ಲೋಕದರ್ಶನವರದಿ
ಹುನಗುಂದ: ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುವ ಕಾವಿ ತೊಟ್ಟಿರುವ ಮಠಾಧೀಶರಕ್ಕಿಂತ ಗುರುವಿನ ಸ್ಥಾನದಲ್ಲಿರುವ ಶಿಕ್ಷಕರು ಪವಿತ್ರರು ಎಂದು ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಶ್ರೀ ಹೇಳಿದರು.
ಸಮೀಪದ ಕಮತಗಿ ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಯೋಗಿನಿದೇವಿ ಆರ್. ಪಾಟೀಲ ಗ್ರಾಮೀಣ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ದೀಪದಾನ ಸಮಾರಂಭದ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರಾದವರು ಮತ್ತು ಶಿಕ್ಷಣ ಕೋಸರ್್ಗಳನ್ನು ಅಧ್ಯಯನ ಮಾಡಿ ಭಾವಿ ಶಿಕ್ಷಕರಾಗುವವರು ನಾವು ವಿದ್ಯಾವಂತರು ಎಂಬ ಅಹಂಕಾರದಿಂದ ಬೀಗದೇ ಬಹಳಷ್ಟು ವಿನಯತೆ, ನೈತಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಮಾತ್ರ ಉತ್ತಮವಾದ ಸಮಾಜವನ್ನು ನಿಮರ್ಿಸಲು ನಿಮ್ಮಿಂದ ಸಾಧ್ಯವಾಗುತ್ತದೆ.
ಜ್ಞಾನಕ್ಕೆ ವಿನಯಬೇಕು, ವಿನಯವಂತರಿಗೆ ಜ್ಞಾನ ಫಲ ನೀಡುತ್ತದೆ. ಪಡೆದುಕೊಂಡ ಜ್ಞಾನವನ್ನು ಸಮರ್ಪ ಕವಾಗಿ ಸಮಾಜಕ್ಕೆ ಹಂಚಿಕೆಯಾಗಬೇಕು ಅಂದಾಗ ಮಾತ್ರ ಅದಕ್ಕೊಂದು ಸಾರ್ಥಕತೆ ಬರುತ್ತದೆ ಎಂದರು.
ಮಕ್ಕಳು ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ಮಾಡದೇ ಅವರಿಗೆ ನೀವು ನೀಡುವ ಶಿಕ್ಷಣವು ಆತ್ಮವಿಶ್ವಾಸ ಮೂಡಿಸುವಂತಿರಬೇಕು.
ಸಮಾಜದಲ್ಲಿ ನಿತ್ಯ ತಾಂಡವಾಡುತ್ತಿರುವ ಭಷ್ಟಾಚಾರ, ಅನೀತಿ, ಅಧರ್ಮಗಳನ್ನು ಹೊಡೆದು ಹಾಕಬೇಕಾದರೆ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ಬೋಧಿಸಬೇಕು. ಅವರಲ್ಲಿ ದೇಶದ ಪರಂಪರೆ, ಇತಿಹಾಸ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ವಿಜಯಪುರ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪಿ.ಜಿ.ತಡಸದ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಗಳು ಆಗುತ್ತಿವೆ.
ಭಾವಿಶಿಕ್ಷಕರು ಕ್ಷಣ ಕ್ಷಣದ ಬದಲಾವಣೆಗಳನ್ನು ಗಮನಿಸಿ ಅವುಗಳಿಗೆ ಹೊಂದಿಕೊಂಡು ಮುನ್ನಡೆಯುವ ಛಲಗಾರಿಕೆ ಬೆಳೆಸಿಕೊಳ್ಳಬೇಕು.
ಮಕ್ಕಳಿಗೆ ಜ್ಞಾನವನ್ನು ಅಹಂಕಾರದಿಂದ ನೀಡದೇ ಪ್ರಾಂಜಲ ಮನಸ್ಸಿನಿಂದ ಧಾರೆ ಎರೆಯಬೇಕು, ಅಧ್ಯನಶೀಲರಾಗಿ, ಬೋಧನಾ ಶೈಲಿಯನ್ನು ವಿಶಿಷ್ಟವಾಗಿ ಕಟ್ಟಿಕೊಳ್ಳಬೇಕು ಎಂದರು.
ಸಿಕ್ಕ ಅವಕಾಶ ಸದುಪಯೋಗ ಮಡಿಕೊಳ್ಳಬೇಕು. ಮಕ್ಕಳ ಪ್ರಶ್ನೆಗಳನ್ನು ಎದುರಿಸುವ ನಿಟ್ಟಿನಲ್ಲಿ ಸಮರ್ಥರಾಗಬೇಕು, ಸವಾಲುಗಳನ್ನು ಛಲದಿಂದ ಮೆಟ್ಟಿ ನಿಲ್ಲಬೇಕು ಎಂದರು.
ಕಮತಗಿ-ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಗಂಗಮ್ಮ ಗೌಡರ, ಕಾರ್ಯದಶರ್ಿ ಬಸವರಾಜ ಕುಮಚಗಿ, ಸಹ ಕಾರ್ಯದಶರ್ಿ ವಿದ್ಯಾಧರ ಮಳ್ಳಿ, ಪ್ರಾಚಾರ್ಯ ಡಾ.ಎಸ್.ಎಂ. ರೆಡ್ಡಿ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎ.ಎಚ್.ಮಲಘಾಣ, ವಿದ್ಯಾಥರ್ಿ ಒಕ್ಕೂಟದ ವಿಜಯಲಕ್ಷ್ಮೀ ದ್ಯಾವಣ್ಣವರ, ಅಕ್ಷತಾ ಈಳಗೇರ ವೇದಿಕೆಯಲ್ಲಿದ್ದರು.
ವಾಷರ್ಿಕ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾಥರ್ಿಗಳಾದ ಸೌಮ್ಯ ದೇಸಾಯಿ, ಅಶ್ವಿನಿ ಅರವಟ ಗಿಮಠ, ಆಯಿಷಾ ಸೂಳೀಭಾವಿ, ಬಾಲಕಿಯರ ವಿಭಾಗದ ಕುಸ್ತಿ ಸ್ಪಧರ್ೆಯಲ್ಲಿ ಕನರ್ಾಟಕ ಪ್ರತಿನಿಧಿಸಿ ಹುಚ್ಚೇ ಶ್ವರ ಪ್ರಾಥಮಿಕ ಶಾಲೆಯ ವಿದ್ಯಾಥರ್ಿನಿ ಲಕ್ಷ್ಮೀ ಹಡಪದ ಅವರಿಗೆ ಈ ಸಂದರ್ಭದಲ್ಲಿ ಸನ್ಮಾಸಲಾಯಿತು