಗಪುರ 21: ಶಿಕ್ಷಕರಾದವರು ಹತ್ತುವವರಿಗೆ ಏಣಿಯಾಗಿ, ಸಾಧಕರಿಗೆ ಮೆಟ್ಟಿಲಾಗಿ, ಸಂಸ್ಕಾರದ ತೊಟ್ಟಿಲಾಗಿ ಸೇವೆ ಸಲ್ಲಿಸುವ ಸಾರ್ಥಕ ಜೀವಿಗಳು ಎಂದು ಮಹಾಲಿಂಗಪುರ ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸಮೀಪದ ನಾಗರಾಳ ಗ್ರಾಮದ ವೀರಭದ್ರೇಶ್ವರ ಗುಡಿ ತೋಟ ನಂ-1 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸರಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು. ಕಿರಿಯ ಪ್ರಾಥಮಿಕ ಶಾಲೆಯಾದರೂ ನಾಗರಾಳ ತೋಟ ನಂ-1 ಶಾಲೆಯ ಸಾಧನೆ ಹಿರಿದಾದುದು. ಇಲ್ಲಿ ಕಲಿತ ಮಕ್ಕಳೆಲ್ಲಾ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಾವಂತರಾಗಿ ಸಮಾಜ ಬೆಳಗುತ್ತಿದ್ದಾರೆ. ಈ ಶಾಲೆಯ ಹೆಗ್ಗಳಿಕೆ ಉಳಿಸಲು ಎಸ್‌ಡಿಎಂಸಿ ಮತ್ತು ಊರ ಜನ ಶಾಲಾ ವಾಹನ ವ್ಯವಸ್ಥೆ ಮಾಡಿ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು ಎಂದರು.
ನಾಗರಾಳ ಗ್ರಾಪಂ ಪಿಡಿಒ ರಂಜಿತಾ ಹತ್ತಿ ಮಾತನಾಡಿ, ಈ ತೋಟದ ಶಾಲೆಯ ಅಭಿವೃದ್ದಿಗೆ ಪೂರಕವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ರಮೇಶ ಕಂಕಣವಾಡಿ, ಮಹಮದರಫೀಕ್ ನದಾಫ, ಲಕ್ಷ್ಮಣ ಚನ್ನಾಪೂರ, ಮಂಜು ಅಮೋಜಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಶಿಕ್ಷಕರು ಮಾತನಾಡಿ, ನಮ್ಮ ಸಮರಾ್ಣ ಮನೋಭಾವದ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ. ಈ ಅಭಿನಂದನಾ ಸಮಾರಂಭದಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದರು.
ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಶಿಕ್ಷಣ ಪ್ರೇಮಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರಿಗೆ ರಮೇಶ ಕಂಕಣವಾಡಿ ವಿರಚಿತ ಮೌನದೊಳಗಿನ ಆಲಾಪ ಮತ್ತು ಹೃದಯದ ಹೂಬಾಣಗಳು ಪುಸ್ತಕ ನೀಡಿ ಗೌರವಿಸಲಾಯಿತು. ಮಕ್ಕಳು, ಪಾಲಕರು, ಶಿಕ್ಷಕರು ಮತ್ತು ಅತಿಥಿಗಳು ಗ್ರುಪ್ ಫೋಟೋ ಮತ್ತು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಎಲ್ಲರೂ ಮೈಸೂರ್ ಪಾಕ್, ಗಾಲಿ ಜಾಮೂನ್, ಸ್ಯಾವಿಗೆ ಪಾಯಸಾ ಮತ್ತು ಮಸಾಲೆ ರೈಸ್ ಭೋಜನ ಸವಿದರು.
ಎಸ್‌ಡಿಎಂಸಿ ಅಧ್ಯಕ್ಷ ಬಾಳೇಶ ಮಾಯಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷ ದುಂಡಪ್ಪ ಜಾಧವ, ಎಸ್‌ಡಿಎಂಸಿ ನಿಕಟಪೂರ್ವ ಅದ್ಯಕ್ಷ ಶ್ರೀಶೈಲ ತೇಲಿ, ಗ್ರಾಪಂ ಸದಸ್ಯ ಮಲ್ಲು ಜಗದಾಳ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ದುಂಡಪ್ಪ ಜಾಧವ, ಶಿಕ್ಷಣಪ್ರೇಮಿ ಮಹಾದೇವ ನ್ಯಾಮಗೌಡರ, ಬೆಳಗಲಿ ಮಾಜಿ ಸಿಆರ್‌ಪಿ ಮಲ್ಲಿಕಾರ್ಜುನ್ ಅರಬಿ, ಜಯಪ್ರಕಾಶ ಆನೂರ, ಶೈಲಾ ನೂಲಿ, ಮಾಲಾಶ್ರೀ ಜಗದಾಳ, ಸಹನಾ ತೇಲಿ ಮತ್ತು ಪಾಲಕರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 