ಮಕ್ಕಳ ಕಲಿಕೆ ಸರಳಗೊಳಿಸಲು ಶಿಕ್ಷಕರ ತರಬೇತಿ ಕಾರ್ಯಾಗಾರ : ಶಶಿಕಲಾ ಬಸವರಡ್ಡಿ

ಮಕ್ಕಳ ಕಲಿಕೆ ಸರಳಗೊಳಿಸಲು ಶಿಕ್ಷಕರ ತರಬೇತಿ ಕಾರ್ಯಾಗಾರ : ಶಶಿಕಲಾ ಬಸವರಡ್ಡಿ Teacher training workshop to simplify children's learning: Sasikala Basavaraddi

ಲೋಕದರ್ಶನ ವರದಿ

ಧಾರವಾಡ 18 : ಶಿಕ್ಷಕರ ತರಬೇತಿ ಕಾರ್ಯಾಗಾರ ಮತ್ತು ಮಕ್ಕಳ ಕಲಿಕೆ ಸರಳಗೊಳಿಸಲು ಶಿಕ್ಷಕರಿಗೆ ತರಬೇತಿ ಅಗತ್ಯವಾಗಿದೆ. ಇಂತಹ ತರಬೇತಿಯನ್ನು ಶಿಕ್ಷಕರು ನಿರ್ಲಕ್ಷಿಸದೇ ಸದ್ಭಳಕೆ ಮಾಡಿಕೊಳ್ಳಬೇಕೆಂದು ಬಸವರಡ್ಡಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಚಾರ‌್ಯರಾದ ಶಶಿಕಲಾ ಬಸವರಡ್ಡಿ ಅಭಿಪ್ರಾಯಪಟ್ಟರು. ಅವರು ಸ್ಥಳಿಯ ಬಸವರಡ್ಡಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶಾರದಾ ಸಿ.ಬಿ.ಎಸ್‌.ಇ. ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

ಶಿಕ್ಷಕರು ತಮ್ಮಜ್ಞಾನ ಹಾಗೂ ಕೌಶಲ್ಯ ವೃದ್ಧಿಸಿಕೊಂಡು ಪ್ರಯೋಗಶೀಲಗುಣದೊಂದಿಗೆ ಪಾಠ ಬೋಧನೆ ಮಾಡಬೇಕು.ಪಾಠ ಬೋಧನೆಗೆ ಮೊದಲು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು.ತರಬೇತಿಯ ವಿಷಯಗಳನ್ನು ವರ್ಗದಕೋಣೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕೆಂದರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣಒಡ್ಡೀನ ಮಾತನಾಡಿ, ಶಿಕ್ಷಣಕ್ಕಿಂತ ಶಿಕ್ಷಕರಿಗೆ ಇಂದು ಹೆಚ್ಚು ಬೆಲೆ ಇದೆ. ಶಿಕ್ಷಕ ಹೆಸರು ಚಿಕ್ಕದು ಆದರೆ ಜವಾಬ್ದಾರಿ ದೊಡ್ಡದು. ಶಿಕ್ಷಕರು ಶಿಕ್ಷಣ ಸಂಸ್ಥೆಗಳ ಬೆನ್ನೆಲಬು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರದೊಡ್ಡದು. ಹಾಗಾಗಿ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ವೃತ್ತಿಗೌರವ ಕಾಪಾಡಿಕೊಂಡು ಗುಣಾತ್ಮಕ ಶಿಕ್ಷಣ ನೀಡಬೇಕೆಂದು ಹೇಳಿದರು. 

ಸಂಪನ್ಮೂಲ ವ್ಯಕ್ತಿಗಳಾದ ವಾಯ್‌.ವಾಯ್‌. ಗಡ್ಡೆಣ್ಣವರ ‘ಮೌಲ್ಯಾಧಾರ ಶಿಕ್ಷಣ ಇಂದಿನ ಆದ್ಯತೆ’ ವಿಷಯ ಕುರಿತು ಉಪನ್ಯಾಸ ನೀಡಿ, ಗುಣಮಟ್ಟದ ಶಿಕ್ಷಣಕ್ಕೆ ಮೌಲ್ಯಗಳೇ ತಳಹದಿ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮೌಲ್ಯಶಿಕ್ಷಣ ಪರಿಣಾಮಕಾರಿ ಮಾಧ್ಯಮವಾಗಿದೆ. ಸೌಹಾರ್ದತೆ, ಸಭ್ಯನಡತೆ, ಹೊಣೆಗಾರಿಕೆ ಪ್ರಜಾಸತ್ತಾತ್ಮಕ ಚಿಂತನೆಗಳನ್ನು ಮೌಲ್ಯ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಿದೆ ಎಂದರು. ಮೇಘಾ ಅಂಚಲಕರ ಸ್ವಾಗತಿದರು. ಕವಿತಾ ನಿಲೇಕಣಿ ನಿರೂಪಿಸಿದರು. ಬಿಂದು ವಂದಿಸಿದರು. ಕವಿತಾ ನಿಲೇಕಣಿ ತರಬೇತಿ ಸಂಯೋಜಕರು.